LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಡಗರ ಸಂಭ್ರಮದ ರಂಜಾನ್ ಆಚರಣೆ

Advertisement
ಯರಗಟ್ಟಿ: ಸಕಲ ಜೀವರಾಶಿಗಳನ್ನು ಪ್ರೀತಿಸುತ್ತ ದಯೆ,ಕರುಣೆ ಹೊಂದಿ ಯಾರ ಕೇಡನ್ನು ಬಯಸದೆ ಇರುವುದು ನಿಜವಾದ ಮನುಷ್ಯ ಧರ್ಮವಾಗಿದೆ ಎಂದು ಧರ್ಮ ಗುರುಗಳಾದ ಮೌಲಾನಾ ಮುಫ್ತಿ ಮಾಸೂಮ ಹೇಳಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಅಂಜುಮನ ಕಮಿಟಿ ನೇತೃತ್ವದಲ್ಲಿ ಹಾಗೂ ವಿವಿಧ ಕಮಿಟಿಗಳ ಸಹಕಾರದಲ್ಲಿ ಪವಿತ್ರ ರಂಜಾನ್ ಹಬ್ಬದ ಈದುಲ್ ಫಿತರನ ಸಾಮೂಹಿಕ ಪ್ರಾರ್ಥನೆಗೆ ಸೇರಿದ ಸರ್ವ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರೋಪಕಾರ, ಸಮಾನತೆ ಮತ್ತು ಸೌಹಾರ್ದತೆಯ ಧರ್ಮದ ನಿಜತೆಯನ್ನು ಅರಿತು ದ್ವೇಷ, ಅಸೂಯೆ ಬಿಟ್ಟು ಪರಸ್ಪರರು ಅನ್ಯೋನ್ಯತೆ ಹೊಂದಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಎಂದು ಹಿತ ವಚನ ಹೇಳಿದರು.



ಸಾಮೂಹಿಕ ಪ್ರಾರ್ಥನೆ ಬಳಿಕ ಪರಸ್ಪರರು ಸಡಗರ ಸಂಭ್ರಮದಿಂದ ರಂಜಾನ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಈ ವೇಳೆ ಸವದತ್ತಿ ಜನಪ್ರೀಯ ವಿಶ್ವಾಸ ವೈದ್ಯ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ಕಳುಹಿಸಿದ ಸಂದೇಶ ಪತ್ರವನ್ನು ಪ. ಪಂ. ಸದಸ್ಯ ಸಲಿಂಬೇಗ ಜಮಾದಾರ ಅವರು ಓದಿ ಹೇಳಿದರು. ಮುಖಂಡರಾದ ಇಮ್ತಿಯಾಜ್ ಖಾದ್ರಿ ಅವರು ರಂಜಾನ ಹಬ್ಬದ ಪ್ರಾರ್ಥನೆಗಾಗಿ ಸಹಕರಿಸಿದ ಸಿಪಿಐ ಆಯ್ ಎಂ ಮಠಪತಿ, ಪಿಎಸ್ಐ ಎಲ್. ಬಿ. ಮಾಳಿ, ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಮತ್ತು ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ಹೇಳಿದರು.

[video width="848" height="478" mp4="http://bharathvaibhav.com/wp-content/uploads/2026/03/WhatsApp-Video-2026-03-21-at-6.03.07-PM.mp4"][/video]

ಈ ಸಂದರ್ಭದಲ್ಲಿ ಮುಸ್ಲಿಂ ಕಮಿಟಿಯ ಅಧ್ಯಕ್ಷ ಕಾಶೀಮ ಹೊರಟ್ಟಿ, ಮೌಲಾನಾ ಗುಲಾಮ ರಬ್ಬಾನಿ, ಹಾಫೀಜ್ ಲಿಯಾಖತ, ಹಾಫೀಜ್ ಅದ್ನಾನ, ಖೋದಾನಾಪುರ ಭೈಜಾನ, ಇಮಾಮಮಸಾಬ ಹುಸೇನನಾಯ್ಕರ, ರಫೀಕ್ ಡಿ ಕೆ, ಸುಬಾನಸಾಬ ಖಾಝಿ, ಹುಸೇನ ದಿಲಾವರನಾಯ್ಕ, ದಿಲಾವಾರಸಾಬ ಸಿಕ್ಕಲಗಿ, ರಾಜು ಗೋಕಾಕ,ಮುನ್ನಾ ಶಭಾಶಾಖಾನ, ಫಾರುಕ ಅತ್ತಾರ, ಮುಖದ್ದಾರ ನದಾಫ, ಸಿಕಂದರ ನದಾಫ, ಮಲೀಕ ಚಾoದಕಾನವರ, ಮಿಯಾಸಾಬ ಜಮಾದಾರ, ಆಬಿದ ಜಮಾದಾರ, ಗೋರೆಸಾಬ ಕರ್ನಾಚಿ, ದಿಲಾವರ್ಸಾಬ ಕರ್ನಾಚಿ, ನಜೀರ ನದಾಫ, ಪೈಗಂಬರ ನದಾಫ, ಆರೀಫ್ ಮುಲ್ಲಾ ಸೇರಿದಂತೆ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ: ಈರಣ್ಣಾ ಹೂಲ್ಲೂರ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ