LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು 

Advertisement

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಎದೆ ಸೋಂಕಿನ ಸಮಸ್ಯೆಯಿಂದಾಗಿ ಶುಕ್ರವಾರ ರಾತ್ರಿ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (98) ಅವರು ಎದೆ ಸೋಂಕಿನ ಸಮಸ್ಯೆಯಿಂದಾಗಿ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಾದ ಅವರಿಗೆ ಶ್ವಾಸಕೋಶ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ತಂಡ ನಿರಂತರ ನಿಗಾ ವಹಿಸಿದೆ.

98 ವರ್ಷದ ಅಡ್ವಾಣಿ ಅವರನ್ನು ಶುಕ್ರವಾರ ರಾತ್ರಿ ಸುಮಾರು 7.30ರ ವೇಳೆಗೆ ಆಸ್ಪತ್ರೆಗೆ ಕರೆತರಲಾಗಿದೆ. ಬಳಿಕ ಅವರನ್ನು ಶ್ವಾಸಕೋಶ ವಿಭಾಗಕ್ಕೆ ದಾಖಲಿಸಲಾಗಿದ್ದು, ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಈ ಕುರಿತು ಮಾಹಿತಿ ಹೊಂದಿರುವ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಅಡ್ವಾಣಿ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಲಿಗೆ ಬಿದ್ದು ಪ್ರಾರ್ಥಿಸ್ತೇನೆ ಹೋರಾಟ ಕೈಬಿಡಿ : ಕಬ್ಬು ಬೆಳೆಗಾರರ ಹೋರಾಟಗಾರರಿಗೆ ಸಿಎಂ ಮನವಿ 5-10 ಓವರ್ ಗಳ ಪಂದ್ಯವೂ ಗ್ಯಾರಂಟಿ ಇಲ್ಲದಂತಾಗಿದೆ ಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?: ಕುಮಾರಸ್ವಾಮಿ ಪ್ರಶ್ನೆ ಪ್ರಿಯಾಂಕ್ ಖರ್ಗೆ ಕೇವಲ 'ಸೋಷಿಯಲ್ ಮೀಡಿಯಾ ಮಂತ್ರಿ': ಶ್ರೀರಾಮುಲುನಿರಂತರ ಮಳೆಯಿಂದ ಭಾರತ- ವೆಸ್ಟ್ ಇಂಡೀಸ್ ಪಂದ್ಯದ ಟಾಸ್ ವಿಳಂಭಶವಾಗಾರದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ ವೈದ್ಯ : ಅಮಾನತು ಶಿಕ್ಷೆ ಸಿಜೆಪಿ ಪ್ರತಿಭಟನೆಗೂ.. ಕಾಂಗ್ರೆಸ್​​​ಗೂ ಸಂಬಂಧವಿಲ್ಲ : ಸತೀಶ್ ಜಾರಕಿಹೊಳಿದಿಢೀರ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯರೆಡ್ಡಿ ರಾಜೀನಾಮೆ ಇಂಚಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆಕಬ್ಬು ಬೆಳೆಗಾರರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ : ಹೈಕೋರ್ಟ್ ಮಧ್ಯಪ್ರವೇಶ