LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕಲ್ಯಾಣ ಕರ್ನಾಟಕ ವಿಜಯೋತ್ಸವ

Advertisement

ಮಾನ್ವಿ: ಪಟ್ಟಣದ ಟೌನ್ ಹಾಲ್‌ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಘಟಕದಿಂದ ನಡೆದ ಕಲ್ಯಾಣ ಕರ್ನಾಟಕ ವಿಜಯೋತ್ಸವ ಕಾರ್ಯಕ್ರಮವನ್ನು ಸರ್ದಾರ್ ವಲ್ಲಭ ಬಾಯ್ ಪಟೇಲ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಉದ್ಘಾಟಿಸಿ ಕೆ.ಆರ್.ಎಸ್.ಪಕ್ಷದ ರಾಜ್ಯಧ್ಯಕ್ಷರಾದ ದೀಪಕ್ ಸಿ.ಎನ್. ಮಾತನಾಡಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕಳೆದ 8 ವರ್ಷಗಳಿಂದ ರಾಜ್ಯದ ಜನರಿಗೆ ಪ್ರಶ್ನೆ ಮಾಡುವುದನ್ನು ಮಾತ್ರ ಹೇಳಿಕೊಟ್ಟಿದ್ದೇವೆ ಇಂದು ಜನರು ಧೈರ್ಯವಾಗಿ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರಕಾರದ ಆಡಳಿತದ ಜೊತೆಗೆ ಅಕ್ರಮ ಮರಳುಗಾರಿಕೆ ,ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ನಮ್ಮನು ಆಳುತ್ತಿದ್ದಾರೆ. ರಾಜ್ಯದಲ್ಲಿನ ಭ್ರಷ್ಟಚಾರ ,ಅಪೌಷ್ಟಿಕತೆ.ನಿರುದ್ಯೋಗ, ಇವುಗಳು ಸಮಾಜಿಕ ಸಮಾನತೆಗೆ ದೊಡ್ಡ ವಿರೋಧವಾಗಿವೆ. ಕೆ.ಆರ್.ಎಸ್.ಪಕ್ಷದ ಪೇಸ್‌ಬುಕ್ ಅಭಿಯಾನ ಜನರಲ್ಲಿ ಧೈರ್ಯ ಮೂಡಿಸಿದೆ ಹೈದ್ರಾಬಾದ್ ಕರ್ನಾಟಕ ವಿಮೋಚನೆಯಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಜೊತೆಗೆ ಸ್ವಾಮಿ ರಮಾನಂದ ತೀರ್ಥರು ಈ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟಿಸಿದರು ಸ್ವಾತಂತ್ರ್ಯ ಹಾಗೂ ನಿಜಾಮರಿಂದ ವಿಮೋಚನೆಯ ನಂತರ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು 1956 ರಲ್ಲಿ ಕನ್ನಡಿಗರ ಏಕೀಕರಣದ ಮೂಲಕ ಕರ್ನಾಟಕ ರಾಜ್ಯವನ್ನು ಕಟ್ಟಲಾಯಿತು. ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಕಲಂ ಮೀಸಲಾತಿಯನ್ನು 13 ವರ್ಷಗಳ ಕೆಳಗೆ ನೀಡಲಾಯಿತು ಆದರೆ ರಾಜ್ಯ ಸರಕಾರ ನೇಮಕಾತಿ ಕೈಗೊಳ್ಳದೆ  ಇರುವುದರಿಂದ ಈ ಭಾಗದ ಜನರಿಗೆ ಯಾವುದೆ ಪ್ರಯೋಜನೆಯಾಗಲಿಲ್ಲ ರಾಜ್ಯ ಸರಕಾರದಲ್ಲಿ ಅನುದಾನದ ಕೊರತೆ ಇಲ್ಲ ಆದರೆ ಈ ಭಾಗದ ಅಭಿವೃದ್ದಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಿಲ್ಲ, ಕೃಷಿಗೆ ಅಗತ್ಯ ಭೂಮಿ ಇಲ್ಲದೆ ಇರುವುದರಿಂದ ರೈತರು ವಲಸೆ ಹೋಗುವುದು ತಪ್ಪುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿ ಕೆ.ಆರ್.ಎಸ್. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾತ್ರ ರಾಜ್ಯದಲ್ಲಿ ಅಭಿವೃದ್ದಿ ಮಾಡುವುದಕ್ಕೆಸಾಧ್ಯವಾಗುತ್ತದೆ. ರಾಜ್ಯ ಸರಕಾರ ಸರಕಾರಿ ಆಸ್ಪತ್ರೆಗಳನ್ನು ಕೂಡ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗದೆ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ವಹಿಸುವುದಕ್ಕೆ ಮುಂದಾಗುತ್ತಿದೆ ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಕರೆ ನೀಡಿದರು.
ಕೆ.ಆರ್.ಎಸ್.ಪಕ್ಷದ ಕಾರ್ಯಕರ್ತರು ಸರ್ದಾರ್ ವಲ್ಲಬಾಯ್ ಪಟೇಲ್ ಭಾವಚಿತ್ರ ಮೆರವಣಿಗೆಯನ್ನು ಹಾಗೂ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ಬಸವವೃತ್ತ.ತಹಸೀಲ್ದಾರ್ ಕಚೇರಿ,ಸಿಮೆಂಟ್ ರಸ್ತೆ ಮೂಲಕ ಟೌನ್ ಹಾಲ್ ವರೆಗೆ ಬೃಹತ್ ಜಾಥವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸೋಮ ಸುಂದರ್,ರಾಜ್ಯ ರೈತ ಮೋರ್ಚ ಅಧ್ಯಕ್ಷರಾದ ಜೋಗನಹಳ್ಳಿ ಗುರುಮೂರ್ತಿ,ರಾಜ್ಯ ಎಸ್.ಸಿ.ಎಸ್.ಟಿ.ಮೋರ್ಚ ಅಧ್ಯಕ್ಷರಾದ ಗಣೇಶ, ರಾಜ್ಯ ಮಹಿಳಾ ಮೋರ್ಚ ಘಟಕದ ಅಧ್ಯಕ್ಷರಾದ ಗಂಗಮ್ಮ, ಬಸವಪ್ರಭು, ದ್ಯಾವಣ್ಣ ವಲ್ಕಂದಿನ್ನಿ, ಶಿವರಾಜ, ವಿಜಯಪಾಟೀಲ್, ವಿಜಯಪೋಳ್,  ಗಣೇಶ ,ಅಮೃತ್.ಜಗನ್ನಾಥ. ಶ್ರೀನಿವಾಸರೆಡ್ಡಿ, ಕಟ್ಟೆ ಬಸಪ್ಪ, ರಾಧಾ, ಪಂಪಾಪತಿ, ರಮೇಶನಾಯಕ, ವೆಂಕಟೇಶ,ಗಂಗಮ್ಮ,ಬಸವರಾಜಸ್ವಾಮಿ,ಸಾಬಣ್ಣ,ಕುಮಾರನಾಯಕ, ಅಲ್ಲಾಭಕ್ಷಿ,ಶರಣಪ್ಪ ಕವಿತಾಳ. ಸೇರಿದಂತೆ ಬಳ್ಳಾರಿ,ವಿಜಯನಗರ,ಕೊಪ್ಪಳ್ಳ,ರಾಯಚೂರು,ಬೀದರ್.ಕಲಬುರ್ಗಿ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST