ಸಿಂಧನೂರು : ಮಳೆ,-ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿ ಇದ್ದಾರೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಾಗಿದೆ ಹಾಗಾಗಿ ಸಿಂಧನೂರು ತಾಲೂಕು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು, ಶೀಘ್ರವೇ ಕಾಲುವೆಗೆ ನೀರು ಬಿಡುವಂತೆ ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ವತಿಯಿಂದ ನಗರದ ತಹಸಿಲ್ದಾರ್ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ ತುಂಗಭದ್ರಾ ಡ್ಯಾಮ್ ನಲ್ಲಿ 70 ಟಿಎಂಸಿ, ನೀರು ಇದೆ ಆದರೂ ರೈತರ ಬೆಳೆಗಳಿಗೆ ನೀರು ಬಿಡುವ ಕೆಲಸ ಸರ್ಕಾರ ಮಾಡುತ್ತಿಲ್ಲ, ಇದರಿಂದ ಮತ್ತಷ್ಟು ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೆ ನೀರು ಬಿಡುವ ಕೆಲಸ ಆಗಬೇಕು ಇಲ್ಲವಾದರೆ ಸರ್ಕಾರಕ್ಕೆ ಮುಂದಿನ ದಿನದಲ್ಲಿ
ಕ್ಷೇತ್ರದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು ಈ ಬಾರಿ ಒಂದೊಂದು ಜಿಲ್ಲೆಗೆ ಮೂರು ಮೂರು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ರಾಯಚೂರು ಜಿಲ್ಲೆಗೆ ಯಾವುದೇ ಸ್ಥಾನ ಕೊಟ್ಟಿಲ್ಲ. ಯಾವ ಕೆಲಸ ಮಾಡದೆ ಖಾತೆಗಳ ಹಂಚಿಕೆಗೆ ಬಡಿದಾಡುತ್ತಿದ್ದಾರೆ ಎಂದರು.
ನಂತರ ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ ರೈತರ ಬದುಕಿನ ಜೊತೆಗೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ ರೈತರು ನೊಂದರೆ ಯಾರಿಗೂ ಒಳ್ಳೆಯದು ಆಗುವುದಿಲ್ಲ ಕೂಡಲೇ ಕಾಲುವೆಗೆ ನೀರು ಬಿಡುವ ಕೆಲಸ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು
ಸಂದರ್ಭದಲ್ಲಿ: ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ,ಬಿಜೆಪಿ ಮಂಡಲ ಅಧ್ಯಕ್ಷ ವೆಂಕೋಬ ರಾಮತ್ನಾಳ, ನಗರ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ಲಿಂಗರಾಜ್ ಹೂಗಾರ್, ಆದಿಮನಿ ವೀರಲಕ್ಷ್ಮೀ, ಮಾನಂದಮ್ಮ. ಶಿವಮ್ಮ. ರೇಣುಕಮ್ಮ. ಟಿ.ಸುಬ್ಬರಾವ್, ಹಸೇನಪ್ಪ ಸೂಲಂಗಿ, ಬಸವರಾಜ ಉಪ್ಪಳ, ಸಿದ್ದು ಹೂಗಾರ್, ಮುತ್ತು ಬರ್ಸಿ. ಸಿದ್ದಪ್ಪ ಕೋಳಬಾಳ ಸೇರಿದಂತೆ ಇತರರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ,


