LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶ್ರೀ ವಿಷ್ಣು ವಿಲಾಸ ಸಹಕಾರಿಯಿಂದ ಶುದ್ದ ಕುಡಿಯುವ ನೀರಿನ ಅರವಟಿಗೆ ಆರಂಭ

Advertisement
ಸಿರುಗುಪ್ಪ : ನಗರದ ನಗರಸಭೆ ಕಛೇರಿಯ ಮುಂಭಾಗದಲ್ಲಿ ಶ್ರೀ ವಿಷ್ಣು ವಿಲಾಸ ಸೌಹಾರ್ಧ ಪತ್ತಿನ ಸಹಕಾರಿ ಬ್ಯಾಂಕಿನಿಂದ ಜರುಗಿದ ಶುದ್ದ ಕುಡಿಯುವ ನೀರಿನ ಅರವಟಿಗೆ ಆರಂಭ ಕಾರ್ಯಕ್ರಮಕ್ಕೆ ಸಿರುಗುಪ್ಪ ಗುರುಬಸವ ಮಠದ ಶ್ರೀ ಬಸವಭೂಷಣ ಶ್ರೀಗಳು ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ನೀರು ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿ ಬೇಸಿಗೆಯ ಸಂದರ್ಭದಲ್ಲಿ ನೀರಿನ ದಾಹ ನೀಗಿಸುವುದು ಒಂದು ಪುಣ್ಯದ ಕಾರ್ಯವಾಗಿದೆ.

ಅಂತಹ ಕಾರ್ಯವನ್ನು ವಿಷ್ಣು ವಿಲಾಸ ಸಹಕಾರಿಯು ಹಲವು ವರ್ಷಗಳಿಂದ ಅರವಟಿಗೆಯನ್ನು ಆರಂಭಿಸಿ ದೂರದ ಊರುಗಳಿಂದ ತಾಲೂಕು ಕೇಂದ್ರಗಳಿಗೆ ಬರುವ ಗ್ರಾಮಸ್ಥರಿಗೆ, ರಸ್ತೆಬದಿಯಲ್ಲಿನ ಬಡ ವ್ಯಾಪಾರಿಗಳಿಗೆ, ವಾಹನ ಚಾಲಕರಿಗೆ ದಾಹವನ್ನು ನೀಗಿಸುತ್ತಲೇ ಬಂದಿದ್ದಾರೆ.



ಇವರ ಸಮಾಜಮುಖಿ ಕಾರ್ಯಗಳಿಗೆ ಭಗವಂತ ಇನ್ನಷ್ಟು ಶಕ್ತಿಯನ್ನು ನೀಡಲಿ. ಅದೇ ರೀತಿ ಎಲ್ಲರೂ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಮುಂದಾಗಬೇಕೆಂದು ತಿಳಿಸಿದರು.

ಸಹಕಾರಿ ಅಧ್ಯಕ್ಷರಾದ ಹೆಚ್.ಜೆ.ಹನುಮಂತಯ್ಯ ಅವರು ಮಾತನಾಡಿ ನಮ್ಮ ಸಹಕಾರಿಯ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಿಬ್ಬಂದಿಗಳ ನೆರವಿನೊಂದಿಗೆ ಪ್ರತಿವರ್ಷ ಬೇಸಿಗೆಯಲ್ಲಿ ಅರವಟಿಗೆಯನ್ನು ಪ್ರಾರಂಭಿಸಿ ನೀರಿನ ದಾಹವನ್ನು ತಣಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ.ವಿಶೇಷ ದಿನಗಳಲ್ಲಿ ಮಜ್ಜಿಗೆ ವಿತರಣೆ ಮಾಡಲಾಗುವುದು.

ಇನ್ನಿತರ ದಿನಗಳಲ್ಲಿ ಅಂದರೆ ಮಳೆಗಾಲದವರೆಗೂ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ವಿತರಿಸುತ್ತಾ ಬಂದಿದ್ದೇವೆ ಎಂದರು.

ಇದೇ ವೇಳೆ ಬಲಕುಂದಿ ಶ್ರೀ ಬನ್ನಿಮಹಾಂಕಾಳಿ ಸೌಹಾರ್ಧ ಪತ್ತಿನ ಸಹಕಾರಿ ಅಧ್ಯಕ್ಷ ಚಿಂತಕುಂಟೆ ಗಾದಿಲಿಂಗನಗೌಡ, ಶ್ರೀ ವಿಷ್ಣು ವಿಲಾಸ ಸಹಕಾರಿ ನಿರ್ದೇಶಕರಾದ ಜೆ.ಶ್ರೀರಾಮ, ಎಮ್.ಬದ್ರಿನಾಥ, ಕೆ.ಆರ್.ನಾಗರಾಜಶೆಟ್ಟಿ, ಕೆ.ಸೂರ್ಯಪ್ರಕಾಶ, ಎ.ಸಂತೋಷ, ಕಾರ್ಯನಿರ್ವಾಹಕ ಅನಿಲ್‌ಕುಮಾರ್ ಹಾಗೂ ಸಿರಿ ಮಹಾಲಕ್ಷ್ಮಿ ಸೌಹಾರ್ಧ ಪತ್ತಿನ ಸಹಕಾರಿ ನಿರ್ದೇಶಕ ರಾಘವೇಂದ್ರ ಆಚಾರ್, ಸೇರಿದಂತೆ ಸಿಬ್ಬಂದಿಗಳು ಇದ್ದರು.

ವರದಿ : ಶ್ರೀನಿವಾಸ ನಾಯ್ಕ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ