LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪಾವಗಡದಲ್ಲಿ ಮರಳು ಮಾಫಿಯಾ ಅಟ್ಟಹಾಸ

Advertisement
ಅಧಿಕಾರಿಗಳ ಕಣ್ಣೆದುರೇ ನದಿಗೆ ಕನ್ನ: ಪಿನಾಕಿನಿ ಮರಳು ಲೂಟಿ ಮಾಡುತ್ತಿರುವ 'ಮಹೇಂದ್ರ' ಮೃಗಗಳು!

ಪಾವಗಡ : ಶಾಂತಿ ಪ್ರಿಯ ಪಾವಗಡ ತಾಲೂಕಿನಲ್ಲಿ ಈಗ ಮರಳು ಮಾಫಿಯಾದ್ದೇ ಕಾರುಬಾರು.

ಕತ್ತಲಾಗುತ್ತಿದ್ದಂತೆ ಶುರುವಾಗುವ ಈ ಮರಳು ದಂದೆ, ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವವರೆಗೂ ಅವ್ಯಾಹತವಾಗಿ ಸಾಗುತ್ತಿದೆ. ಉತ್ತರ ಪಿನಾಕಿನಿ ನದಿಯ ಒಡಲನ್ನು ಬಗೆಯುತ್ತಿರುವ ಕಿರಾತಕರು, ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಸುಣ್ಣ ಬಳಿಯುತ್ತಿದ್ದಾರೆ.

​ಇಂದು ಮುಂಜಾನೆ 5:30ರ ಸುಮಾರಿಗೆ ಪಳವಳ್ಳಿ ರಸ್ತೆಯ ತಿಮ್ಮಾಪುರ ಗ್ರಾಮದಿಂದ ಪಾವಗಡ ಪಟ್ಟಣಕ್ಕೆ ಅಗ್ನಿಶಾಮಕ ದಳದ ಕಚೇರಿ ಮಾರ್ಗವಾಗಿ ಅಕ್ರಮ ಮರಳು ಹೊತ್ತ ಮಹೇಂದ್ರ ಟ್ರ್ಯಾಕ್ಟರ್ (ಸಂಖ್ಯೆ: KA 06 TC 8547) ರಾಜಾರೋಷವಾಗಿ ನುಗ್ಗಿದೆ.
​ಡ್ರೈವರ್ ಅತಿರೇಕ: ಒಂದು ಕೈಯಲ್ಲಿ ಸ್ಟೀರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್! ಸಾರ್ವಜನಿಕರ ಪ್ರಾಣದ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ಮೊಬೈಲ್‌ನಲ್ಲಿ ಮಾತನಾಡುತ್ತಲೇ ಮರಳು ಸಾಗಿಸುತ್ತಿದ್ದ ದೃಶ್ಯ ಮೈ ನಡುಗಿಸುವಂತಿತ್ತು.


​ ಅಧಿಕಾರಿಗಳೇ, ಇದು ನಿಮ್ಮ 'ಕುಂಭಕರ್ಣ' ನಿದ್ದೆಯೇ ಅಥವಾ ಕುಮ್ಮಕ್ಕೇ?
​ಪಾವಗಡ ಪಟ್ಟಣದಲ್ಲಿ ಇರುವ ನಗರ ಪೊಲೀಸ್ ಠಾಣೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಹಾಗೂ ಭೂ ವಿಜ್ಞಾನ ಇಲಾಖೆಯ. ಮತ್ತು ಆರ್ ಟಿ ಓ ಇಲಾಖೆಯ ಅಧಿಕಾರಿಗಳಿಗೆ ಈ ದಂದೆಯ ಸಂಪೂರ್ಣ ಮಾಹಿತಿ ಇದ್ದರೂ, 'ನೋಡದವರಂತೆ' ಮೌನಕ್ಕೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
​"ನದಿಯ ಮರಳು ಲೂಟಿಯಾಗುತ್ತಿದ್ದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಯಾಕೆ?

ಪ್ರತಿ ಟ್ರ್ಯಾಕ್ಟರ್‌ಗೆ ಇಂತಿಷ್ಟು ಅಂತ ಫಿಕ್ಸ್ ಆಗಿದೆಯೇ?" - ಇದು ಸಾರ್ವಜನಿಕರ ನೇರ ಪ್ರಶ್ನೆ.

​ಇಷ್ಟೆಲ್ಲಾ ಸಾಕ್ಷ್ಯಧಾರಗಳು ಕಣ್ಣಮುಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಬೀದಿಗಿಳಿಯುವುದು ಖಚಿತ.ವಾಹನ ಸಂಖ್ಯೆ KA 06 TC 8547 ಮಾಲೀಕ ಹಾಗೂ ಚಾಲಕನ ವಿರುದ್ಧ ಕೂಡಲೇ FIR ದಾಖಲಾಗಲಿ.
​ಅಕ್ರಮ ಸಾಗಾಣಿಕೆಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ತನಿಖೆ ನಡೆಸಲಿ.

​ವರದಿ: ಶಿವಾನಂದ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ