LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Entertainment News

ʼರಾಮಾಯಣʼ ಕ್ರೇಜ್:‌ ಅಡ್ವಾನ್ಸ್‌ ಬುಕಿಂಗ್‌ನಲ್ಲೇ 100 ಕೋಟಿ ರೂ.ಗಳಿಕೆ 

Advertisement

ಮುಂಬೈ : ನಮಿತ್ ಮಲ್ಹೋತ್ರಾ (Namit Malhotra) ನಿರ್ಮಾಣದ ಹಾಗೂ ನಿತೀಶ್ ತಿವಾರಿ (Nitesh Tiwari) ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ: ಪಾರ್ಟ್ 1' ಚಿತ್ರ ನವೆಂಬರ್ 5ರಂದು ತೆರೆಕಾಣುತ್ತಿದ್ದು, ಬಿಡುಗಡೆಗೂ ಮುನ್ನವೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದೆ.

ಪ್ರದರ್ಶನಕ್ಕೂ ಮುನ್ನವೇ ಮುಂಗಡ ಬುಕಿಂಗ್ (Advance Booking) ಮೂಲಕ ಗ್ಲೋಬಲ್ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ರಾಮಾಯಣ ಹೊಸ ದಾಖಲೆ ಬರೆದಿದೆ.

ಭಾರತದಲ್ಲಿ ಈಗಾಗಲೇ 11 ಲಕ್ಷ ಟಿಕೆಟ್‌ಗಳ ಮುಂಗಡವಾಗಿ ಮಾರಾಟವಾಗಿದೆ. ಇದರ ಜತೆ ವಿಶ್ವದೆಲ್ಲೆಡೆಯೂ ʼರಾಮಾಯಣʼದ ಕ್ರೇಜ್‌ ಹೆಚ್ಚಾಗಿದೆ. ವರ್ಲ್ಡ್‌ ಸಿನಿಮಾ ಅಡ್ವಾನ್ಸ್‌ ಬುಕಿಂಗ್‌ನಲ್ಲೇ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ಉತ್ತರ ಅಮೆರಿಕದಲ್ಲಿ (North America) 'ರಾಮಾಯಣ' ಚಿತ್ರಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನವೆಂಬರ್ 4ರಂದು ನಡೆಯಲಿರುವ ಪೇಡ್ ಪ್ರಿವ್ಯೂ (Paid Previews) ಪ್ರದರ್ಶನಗಳಿಗೆ ಈಗಾಗಲೇ 50,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. 

ಈ ಮೂಲಕ ಭಾರತೀಯ ಚಿತ್ರರಂಗದ ಪ್ರಮುಖ 7 ಬ್ಲಾಕ್‌ಬಸ್ಟರ್ ಸಿನಿಮಾಗಳ ಉತ್ತರ ಅಮೆರಿಕದ ಪ್ರಿಮಿಯರ್ ಟಿಕೆಟ್ ಮುಂಗಡ ಬುಕಿಂಗ್ ದಾಖಲೆಯನ್ನು 'ರಾಮಾಯಣ' ಹಿಂದಿಕ್ಕಿದೆ.

ಪ್ರಸ್ತುತ ಅಮೆರಿಕದಲ್ಲಿ 'ಧುರಂಧರ್ 2' ಚಿತ್ರ ಹೊಂದಿದ್ದ 52,000 ಟಿಕೆಟ್‌ಗಳ ದಾಖಲೆಯನ್ನು ಸರಿಗಟ್ಟಲು ರಾಮಾಯಣ ಕೇವಲ ಕೆಲವೇ ಹೆಜ್ಜೆಗಳ ಅಂತರದಲ್ಲಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕಾಗಿ ₹22,400 ಕೋಟಿ ಕೊಡಿ : ಕೇಂದ್ರಕ್ಕೆ ಮತ್ತೆ ಪತ್ರ ಬರೆದ ಜಿ. ಪರಮೇಶ್ವರ್ಮೈದಾನದಲ್ಲೇ ದುರಂತ: ಗೋಲ್‌ಕೀಪರ್ ಡಿಕ್ಕಿಯಾಗಿ ಆಟಗಾರ ಸಾವುಮಾನ್ವಿ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ದಾಖಲೆಮಾನ್ವಿ ಪಟ್ಟಣದ ಕುಡಿಯುವ ನೀರಿನ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್. ಬೋಸರಾಜುಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ ಆರ್ಯವೈಶ್ಯ ಸಂಘದಿಂದ 2 ಲಕ್ಷ ಸಹಾಯಧನಗೋಕಾಕನಲ್ಲಿ ಮಹಿಳೆ ಕೊಲೆ ಆರೋಪ: ಪ್ರಿಯಕರನ ವಿರುದ್ಧ ಎಫ್‌ಐಆರ್ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ:  ಕೆ.ಎನ್.ರಾಜಣ್ಣ ಕೆ. ವಿ. ಅನಿಸ್ ಅಮೋಘ ಶತಕ : ಇನ್ನಿಂಗ್ಸ್ ಗೆಲುವಿನತ್ತ ಕರ್ನಾಟಕ ಚಿತ್ತ ವೈಭವ್ ಸೂರ್ಯವಂಸಿ, ರಜತ ಪಟಿದಾರ್ ಗೆ ಸ್ಥಾನ ರಿಂಗ್ ರೋಡ್ ಬೇಡ, ಪಾಣಂದ್ ರಸ್ತೆಗಳನ್ನು ದುರಸ್ತಿ ಮಾಡಿ - ಸದಲಗಾ ಭಾಗದ ರೈತರ ಏಕಮುಖ ಬೇಡಿಕೆ