Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತ್ತೆ ಶಾಕ್ : ವಾಣಿಜ್ಯ ಸಿಲಿಂಡರ್ ದರದಲ್ಲಿ 42 ರೂಪಾಯಿ ಹೆಚ್ಚಳ

Advertisement

ನವದೆಹಲಿ: ದೇಶದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಬಿಸಿ ತಟ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಮತ್ತೆ ಹೆಚ್ಚಳ ಮಾಡಲಾಗಿದ್ದು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಭಾರಿ ಆಘಾತ ನೀಡಿದೆ.

ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ತೈಲ ಮಾರುಕಟ್ಟೆ ಕಂಪನಿಗಳು ಈ ಬೆಲೆ ಪರಿಷ್ಕರಣೆ ಮಾಡಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರ ರಾಜಧಾನಿ ಹೊಸದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರದಲ್ಲಿ 42 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಈ ಬೆಲೆ ಏರಿಕೆಯ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ನ ಸದ್ಯದ ಬೆಲೆ 3,113.50 ರೂಪಾಯಿ ತಲುಪಿದೆ. ಇದು ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ಪ್ರಮಾಣದ ಆಹಾರ ಉದ್ಯಮ ನಡೆಸುವವರ ಜೇಬಿಗೆ ಕತ್ತರಿ ಹಾಕಲಿದೆ.

ಕೋಲ್ಕತ್ತಾದಲ್ಲೂ ಬೆಲೆ ಭಾರಿ ಹೆಚ್ಚಳ

ಕೇವಲ ದೆಹಲಿ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲೂ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಕೋಲ್ಕತ್ತಾದಲ್ಲಿ ಬರೋಬ್ಬರಿ 53.50 ರೂಪಾಯಿ ಹೆಚ್ಚಳವಾಗಿದ್ದು, ಅಲ್ಲಿ ವಾಣಿಜ್ಯ ಸಿಲಿಂಡರ್‌ನ ಸದ್ಯದ ದರ 3,255.50 ರೂಪಾಯಿಗೆ ತಲುಪಿದೆ. ಇತರೆ ಮಹಾನಗರಗಳಲ್ಲೂ ಇದೇ ರೀತಿಯ ದರ ಬದಲಾವಣೆಯಾಗಿದೆ.

ಗೃಹಬಳಕೆ ಸಿಲಿಂಡರ್ ದರ ಸ್ಥಿರ

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದರೂ, ಸಾರ್ವಜನಿಕರಿಗೆ ಒಂದು ಮಟ್ಟದ ನಿರಾಳತೆ ಸಿಕ್ಕಿದೆ. ಮನೆಗಳಲ್ಲಿ ಬಳಸುವ 14.2 ಕೆಜಿ ತೂಕದ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸಾಮಾನ್ಯ ಗ್ರಾಹಕರ ಬಜೆಟ್‌ಗೆ ಸದ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ ಎನ್ನಬಹುದು.

ಹೋಟೆಲ್ ಉದ್ಯಮದ ಮೇಲೆ ಪ್ರಭಾವ

ವಾಣಿಜ್ಯ ಸಿಲಿಂಡರ್ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದರಿಂದ ಹೋಟೆಲ್, ಬೇಕರಿ, ಕ್ಯಾಟರಿಂಗ್ ಹಾಗೂ ಬೀದಿಬದಿಯ ಆಹಾರ ವ್ಯಾಪಾರಿಗಳ ನಿರ್ವಹಣಾ ವೆಚ್ಚ ಹೆಚ್ಚಾಗಲಿದೆ. ಇದು ಪರೋಕ್ಷವಾಗಿ ಹೊರಗಿನ ಆಹಾರ ಪದಾರ್ಥಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವತಂತ್ರ ಪಕ್ಷ ಕಟ್ಟಲಿದ್ದಾರಂತೆ ಅಣ್ಣಾಮಲೈವೈಭವ್ ಸೂರ್ಯವಂಶಿ ಸರಣಿ ಶ್ರೇಷ್ಠನಾಳೆ ಪಾಕ್- ಕಾಂಗರೂ ದ್ವಿತೀಯ ಏಕದಿನ ಪಂದ್ಯಆರ್ಥಿಕತೆಯನ್ನು ಆಲಿಬಾಬಾ 40 ಕಳ್ಳರ ರೀತಿ ಹಾಳು ಮಾಡಿದರು : ಆರ್. ಅಶೋಕ್ ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ : ಯು.ಟಿ ಖಾದರ್ ಜೆಇಇ ಅಡ್ವಾನ್ಸ್‌ ಪರೀಕ್ಷೆ: ಪಿಡ್ಬ್ಲೂಡಿ ಕೋಟಾದಲ್ಲಿ ಮೊದಲ ರ್ಯಾಂಕ್‌ ಪಡೆದ ವಿಶ್ವರಾಜ ಮರಪಳ್ಳಿಇಂದಿನಿಂದ 4 ರಾಜ್ಯಸಭಾ ವಿಧಾನ ಪರಿಷತ್ತಿನ 7 ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಬಸವ ತತ್ವಗಳು ಸಮಾಜಕ್ಕೆ ದಾರಿದೀಪ: ಬೆಳಗಾವಿಯಲ್ಲಿ 'ಬಸವಾದಿ ಶರಣರ ವಿಚಾರ ಸಂಕಿರಣ' ಯಶಸ್ವಿಗಡಿಯಲ್ಲಿ ಕನ್ನಡ ಉಳಿವಿಗಾಗಿ ಕನ್ನಡ ಭಾಷಾ ಅತಿಥಿ ಶಿಕ್ಷಕರಿಗೆ ಪ್ರಥಮ ಆದ್ಯತೆ ನಿಡಲು ಮನವಿ   ಸರ್ಕಾರಿ ಸೌಲಭ್ಯ ಬಳಸಿಕೊಂಡು ಅಧ್ಯಯನ ಮಾಡಿ ಸಾಧಕರಾಗಿ : ಬಿಇಒ ಸೋಮಶೇಖರ್