LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶ್ರೀದೇವಿ ಪುರಾಣದ ಸಂದೇಶ ವಿವರಿಸಿದ ಬಸವಲಿಂಗ ಸ್ವಾಮೀಜಿ

Advertisement

ಮಾನ್ವಿ: ತಾಲೂಕಿನ ಕರೆಗುಡ್ಡ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಕೊಟ್ಟೂರು ಸಂಸ್ಥಾನಮಠ ಹೊಸಪೇಟೆಯ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀದೇವಿ ಪುರಾಣವು ನಮ್ಮ ದೇಹದ ಪುರಾಣವಾಗಿದ್ದು ಮಾನವನೊಳಗಿನ ಕಾಮ ಕ್ರೋಧ ಮದ ಮೋಹ ಹಾಗೂ ಮಾತ್ಸರ್ಯವೇ ಶುಂಭ ನಿಶುಂಭರಂತಹ ದೈತ್ಯಸ್ವಭಾವಗಳಾಗಿವೆ. ಇವುಗಳನ್ನು ನಿಯಂತ್ರಿಸಿದಾಗ ದೇವಿಯ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಜಗನ್ಮಾತೆಯ ಮಹಿಮೆಯನ್ನು ಶ್ರೀದೇವಿ ಪುರಾಣ ತಿಳಿಸಿಕೊಡುತ್ತದೆ. ಕರೆಗುಡ್ಡದ ಶ್ರೀ ಮಹಾಂತೇಶ್ವರ ಮಠವು ಜಾಗೃತ ಕ್ಷೇತ್ರವಾಗಿದ್ದು ಇಲ್ಲಿ ದೇವಿಯ ಆರಾಧನೆ ಹಾಗೂ ಶ್ರೀದೇವಿ ಪುರಾಣ ಶ್ರವಣದಿಂದ ಭಕ್ತರಿಗೆ ವಿಶೇಷ ಅನುಗ್ರಹ ಲಭಿಸುತ್ತದೆ ಎಂದು ತಿಳಿಸಿದರು.

ಸೃಷ್ಟಿಯನ್ನು ಶಕ್ತಿ  ಜ್ಞಾನ ಹಾಗೂ ಸಂಪತ್ತು ಎಂಬ ಮೂರು ಶಕ್ತಿಗಳು ಮುನ್ನಡೆಸುತ್ತವೆ. ಇವುಗಳನ್ನು ಸದ್ಬಳಕೆ ಮಾಡಿದವರು ಸಂತರಾಗುತ್ತಾರೆ. ಜ್ಞಾನವನ್ನು ಲೋಕಕಲ್ಯಾಣಕ್ಕಾಗಿ ಬಳಸಿದವರು ದೇವತೆಗಳಾಗುತ್ತಾರೆ. ದುರುಪಯೋಗ ಮಾಡಿದವರು ಅಸುರರಾಗುತ್ತಾರೆ. ದೇವಿಯ ಅನುಗ್ರಹ ದೊರೆತರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂಬ ಸಂದೇಶವನ್ನು ವಿಜಯದಶಮಿ ಸಾರುತ್ತದೆ ಎಂದು ಹೇಳಿದರು. ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ನಂದವಾಡಗಿ ಶ್ರೀ ಮಹಾಂತೇಶ ಶಾಸ್ತ್ರಿಗಳು ಶ್ರೀದೇವಿ ಪುರಾಣ ಪ್ರವಚನ ನೀಡಿದರು. ಅಮರೇಶ ಗವಾಯಿಗಳು ಸಾಲಿಮಠ ಸಂಗೀತ ಸೇವೆ ಸಲ್ಲಿಸಿದರೆ ಬಸವರಾಜಯ್ಯ ಹಿರೇಮಠ ತಬಲಾ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.
ವರದಿ : ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST