ಮಾನ್ವಿ: ಪಟ್ಟಣದ ಪತ್ರಿಕಾಭವನದಲ್ಲಿ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾದ ಶಿವರಾಜ ಉಮಳಿಹೊಸೂರು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಛಲವಾದಿ ಮಹಾಸಭಾ ರಾಜ್ಯ ಘಟಕವು 5 ಸಾವಿರ ಅಜೀವ ಸದಸ್ಯರನ್ನು ಒಳಗೊಂಡಿರುವ ಬೃಹತ್ ಸಂಘಟನೆಯಾಗಿದು ಸೇ.20 ರಂದು ಬೆಂಗಳೂರಿನ ದೊಡ್ಡಬಸ್ತಿಯಲ್ಲಿ ನೂತನ ರಾಜ್ಯ ಕಚೇರಿ ಉದ್ಘಾಟನೆ ಹಾಗೂ 2026-27 ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ರಾಜ್ಯ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರಾದ ವಾಣಿ ಶಿವರಾಮ ನೇತೃತ್ವದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಸಭೆಗೆ ಆಗಮಿಸಬೇಕು ಮುಂದಿನ ದಿನಗಳಲ್ಲಿ ತಾಲೂಕು ಘಟಕದಿಂದ ತಾಲೂಕಿನಲ್ಲಿನ ಛಲವಾದಿ ಸಮುದಾಯದವರನ್ನು ಸಂಘಟಿಸಿ ಮಾನ್ವಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳ್ಳಿಯನ್ನು ಕೂಡಿಸುವುದಕ್ಕೆ ಅಗತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು ಹನುಮಂತ ಜಾನೇಕಲ್, ಮುಕ್ಕಣ್ಣ ಬೈಲ್ ಮಾರ್ಚಡ್,ತಿಪ್ಪಣ್ಣ ಜಾನೇಕಲ್, ಬಸಪ್ಪ ನಂದಿಹಾಳ್, ಮಲ್ಲಿಕಾರ್ಜುನ , ಹನುಮಂತ ನಂದಿಹಾಳ್, ಕಾಶಿನಾಥ ಕುರ್ಡಿ, ಆನ್ನಮಯ್ಯ ಜಾನೇಕಲ್, ತಾಯಣ್ಣ,ಬಸವರಾಜ್, ಪರಶುರಾಮ್, ಬಸವಲಿಂಗ,ಅಂಜಿನೇಯ್ಯ,ರೇಣುಕಾರಾಜ್,ಬಂಡೆಗುರು, ಗುರು ಬೊಮ್ಮನಾಳ್ ಇದ್ದರು.
ವರದಿ :ಆಂಜನೇಯ ನಸಲಾಪುರ


