LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜೂ.13 ರಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ  ಮಹಾರುದ್ರ ಕಿರಾತ ಮೂರ್ತಿ ಮಹಾಯಜ್ಞ - ಶಾಸಕ ಎಸ್ ಮುನಿರಾಜು

Advertisement
ಬೆಂಗಳೂರು: ಇದೇ ತಿಂಗಳ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ರೀಪ್ ಫೌಂಡೇಶನ್ ವತಿಯಿಂದ ಮಹಾರುದ್ರ ಕಿರಾತ ಮೂರ್ತಿ ಮಹಾಯಜ್ಞ ಕಾರ್ಯಕ್ರಮ ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಎಂಇಐ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಹಾಗೂ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾದ ಎಸ್. ಮುನಿರಾಜು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ನೂರಾರು ರಾಜಕಾರಣಿಗಳು,ಸಾಧು ಸಂತರು ಮಹಾಯಜ್ಞದಲ್ಲಿ ಭಾಗವಹಿಸಲಿದ್ದಾರೆ.
ರೈತರಿಗೆ,ರಾಷ್ಟ್ರಕ್ಕೆ ,ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಈ ಮಹಾ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಮುನಿರಾಜು ವಿವರಿಸಿದರು.



ಜೂ.13 ರಂದು ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು,14 ರಂದು ಮಹನೀಯ ಗಣ್ಯರು ಯಜ್ಞದಲ್ಲಿ ಪಾಲ್ಗೂಳಲ್ಲಿದ್ದಾರೆ.

ಮಹಾ ಯಜ್ಞದಲ್ಲಿ ವಿಶೇಷತೆ: 15 ರಂದು ಏಕ ವ್ಯಕ್ತಿ, ಉಪವಾಸದಲ್ಲಿ 24,008 ತೆಂಗಿನ ಕಾಯಿಗಳನ್ನು ನಿರಂತರವಾಗಿ ನೀರು ಕುಡಿಯದೆ, ವಿಶ್ರಾಂತಿ ತೆಗೆದುಕೊಳ್ಳದೆ 6 ಗಂಟೆಗಳ ಕಾಲ ಕಾಯಿ ಹೊಡೆಯಲಿದ್ದಾರೆ. ಅದು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿರುತ್ತದೆ. ನಗರದ ನಾಗರಿಕರು ಈ ಧರ್ಮ ಕಾರ್ಯದಲ್ಲಿ ಭಾಗವಹಿಸಬಹುದು.ತೆಂಗಿನಕಾಯಿ ಹೊಡೆಸುವವರು 101 ರೂ ಕಾಯಿಗೆ ನೀಡಬಹುದು' ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.

'ಪಾಂಡವ ಸಂಜಾತ ಅರ್ಜುನನ ಅಹಂಕಾರವನ್ನು ಒಡೆಯಲು ಭಗವಂತ ಶಿವ ಕಿರಾತನ ವೇಷದಲ್ಲಿ ಅರ್ಜುನನೊಂದಿಗೆ ಸೆಣಸಿ ಅವನನ್ನು ಸೋಲಿಸುವ ಮೂಲಕ ಗರ್ವಭಂಗ ಮಾಡಿ ನಂತರ ತನ್ನ ನಿಜರೂಪದಲ್ಲಿ ಅರ್ಜುನನಿಗೆ ಪಾಶುಪತಾಸ್ತ್ರ ನೀಡಿ ಹಾರೈಸುವ ಶಿವನ ಅವತಾರವೇ ಕಿರಾತ ಅವತಾರ ಎಂದು ಪುರಾಣ ಬಗ್ಗೆ ಹೇಳಿದ ರೀಪ್ ಫೌಂಡೇಶನ್ ನ ರಾಷ್ಟ್ರೀಯ ಅಧ್ಯಕ್ಷ ಗೋಪಿನಾಥ್ ವನ್ನೇರಿ,ದೇವರನಾಡು ಕೇರಳದಲ್ಲಿ ಕಿರಾತನ ಮೂರ್ತಿಯನ್ನು ಪೂಜಿಸಲಾಗುತ್ತದೆ.ಮಲಬಾರ್ ಪ್ರಾಂತ್ಯದಲ್ಲಿ ಹೆಚ್ಚಾಗಿ ಪೂಜಿಸಲ್ಪಡುವ ಕಿರಾತ ದೇವರಿಗೆ ಹನ್ನೆರಡು ವರ್ಷಕ್ಕೊಮ್ಮೆ ಆಚರಣೆ ಮಾಡಿ 12 ಸಾವಿರ ತೆಂಗಿನಕಾಯಿ ಹೊಡೆಯುವ ಮೂಲಕ ಪಂದಿರಾಯಿ ಆಚರಿಸಲಾಗುತ್ತದೆ.ನಾವೀಗ ಜೋಡಿ ಪಂದಿರಾಯಿ ಆಚರಿಸುವ ಮೂಲಕ 24 ಸಾವಿರದ 8 ಕಾಯಿಗಳನ್ನು ಹೊಡೆಯಲಾಗುತ್ತದೆ ಎಂದು ತಿಳಿಸಿದರು.

ಅಯ್ಯಪ್ಪ ಸ್ವಾಮಿಯಂತೆಯೇ ಕರ್ನಾಟಕದಲ್ಲಿ ಕಿರಾತ ಸ್ವಾಮಿ ದೇವರನ್ನು ಪ್ರಚುರ ಪಡಿಸುವುದಲ್ಲದೆ ಬೆಂಗಳೂರಿನಲ್ಲಿ ಕಿರಾತನ ಮೂರ್ತಿ ದೇವಾಲಯ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ವರದಿ: ಅಯ್ಯಣ್ಣ ಮಾಸ್ಟರ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ