ಇಂಫಾಲ್: ಮಣಿಪುರದ ಇಂಫಾಲ್ನಲ್ಲಿ ಆಹಾರ ವಿಷಬಾಧೆ(food poisoning) ಶಂಕೆಯಿಂದ ಗಡಿ ಭದ್ರತಾ ಪಡೆ (BSF)ಯ 75 ಸಿಬಂದಿ ಹಾಗೂ ಮೂವರು ನಾಗರಿಕರು ಸೇರಿದಂತೆ ಒಟ್ಟು 78 ಮಂದಿಯನ್ನು ಗುರುವಾರ(ಅ.15) ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗಿನ ಉಪಾಹಾರ ಸೇವಿಸಿದ ಬಳಿಕ ಬಿಎಸ್ಎಫ್ ಸಿಬಂದಿ ಹಾಗೂ ಮೂವರು ನಾಗರಿಕರಲ್ಲಿ ವಾಂತಿ ಮತ್ತು ವಾಕರಿಕೆ ಕಾಣಿಸಿಕೊಂಡಿದ್ದು, ಮಧ್ಯಾಹ್ನ ಸುಮಾರು 1 ಗಂಟೆಗೆ ಅವರನ್ನು ಇಂಫಾಲ್ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಆಸ್ಪತ್ರೆಗೆ ಕರೆತರಲಾಯಿತು.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಎಲ್ಲರಿಗೂ ತತ್ಕ್ಷಣ ಚಿಕಿತ್ಸೆ ನೀಡಲಾಗಿದ್ದು, ಪ್ರಸ್ತುತ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ರಿಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಹಾರ ವಿಷಬಾಧೆಯಿಂದಾಗಿ ಇವರೆಲ್ಲರೂ ಅಸ್ವಸ್ಥಗೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.


