LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸದೃಢ ಸಮಾಜ ಕಟ್ಟಲು ಯುವಜನತೆ ಸಹಕಾರ ಬಹಳ ಮುಖ್ಯ. ಶಿವಕುಮಾರ್.ಆರ್.

Advertisement
ಮೊಳಕಾಲ್ಮೂರು : ನಮ್ಮ ಸಮಾಜವನ್ನು ಸದೃಢವಾಗಿ ಕಟ್ಟಲು ಯುವ ಜನತೆ ಪಾತ್ರ ಬಹಳ ಮುಖ್ಯವಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಶಿವಕುಮಾರ್ ಆರ್ ಅವರು ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಆಯೋಜಿಸಿದ ಯುವಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಸಭೆಗಳನ್ನು ಆಯಾ ಪೊಲೀಸ್ ಠಾಣೆಯಲ್ಲಿ ಮಾಡುತ್ತಿದ್ದೀರಾ ಆದರೆ ಸ್ವಾಸ್ಥ ಸಮಾಜವನ್ನು ಕಟ್ಟಲು ಮತ್ತು ಹಾಳು ಮಾಡುತ್ತಿರುವುದು ಯುವಜನತೆ ಆದ್ದರಿಂದ ಯುವ ಜನತೆಯ ಸಭೆಗಳನ್ನು ಹೆಚ್ಚಾಗಿ ಮಾಡುವುದರಿಂದ ಅವರನ್ನು ಪರಿವರ್ತನೆ ಮಾಡಿ ಸಮಾಜವನ್ನು ತಿದ್ದುವಲ್ಲಿ ಸಹಕಾರಿಯಾಗುತ್ತದೆ ಎಂದರು. ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ನೂರಾರು ಯುವಕರು ಅನೇಕ ದುಶ್ಚಟಗಳಿಗೆ ಬಲೆಯಾಗುತ್ತಿದ್ದಾರೆ , ಈಗ ನಡೆಯುತ್ತಿರುವ ಐಪಿಎಲ್ ಆಗಿರಬಹುದು, ಇಸ್ಪೀಟ್ ದಂಧೆ,ಜೂಜಾಟ, ಇಂತಹ ಅನೇಕ ದುಷ್ಟಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ, ಅದೇ ರೀತಿ ಅತಿ ಮುಖ್ಯವಾಗಿ, ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟು ಪೋಕ್ಸೋ ಕಾಯ್ದೆ ಅಡಿ ನೂರಾರು ಯುವಕರು ಜೈಲು ಸೇರುತ್ತಿದ್ದಾರೆ, ಆದ್ದರಿಂದ ಯುವ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಚಳ್ಳಕೆರೆ ಉಪ ವಿಭಾಗ ಡಿ ವೈ ಎಸ್ ಪಿ ಸತ್ಯನಾರಾಯಣ ಮಾತನಾಡಿ, ಈ ದೇಶದ ಅಭಿವೃದ್ಧಿ ಮತ್ತು ಹಾರ್ದಿಕತೆ ನಿಂತಿರುವುದು ಯುವಜನತೆಯಿಂದ ಅಂತಹ ಯುವಜನತೆ ಈಗ ಸಾಮಾಜಿಕ ಜಾಲತಾಣಗಳಿಂದ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಯುವಜನತೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಆದ್ದರಿಂದ ಪೊಲೀಸ್ ಇಲಾಖೆಗೆ ನಿಮ್ಮ ಸಹಕಾರ ಬಹಳ ಮುಖ್ಯ ಎಂದರು. ಅತಿ ಹೆಚ್ಚು ಅಪರಾಧಿ ಚಟುವಟಿಕೆಗಳು ಆಗುತ್ತಿರುವುದು ಯುವಜನತೆಯಿಂದ, ಈಗಿನ ಜನತೆಗೆ ಅತಿ ಬೇಗನೆ ಕೋಟ್ಯಾಧೀಶ್ವರ ಆಗಬೇಕು ಎಂಬ ದುರಾಸೆಯಿಂದ ಅನೇಕ ದುಶ್ಚಟಗಳಿಗೆ ಬಲಿಯಾಗಿ ಜೈಲು ಸೇರುತ್ತಿದ್ದಾರೆ, ಆದರಿಂದ ಯುವ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೆ ವೇಳೆ ಮೊಳಕಾಲ್ಮುರು ಪೊಲೀಸ್ ಠಾಣೆಯ ಸಿಪಿಐ ನಾಗರಾಜ್, ಸಬ್ ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ್, ಹೊಸಪೇಟೆ, ಮತ್ತು ವಕೀಲರಾದ ಬಿ ವಿಜಯ್ , ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಈ ಈ ಸಂದರ್ಭದಲ್ಲಿ ನೂರಾರು ಯುವಕರು ಮತ್ತು ಪೊಲೀಸ್ ಠಾಣಾ ಸಿಬ್ಬಂದಿ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ : ಪಿಎಂ ಗಂಗಾಧರ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ