ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರ, ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮಾನ್ ಗಿಲ್ ಈಗ ಪರಿಪಕ್ಷ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ.
ಮಿಸ್ಟರ್ ಕನಸಿಸ್ಟನ್ಸಿ ಎಂಬ ಖ್ಯಾತಿಯನ್ನೂ ಕೂಡ ಗಳಿಸುತ್ತಿರುವ ಭಾರತ ಭರವಸೆಯ ನಾಯಕ ಇದೀಗ ಅನುಭವಿ ಆಟಗಾರರ ಕೊರತೆಯನ್ನು ಮರೆಸುತ್ತಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿರಂತಹ ಆಟಗಾರರಿಲ್ಲದೇ ಕೂಡ ತಂಡ ಗೆಲ್ಲುತ್ತದೆ ಎಂಬುದನ್ನು ನಿರೂಪಿಸುತ್ತಿದ್ದಾರೆ.
ಅಪಘಾನಿಸ್ತಾನ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯ ಹಾಗೂ ಮೊದಲ ಏಕದಿನ ಪಂದ್ಯ ಇದಕ್ಕೆ ತಾಜಾ ಉದಾಹರಣೆ.


