Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೆಮ್ಮದಿಯ ಜೀವನಕ್ಕೆ ವಾತ್ಸಲ್ಯಮನೆ ಆಸರೆ: ರೋಹಿತಾಕ್ಷ

Advertisement
 

ಸಿರುಗುಪ್ಪ: ಅಸಹಾಯಕರ ಬಾಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬೆಳಕಾಗುತ್ತಿದೆ. ವಾತ್ಸಲ್ಯ ಮನೆ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ ಎಂದು ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.

ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದ ಫಲಾನುಭವಿ ಹೋಟೆಲ್‌ ನೀಲಮ್ಮ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ರೂ. 1,35,000/- ವೆಚ್ಚದಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಭಾನುವಾರ ಹಸ್ತಾಂತರ ಮಾಡಿ ಮಾತನಾಡಿದರು.



ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡ, ನಿರ್ಗತಿಕ ಮಹಿಳೆಯರ ಬದುಕಿನಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡುತ್ತಿದೆ. ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮುಖಾಂತರ ಮಹಿಳಾ ಸಬಲೀಕರಣಕ್ಕಾಗಿ ಮಾತೃಶ್ರೀ ಹೇಮಾವತಿ ಅಮ್ಮನವರು ಹಗಲಿರುಳು ಶ್ರಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸಮಾಜದಲ್ಲಿರುವ ಅತಿ ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬಗಳನ್ನು ಗುರುತಿಸಿ ಅವರ ಜೀವನ ನಿರ್ವಹಣೆಗೆ ಬೇಕಾದ ಮಾಸಾಶನ ಹಾಗೂ ಅಗತ್ಯಕ್ಕೆ ಅನುಕೂಲವಾಗುವಂತೆ ವಾತ್ಸಲ್ಯ ಕಿಟ್‌ಗಳನ್ನು ಕೊಡುವುದರೊಂದಿಗೆ ಸೂರು ಇಲ್ಲದವರಿಗೆ ಸ್ವಂತ ಸೂರು ನಿರ್ಮಾಣ ಮಾಡಿ ಕೊಡಲಾಗುತ್ತಿದೆ. ದುಸ್ಥಿತಿಯಲ್ಲಿ ಜೀವಿಸುತ್ತಿರುವ ಅಸಹಾಯಕ ಬಂಧುಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಜೀವಿತಾವಧಿಯ ಕೊನೆಯ ಕ್ಷಣದಲ್ಲಿ ನೆಮ್ಮದಿಯ ಜೀವನವನ್ನು ಕಲ್ಪಿಸುವುದು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯವಾಗಿದೆ, ಈವರೆಗೆ ರಾಜ್ಯಾದ್ಯಾಂತ 18,847 ಜನ ಫಲಾನುಭವಿಗಳು ಮಾಸಾಶನ ಪಡೆಯುತ್ತಿದ್ದು, ರಾಜ್ಯಾದ್ಯಾಂತ 726 ಹೊಸ ಮನೆ ರಚನೆ ಮಾಡಿದ್ದು 166 ಹಳೆ ಮನೆ ದುರಸ್ಥಿ ಮಾಡಲಾಗಿದೆ, ಮತ್ತು 238 ಜನರಿಗೆ ಶೌಚಾಲಯ, ಸ್ನಾನಗೃಹ ರಚನೆ ಮಾಡಿಕೊಡಲಾಗಿದೆ, 61 ಫಲಾನುಭವಿಗಳ ಮನೆಗಳಿಗೆ ಸೋಲಾರ್, ವಿದ್ಯುತ್, ನಲ್ಲಿ ನೀರಿನ ಅಳವಡಿಕೆ ಮಾಡಲಾಗಿದ್ದು, 2049 ಜನರಿಗೆ ವಾತ್ಸಲ್ಯ ಮಿಕ್ಸ್ ಆಹಾರ ಕಿಟ್ ವಿತರಣೆ ಮಾಡಲಾಗಿದೆ, 102 ಜನ ಮಕ್ಕಳಿಗೆ ವಾತ್ಸಲ್ಯ ವಿದ್ಯಾನಿಧಿ ಒದಗಣೆ ಮಾಡಲಾಗಿದ್ದು, 127 ವಾತ್ಸಲ್ಯ ಕುಟುಂಬದ ನೆರವಿಗೆ ಪೋಷಕರನ್ನು ನೇಮಿಸಿದ್ದು ಮತ್ತು ಆಹಾರ ಪೂರೈಕೆಗೆ ಕುಟುಂಬಗಳಿಗೆ 127 ಟಿಫಿನ್‌ ಬಾಕ್ಸ್‌ ವಿತರಿಸಲಾಗಿದೆ. ಈವರೆಗೆ ವಾತ್ಸಲ್ಯ ಕಾರ್ಯಕ್ರಮಕ್ಕಾಗಿ 11 ಕೋಟಿ 03 ಲಕ್ಷದ 88 ಸಾವಿರ ರೂಪಾಯಿ ವಿನಿಯೋಗಿಸಲಾಗಿದೆ ಎಂದು ಹೇಳಿದರು.

ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ಇರುವ ಕಡು ಬಡವರು, ನಿರ್ಗತಿಕರು, ಅಸಹಾಯಕರಿಗೆ ಸಹಾಯ ಮಾಡುವುದರ ಮೂಲಕ ಸೂರಿಲ್ಲದವರಿಗೆ ಸೂರು ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ ಇಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ಆಗಬೇಕಾದರೆ ಗ್ರಾಮದವರ ಸಹಕಾರವೂ ಅಗತ್ಯವಾಗಿರುತ್ತದೆ ಎಲ್ಲರ ಸಹಕಾರದಲ್ಲಿ ಉತ್ತಮ ಕೆಲಸಗಳು ಆಗಲು ಸಾಧ್ಯವಾಗುತ್ತದೆ ಎಂದರು.

ವಾತ್ಸಲ್ಯ ಫಲಾನುಭವಿ ಹೋಟೆಲ್‌ ನೀಲಮ್ಮ ಮಾತನಾಡಿ, ಕಳೆದ 10 ವರ್ಷಗಳಿಂದ ಮಳೆಗಾಲದಲ್ಲಿ ಮನೆ ಸೋರುತ್ತಿತ್ತು, ಗೋಡೆ ಕುಸಿಯುವ ಪರಿಸ್ಥಿತಿಯಲ್ಲಿತ್ತು, ಅದೇ ಮನೆಯಲ್ಲಿ ಜೀವ ಕಳೆಯುತ್ತಿದ್ದೆ, ನನ್ನ ಪರಿಸ್ಥಿತಿಯನ್ನು ನೋಡಿ ನನಗೆ ವಾತ್ಸಲ್ಯ ಮನೆ ನಿರ್ಮಿಸಿಕೊಟ್ಟರು, ನಮ್ಮಂತಹ ಅನೇಕ ಅನಾಥರ ಬಾಳಿಗೆ ಸೂರು ಕಲ್ಪಿಸಿಕೊಡುತ್ತಿರುವ ಧರ್ಮಸ್ಥಳದ ಪೂಜ್ಯ ದಂಪತಿಗಳಿಗೆ ಕೋಟಿ-ಕೋಟಿ ನಮನ ಸಲ್ಲಿಸುತ್ತೇನೆ ಎಂದು ಭಾವುಕರಾದರು.

ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುವರ್ಣಮ್ಮ, ತಾಲೂಕು ವಿಚಕ್ಷಣಾಧಿಕಾರಿ ರಾಕೇಶ,
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಿಯಾ, ಮೇಲ್ವಿಚಾರಕಿ ರಾಧಿಕಾ, ಸೇವಾಪ್ರತಿನಿಧಿ ಶಕುಂತಲಾ, ಊರಿನ ಗಣ್ಯರಾದ ವೆಂಕಟೇಶ, ಶ್ರೀಧರ, ಶ್ರೀನಿವಾರ, ಅರುಣ್ ಕುಮಾರ, ಮೌನೇಶ ಯಾದವ್ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತಾಲೂಕು ಕೃಷಿ ಮೇಲ್ವಿಚಾರಕ ವೀರೇಶ್‌ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ವರದಿ: ಶ್ರೀನಿವಾಸ ನಾಯ್ಕ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ