LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜಿಕೆಡಬ್ಲ್ಯೂ ಲೇಔಟದಲ್ಲಿ ಸ್ಯಾನಿಟರಿ ಕಾಮಗಾರಿಗೆ ಚಾಲನೆ :ಶಾಸಕ ಎಸ್ ಮುನಿರಾಜು

Advertisement
ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ಜಿಕೆಡಬ್ಲ್ಯೂ ಲೇಔಟ್ ವೃತ್ತದಲ್ಲಿ ಒಳಚರಂಡಿ ಕಾಮಗಾರಿಗೆ ಶಾಸಕ ಎಸ್ ಮುನಿರಾಜು ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ನಂತರ ಅವರು ಕ್ಷೇತ್ರದಲ್ಲಿ ಬಹುತೇಕ ಕಾಮಗಾರಿಗಳು ಚಾಲ್ತಿ ಇವೆ ಕೆಲವು ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ ಅದರಲ್ಲಿ ರಸ್ತೆ ಡಾಂಬರೀಕರಣ, ಶಾಲಾಕೊಠಡಿಗಳು, ಬಸ್ ತಂಗಾಣುಗಳು, ಮತ್ತು ಪಾರ್ಕ್ ಅಭಿವೃದ್ಧಿ ಹೀಗೆ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಿಂದೆ ಎರಡು ಬಾರಿ ಶಾಸಕನಾಗಿದ್ದಾಗ ಇಡೀ ದಾಸರಹಳ್ಳಿ ಕ್ಷೇತ್ರದಲ್ಲಿ ರಸ್ತೆ ಒಳಚರಂಡಿ ಉದ್ಯಾನವನ ಶಾಲೆ ಕೊಠಡಿಗಳು ಅಂಗನವಾಡಿ ನೀರಿನ ವ್ಯವಸ್ಥೆ, ಬೀದಿ ದೀಪಗಳು ಮತದಾರರು, ನಮ್ಮ ಮುಖಂಡರು ಹೇಳಿದ ಕೆಲಸ ಮಾಡಿದ್ದೇನೆ.



ಮತ್ತು ಮೂರನೇ ಬಾರಿಗೆ ನನ್ನ ಕ್ಷೇತ್ರದ ಮತದಾರರು ಶಾಸಕನಾಗಿ ಮಾಡಿದ್ದಾರೆ ಅವರ ಋಣ ತೀರಿಸಲು ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ ನಾನು ಸುಳ್ಳು ಹೇಳಿ ಕೊಂಡು ಐದು ವರ್ಷ ಕಾಲ ಕಳೆಯುವ ಶಾಸಕ ನಾನಲ್ಲಾ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕ ಎಸ್ ಮುನಿರಾಜು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳವಾಟರ್, ಮಾಜಿ ಅಧ್ಯಕ್ಷ ಹರೀಶ್, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡಿನ ಬಿಜೆಪಿ ಮುಖಂಡ ಮಂಡ್ಯ ರವಿ, ಜೆಡಿಎಸ್ ಹಿರಿಯ ಮುಖಂಡ ನಂಜುಂಡಪ್ಪ ಅವರ ಸುಪುತ್ರಿ ಪ್ರೇಮಾ ನಂಜುಂಡಪ್ಪ, ಗಂಗಣ್ಣ, ದಿನೇಶ್, ಕಂಪ್ಯೂಟರ್ ವಿಜಯ ಕುಮಾರ್, ಐಪಿನಗರದ ಯುವ ಮುಖಂಡ ಲೋಕೇಶ್ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ