LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಪ್ರಿಯಾಂಕ್ ಖರ್ಗೆ ನನ್ನ ಸಾವು ಬಯಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ 

Advertisement

ಬೆಂಗಳೂರು : ಕುಮಾರಸ್ವಾಮಿ ಅವರಿಗೆ ಈಗಾಗಲೇ ಮೂರನೇ ಸಲ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ನಾಲ್ಕನೇ ಸಲ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ನಾಲಿಗೆ ಜಾರಿರುವ ಬಗ್ಗೆ, ಜನರ ಹಿತಕ್ಕಾಗಿ ದುಡಿಯುತ್ತಿರುವ ನನಗೆ ಅವರ ಇಚ್ಛೆಯಂತೆ ನಾಲ್ಕನೇ ಬಾರಿಗೆ ಹೃದಯಾಘಾತ ಆಗಲಿ ಎಂದರು.

ಅವರು ನನ್ನ ಸಾವು ಬಯಸುತ್ತಿದ್ದಾರೆ. ಆದರೆ, ನಾನು ಜನರ ಹಿತದ ದೃಷ್ಟಿಯಿಂದ ಹೋರಾಟ ನಡೆಸುತ್ತಿದ್ದೇನೆ. ನನಗೆ ನಾಲ್ಕನೇ ಬಾರಿ ಹೃದಯಾಘಾತ ಆಗಿಬಿಡಲಿ, ಓಪನ್ ಹಾರ್ಟ್ ಸರ್ಜರಿ ಆಗಲಿ ಎನ್ನುವುದು ಗೃಹ ಸಚಿವರ ಬಯಕೆಯಾಗಿದೆ. ಆದರೆ ಆ ಮಟ್ಟಕ್ಕೆ ನನ್ನನ್ನು ತೆಗೆದುಕೊಂಡು ಹೋಗಲು ಅವರು ತೀರ್ಮಾನ ಮಾಡಿದ್ದರೂ ನನ್ನನ್ನು ಕಾಪಾಡಲು ಭಗವಂತನಿದ್ದಾನೆ ಎಂದರು.

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು;

ಸಂಶಯ ಬಂದರೆ ಕುಮಾರಸ್ವಾಮಿ ಅವರನ್ನೂ ತನಿಖೆ ಮಾಡುತ್ತೇವೆ ಎಂಬ ಗೃಹ ಸಚಿವರ ಹೇಳಿಕೆಗೆ ತೀವ್ರವಾಗಿ ಕೆರಳಿದ ಹೆಚ್ಡಿಕೆ; ಅವರ ಉದ್ದಟತನ, ಆ ಅಧಿಕಾರದ ಮದ ಇದೆಯಲ್ಲ, ಆ ಮದವನ್ನು ಇಳಿಸುವುದು ಹೇಗೆ ಎಂದು ನಮಗೆ ಗೊತ್ತಿದೆ. ಅದನ್ನು ಇಳಿಸೋಣಂತೆ ಎಂದು ನೇರ ಸವಾಲು ಹಾಕಿದರು.

ಇದೇ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಕ್ಕೆ ನೊಂದು ಮಾತನಾಡಿದ ಕೇಂದ್ರ ಸಚಿವರು; ನನಗೆ ನಾಲ್ಕನೇ ಬಾರಿ ಹೃದಯಾಘಾತ ಆಗಿಬಿಡಲಿ, ಓಪನ್ ಹಾರ್ಟ್ ಸರ್ಜರಿ ಆಗಲಿ ಎನ್ನುವುದು ಗೃಹ ಸಚಿವರ ಬಯಕೆಯಾಗಿದೆ; ಆದರೆ ಆ ಮಟ್ಟಕ್ಕೆ ನನ್ನನ್ನು ತೆಗೆದುಕೊಂಡು ಹೋಗಲು ಅವರು ತೀರ್ಮಾನ ಮಾಡಿದ್ದರೂ ನನ್ನನ್ನು ಕಾಪಾಡಲು ಭಗವಂತನಿದ್ದಾನೆ ಎಂದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST