LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸೆ. 19 ರಿಂದ ಶ್ರೀ ಜಗನ್ನಾಥದಾಸರ 217 ನೇ ಆರಾಧನಾ ಮಹೋತ್ಸವ

Advertisement

ಮಾನ್ವಿ: ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ಶ್ರೀ ಜಗನ್ನಾಥದಾಸರ 217 ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಜಗನ್ನಾಥದಾಸರ ಸನ್ನಿಧಾನದ ಅರ್ಚಕರಾದ ಪ್ರಹ್ಲಾದ್ ಆಚಾರ್ ರವರು ಶ್ರೀ ಜಗನ್ನಾಥದಾಸರ ತಂಬೂರಿಯೊಂದಿಗೆ ಗೋಪಾಳಂ ಸೇವೆಯ ಅಂಗವಾಗಿ ಭಕ್ತರ ಮನೆ, ಮನೆಗೆ ತೆರಳಿ ಫಲಮಂತ್ರಕ್ಷತೆಯನ್ನು ನೀಡಿ ಭಕ್ತರು ನೀಡುವ ಕಾಣಿಕೆಗಳನ್ನು ಸ್ವೀಕರಿಸಿದರು  ಶ್ರೀ   ಪಟ್ಟಣದ ವಿವಿಧ ವಾರ್ಡಗಳಲ್ಲಿ ಪವಾಮಾನ  ಭಜನ ಮಂಡಳಿಯವರು ಭಜನೆ ಪದಗಳನ್ನು ಹಾಡಿದರು. 
ಶ್ರೀ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ಶ್ರೀ ಜಗನ್ನಾಥದಾಸರ 217 ನೇ ಆರಾಧನಾ ಮಹೋತ್ಸವದ ಅಂಗವಾಗಿ  ಸೆ.18 ರಂದು ಸಂಜೆ 5ಕ್ಕೆ ಗೋಪೂಜೆ, ಧ್ವಜಾರೋಹಣ, ಲಕ್ಷ್ಮೀ ಪೂಜೆ, ದಾನ್ಯಪೂಜೆ ಸ್ವಸ್ಥಿವಾಚನ,  ಮಹಾಮಂಗಳಾರತಿ. ನೆರವೇರಲಿದ್ದು.  ಮೂರು ದಿನಗಳ ಆರಾಧನೆಯ ಅಂಗವಾಗಿ ಬೆಳಿಗ್ಗೆ ಸುಪ್ರಭಾತ, ಸಾಮೂಹಿಕ ಹರಿಕಾಥಾಮೃತಸಾರ, ಪಾರಾಯಣ, ಅಷ್ಟೋತ್ತರ ಸಹಿತ ಫಲಪಂಚಾಮೃತ, ವಿವಿಧ ವಿದ್ವಾಂಸರರಿಂದ ಉಪನ್ಯಾಸ , ಅಲಂಕಾರ, ಹಸ್ತೋದಕ,ತಿರ್ಥ ಪ್ರಸಾದ, ಸಂಜೆ ವಿವಿಧ ವಿದ್ವಾಂಸರಿಂದ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ, ಸೆ. 19 ರಂದು ಪೂರ್ವರಾಧನೆ ಅಂಗವಾಗಿ ಸಂಜೆ 7.30 ಕ್ಕೆ ಪಲ್ಲಕ್ಕಿ ಉತ್ಸವ , ಸ್ವಸ್ಥಿವಾಚನ, ಮಹಾಮಂಗಳಾರತಿ. ಸೇ.20 ರಂದು ಮಧ್ಯರಾಧನೆ ಅಂಗವಾಗಿ ಸಂಜೆ 7.30 ಕ್ಕೆ  ದಶಮಿದಿಂಡು ಉತ್ಸವ, ಸ್ವಸ್ಥಿವಾಚನ, ಮಹಾಮಂಗಳಾರತಿ. ಸೆ.21 ರಂದು ಉತ್ತರಾರಾಧನೆ ಅಂಗವಾಗಿ ಬೆಳಿಗ್ಗೆ9ಕ್ಕೆ ಮಹಾರಾಥೋತ್ಸವ, ಸ್ವಸ್ಥಿವಾಚನ,ಮಹಾಮಂಗಳಾರತಿ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಜಗನ್ನಾಥದಾಸರ ಸನ್ನಿಧಾನದ ವ್ಯವಸ್ಥಾಪಕರಾದ ಶ್ರೀನಿವಾಸರಾವ್ ಕೋರಲ್ಲಳ್ಳಿ ಮಾಹಿತಿ ನೀಡಿದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST