LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗ್ರಾಮಗಳ ಉದ್ಧಾರ ನಮ್ಮ ಉದ್ದೇಶವಾಗಲಿ : ಪ್ರೊ.ಬಿ.ಎ.ಪಾಟೀಲ

Advertisement
ಕಾಗವಾಡ: ಮಹಾತ್ಮಾ ಗಾಂಧೀಜಿಯವರ ಕನಸಿನ ಕೂಸಾಗಿರುವ ರಾಷ್ಟಿçÃಯ ಸೇವಾ ಯೋಜನೆ ಕಳೆದ ೬ ದಶಕಗಳಿಂದ ದೇಶದ ಯುವಜನಾಂಗದಲ್ಲಿ ಸಾಮಾಜಿಕ ಸೇವೆಯ ಮೂಲಕ ಜನಜನಿತವಾಗಿದೆ ಎಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ-೧ ಮತ್ತು ೨ ರಡಿಯಲ್ಲಿ ದತ್ತು ಗ್ರಾಮವಾದ ಶೇಡಬಾಳ ರೇಲ್ವೆ ಸ್ಟೇಷನ್‌ದಲ್ಲಿ ಆಯೋಜಿಸಲಾಗಿದ್ದ ೭ ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಪ್ರೊ.ಬಿ.ಎ.ಪಾಟೀಲ ಹೇಳಿದರು. ಮುಂದುವರೆದು ನಮ್ಮ ದೇಶದಲ್ಲಿ ಗ್ರಾಮೀಣ ಅರ್ಥ ವ್ಯವಸ್ಥೆ ಕೃಷಿ ಪ್ರಧಾನವಾಗಿದ್ದು ಗ್ರಾಮಗಳ ಉದ್ಧಾರ ನಮ್ಮೆಲ್ಲರ ಮುಖ್ಯ ಉದ್ದೇಶವಾಗಬೇಕೆಂದು ಎನ್‌ಎಸ್‌ಎಸ್‌ನ ಯುವ ಸ್ವಯಂ ಸೇವಕ-ಸೇವಕಿಯರಿಗೆ ಕರೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ಮೇಜರ್ ವಿ.ಎಸ್.ತುಗಶೆಟ್ಟಿ ಮಾತನಾಡಿ ಎನ್‌ಎಸ್‌ಎಸ್ ಶಿಬಿರವು ಸೇವಾ ಮನೋಭಾವನೆ ಹೊಂದಿರುವ ಯುವ ಜನಾಂಗಕ್ಕೆ ಅಡಿಪಾಯವಿದ್ದಂತೆ ಎಂದು ಹೇಳಿದರು. ಗ್ರಾಮದ ಪ್ರಮುಖರಾದ ಜ್ಯೋತಗೌಡಾ ಪಾಟೀಲ ಮಾತನಾಡಿ ಎನ್‌ಎಸ್‌ಎಸ್ ಸ್ವಯಂ ಸೇವಕರು ಗ್ರಾಮೀಣ ಜನರಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಗ್ರಾಮದ ಇನ್ನೋರ್ವ ಮುಖಂಡರಾದ ಶೀತಲ ಹೇರ್ಲೆಕರ ನಮ್ಮ ಗ್ರಾಮದಲ್ಲಿ ಶಿವಾನಂದ ಮಹಾವಿದ್ಯಾಲಯವು ಎನ್‌ಎಸ್‌ಎಸ್ ವಿಶೇಷ ಶಿಬಿರ ಆಯೋಜಿಸುವ ಮೂಲಕ ಶ್ರಮದಾನ, ಜಾಗೃತಿ ಜಾಥಾ ಹಾಗೂ ೩೦೦ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕೈಗೊಂಡಿದ್ದು ನಿಜವಾಗಿಯೂ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಎಸ್.ಪಿ.ತಳವಾರ ಅವರು ಯುವಶಕ್ತಿ ಈ ದೇಶದ ನಿಜವಾದ ಶಕ್ತಿಯಾಗಿದ್ದು ಇಂತಹ ಶಿಬಿರಗಳ ಮೂಲಕ ಮತ್ತಷ್ಟು ಉತ್ಕೃಷ್ಟಗೊಳಿಸುವ ಮೂಲಕ ಗ್ರಾಮೀಣ ವ್ಯವಸ್ಥೆಯನ್ನು ವಿಕಾಸದ ಪಥಕ್ಕೆ ತೆಗೆದುಕೊಂಡು ಹೋಗಬೇಕಾದ ಹೊಣೆಗಾರಿಕೆ ಸ್ವಯಂ ಸೇವಕರ ಮೇಲಿದೆ ಎಂದರು. ಕಾರ್ಯಕ್ರಮದ ಅಧಿಕಾರಿಗಳಾದ ಡಾ.ಚಂದ್ರಶೇಖರ ವೈ ಹಾಗೂ ಪ್ರೊ.ಎ.ಎ.ಪಾಟೀಲ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಯಂ ಸೇವಕರಾದ ಕಾರ್ತಿಕ ಗುರವ ಮತ್ತು ಸಮೀಕ್ಷಾ ಸಲಗರೆ ಅವರಿಗೆ ಸನ್ಮಾನಿಸಲಾಯಿತು. ಸ್ವಯಂ ಸೇವಕರಾದ ರೋಹಣ ಪಡನಾಡ ಸ್ವಾಗತಿಸಿದರೆ ಸಮೀಕ್ಷಾ ಸಲಗರೆ ವಂದಿಸಿದರು. ಪ್ರೊ. ಎಸ್.ಎಸ್.ಫಡತರೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಜೆ.ಎನ್.ನಾಯಕ ಎನ್‌ಎಸ್‌ಎಸ್ ಗೀತೆಯನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಮರಾಠಿ ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಪಿ.ಪೋಳ ಸಮಾಜ ಸೇವಕರಾದ ವಿಶಾಲ ಗರಡೆ ಉಪಸ್ಥಿತರಿದ್ದರು. ನಂತರದಲ್ಲಿ ಸ್ವಯಂ ಸೇವಕರಿಂದ ಸಾಂಸ್ಕçತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಪ್ರಮುಖರು ಹಾಗೂ ಮಹಾವಿದ್ಯಾಲಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ಅಪಾರ ಸಂಖ್ಯೆಯ ಸ್ವಯಂ ಸೇವಕರು ಹಾಜರಿದ್ದರು.

ವರದಿ: ಚಂದ್ರಕಾಂತ ಕಾಂಬಳೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ