LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸುಲೇಪೇಟಿನಲ್ಲಿ ಶಾಲಾ ಸಂಸತ್ತು ಚುನಾವಣೆ

Advertisement

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಶ್ರೀ ಗುರುನಂಜೇಶ್ವರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀಮತಿ ಬಿ.ಬಿ. ಸಜ್ಜನ್ ಶೆಟ್ಟಿ ಸ್ಮಾರಕ ಹಾಗೂ ಶ್ರೀ ಗುರುನಂಜೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ಆಯೋಜಿಸಲಾಯಿತು.

8ನೇ ತರಗತಿಯಿಂದ 12ನೇ ತರಗತಿವರೆಗೆ ನಡೆದ ಈ ಚುನಾವಣೆಯಲ್ಲಿ ಒಟ್ಟು 323 ವಿದ್ಯಾರ್ಥಿಗಳು ಮತದಾರರಾಗಿ ಭಾಗವಹಿಸಿದ್ದರು. ಚುನಾವಣಾ ಕಣಕ್ಕೆ ಒಟ್ಟು 27 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
news_1787638219_0_462.webp

 

ತರಗತಿವಾರು ಅಭ್ಯರ್ಥಿಗಳ ವಿವರ ಹೀಗಿದೆ: 8ನೇ ತರಗತಿಯಿಂದ 7 ಅಭ್ಯರ್ಥಿಗಳು, 9ನೇ ‘ಎ’ ತರಗತಿಯಿಂದ 4 ಅಭ್ಯರ್ಥಿಗಳು, 9ನೇ ‘ಬಿ’ ತರಗತಿಯಿಂದ 3 ಅಭ್ಯರ್ಥಿಗಳು, 10ನೇ ‘ಎ’ ತರಗತಿಯಿಂದ 5 ಅಭ್ಯರ್ಥಿಗಳು, 10ನೇ ‘ಬಿ’ ತರಗತಿಯಿಂದ 5 ಅಭ್ಯರ್ಥಿಗಳು ಹಾಗೂ ಪಿಯುಸಿ ವಿಭಾಗದಿಂದ 3 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದರು.

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು, ನಾಯಕತ್ವ ಗುಣ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶದಿಂದ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು ಎಂದು ಚುನಾವಣಾಧಿಕಾರಿ ಸೋಮನಾಥ ರೆಡ್ಡಿ ತಿಳಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಬಸವಂತ ರೆಡ್ಡಿ, ಶ್ರೀಮತಿ ವಿಮಲಮ್ಮ, ಶ್ರೀಮತಿ ಗಿರಿಜಾ, ಸುನಿಲ್ ಸಲ್ಗರ್, ಅಣವೀರ, ಉಸ್ಮಾನ್ ಪಟೇಲ್, ಸಲೀಂ ದೇಗುಲಮಡಿ, ಶಿವಕುಮಾರ್, ಅಂಬರೀಶ್, ಜೀವನ್, ಬಸವರಾಜ್, ಕುಮಾರಿ ಪ್ರಿಯಾಂಕ, ಕುಮಾರಿ ಭುವನೇಶ್ವರಿ, ಸಿದ್ದಯ್ಯ ಸ್ವಾಮಿ ಹಾಗೂ ಶಾಲೆಯ ಸಿಪಾಯಿ ಶ್ರೀಮತಿ ಲಕ್ಷ್ಮಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
news_1787638234_0_942.webp

 

ಶಾಲಾ ಸಂಸತ್ತು ಚುನಾವಣೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ, ನಾಯಕತ್ವ ಮತ್ತು ಕರ್ತವ್ಯಪ್ರಜ್ಞೆಯನ್ನು ಬೆಳೆಸುವ ಉತ್ತಮ ವೇದಿಕೆಯಾಯಿತು.
ವರದಿ: ಸುನೀಲ್ ಸಲ್ಗರ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಾ ನದಿಗೆ ಹಾರಿ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ : ಇಬ್ಬರು ಮಕ್ಕಳು ಸಾವು, ತಾಯಿ ಬಚಾವ್ರಾಜ್ಯಾಧ್ಯಂತ ಈದ್ ಮಿಲಾದ್ ಹಬ್ಬದ ಆಚರಣೆಯ ವೇಳೆ ಡಿಜೆ ಬಳಕೆ ನಿಷೇಧ : ರಾಜ್ಯ ಸರ್ಕಾರ  ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ.1 ರಿಂದ 10 ವರೆಗೆ 'ಬಳ್ಳಾರಿ ಚಲೋ' ಪಾದಯಾತ್ರೆ ಘೋಷಣೆಅನೈತಿಕ ಸಂಬಂದ ಹೆಂಡತಿ ಸ್ಟೆಟಸ್ ಇಟ್ಟಿದವನ ಕುಡುಗೊಲಿನಿಂದ ಕೊಚ್ಚಿ ಕೊಲೆ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ವಿದ್ಯಾರ್ಥಿ ಅನುಮಾನಸ್ಪದ ಸಾವುಸುಲೇಪೇಟಿನಲ್ಲಿ ಶಾಲಾ ಸಂಸತ್ತು ಚುನಾವಣೆನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ: ಬೆಳಗಾವಿಯಲ್ಲಿ 64 ವರ್ಷದ ವೃದ್ಧ ಅರೆಸ್ಟ್ಸಚಿವ ಸಂಪುಟದಲ್ಲಿ ಮತ್ತೆ ಸರ್ಜರಿ : 3 ರಿಂದ 5 ಹಿರಿಯರಿಗೆ ಕೊಕ್ ಸಾಧ್ಯತೆವಿಶ್ವದಲ್ಲೇ ಮೊದಲು IVF ಮೂಲಕ ಜನಿಸಿದ ಲಖಿಮಿ ತಳಿಯ ಹೆಣ್ಣು ಕರು ಟ್ರಂಪ್ ಪುತ್ರನ ಹತ್ಯೆಗೈದರೇ 95 ಕೋಟಿ ರೂ. ಬಹುಮಾನ : ಇರಾನ್ ಘೋಷಣೆ