LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಒಂದೇ ದಿನ ಬರೋಬ್ಬರಿ 8,347 ಕೋಟಿ ರು. ಗಳಿಸಿದ ಎಲಾನ್ ಮಸ್ಕ್ 

Advertisement

ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಜುಲೈ, 2025ರಿಂದ ಜುಲೈ 2026ರ ನಡುವೆ 30.5 ಲಕ್ಷ ಕೋಟಿ ರು. ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಅಂದರೆ ಪ್ರತಿ ದಿನ ಸರಾಸರಿ 8,347 ಕೋಟಿ ರು. ಗಳಿಸಿದ್ದಾರೆ ಎಂದು ಹಣಕಾಸು ಸಂಶೋಧನಾ ಸಂಸ್ಥೆ ಬೆಸ್ಟ್‌ಬ್ರೋಕರ್ಸ್‌ ತಿಳಿಸಿದೆ.

ಸ್ಪೇಸ್ ಎಕ್ಸ್‌ನ ಐಪಿಒ ಷೇರುಮಾರುಕಟ್ಟೆಗೆ ಜೂ.12ರಂದು ಕಾಲಿಟ್ಟಾಗ ಮಸ್ಟ್ ವಿಶ್ವದ ಮೊದಲ 'ಟ್ರಿಲಿಯನೇ‌ರ್' ಆದರು. ಆದರೆ ಕಳೆದ ತಿಂಗಳು ಅವರ ಕಂಪನಿಯ ಷೇರು ಭಾರೀ ಪ್ರಮಾಣದಲ್ಲಿ ಕುಸಿದಾಗ ಆ ಪಟ್ಟ ಕಳೆದುಕೊಂಡಿದ್ದರು. ಈಗ ಅವರ ಅಂದಾಜು ಆಸ್ತಿ 65.72 ಲಕ್ಷ ಕೋಟಿ ಆಗಿದೆ.

ಮಸ್ಕ್ ಬಳಿಕ ಅತಿ ಹೆಚ್ಚು ಸಂಪತ್ತು ಗಳಿಸಿದವರು ಡೆಲ್ ಟೆಕ್ನಾಲಜೀಸ್ ಸಿಇಒ ಮೈಕಲ್ ಡೆಲ್. ಅವರು ಜುಲೈ, 2025 ಮತ್ತು ಜುಲೈ, 2026ರ ನಡುವೆ 10.25 ಲಕ್ಷ ಕೋಟಿ ರು. ಸಂಪತ್ತು ಗಳಿಸಿದ್ದಾರೆ. 

ಇದೇ ಅವಧಿಯಲ್ಲಿ ಡೀಪ್‌ ಸೀಕ್ ಸಂಸ್ಥಾಪಕ ಲಿಯಾಂಗ್ ವೆನ್‌ಫೆಂಗ್ ಅವರ ಸಂಪತ್ತು ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

2025ರಲ್ಲಿ 9,527 ಕೋಟಿ ಇದ್ದ ಅವರ ಸಂಪತ್ತು 2026ರಲ್ಲಿ 3,76,456 ಕೋಟಿ ರು. ಆಗಿತ್ತು. ಅಂದರೆ ಅವರ ಆದಾಯ ಕೇವಲ ಒಂದು ವರ್ಷದಲ್ಲಿ 3,850 ಪಟ್ಟು ಹೆಚ್ಚಾಗಿತ್ತು. ಲಿಯಾಂಗ್‌ ಅವರು ವಿಶ್ವದ 50 ಅತ್ಯಂತ ಶ್ರಿಮಂತರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.

ಎಲಾನ್ ಮಸ್ಕ್ ಸಾಹಸ ಕಥೆ

ಕೇವಲ ಒಂದು ಲಗೇಜ್ ಬ್ಯಾಗ್ ಮತ್ತು ಕಣ್ಣು ತುಂಬಾ ಕನಸುಗಳನ್ನು ಹೊತ್ತು ಅಮೆರಿಕದ ನೆಲಕ್ಕೆ ಕಾಲಿಟ್ಟಿದ್ದ ಆ ದಕ್ಷಿಣ ಆಫ್ರಿಕಾದ ಹುಡುಗ, ಇಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ಇತ್ತೀಚೆಗಷ್ಟೇ ಅವರ ಕಂಪನಿಯ ಐಪಿಓ 1.77 ಟ್ರಿಲಿಯನ್ ಅಮೆರಿಕನ್‌ ಡಾಲರ್‌ ಮೌಲ್ಯವನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದೆ. 

ಆದರೆ, ಈ ಯಶಸ್ಸಿನ ಹಿಂದಿರುವುದು ಕೇವಲ ಹಣದ ಕಥೆಯಲ್ಲ, ಬದಲಿಗೆ ಅವಮಾನ, ಅಪಹಾಸ್ಯ, ದಿವಾಳಿತನ ಮತ್ತು ಅದನ್ನೆಲ್ಲ ಮೆಟ್ಟಿ ನಿಂತ ಅಪೂರ್ವ ಛಲದ ರೋಚಕ ಮಹಾಕಾವ್ಯ.

ಬಾಲ್ಯದ ಕರಾಳ ದಿನಗಳು

ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನಿಸಿದ ಎಲಾನ್ ಮಸ್ಕ್ ಬಾಲ್ಯ ಅಷ್ಟು ಸುಲಭದ್ದಾಗಿರಲಿಲ್ಲ. ಶಾಲೆಯಲ್ಲಿ ಸಹಪಾಠಿಗಳಿಂದ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಹುಡುಗ ಆತ. ಒಮ್ಮೆ ಸಹಪಾಠಿಗಳು ಆತನನ್ನು ಮೆಟ್ಟಿಲುಗಳಿಂದ ಕೆಳಗೆ ದೂಡಿ, ಪ್ರಜ್ಞೆ ತಪ್ಪುವವರೆಗೆ ಹೊಡೆದಿದ್ದರು. ಆ ಗಾಯಗಳ ಕಲೆಗಳು ಬಹುಶಃ ಇಂದಿಗೂ ಅವರ ಮನಸ್ಸಿನಲ್ಲಿದೆ.

ಹದಿಹರೆಯದಲ್ಲೇ ಉತ್ತರ ಅಮೆರಿಕಾಕ್ಕೆ ವಲಸೆ ಬಂದ ಮಸ್ಕ್ ಕೈಯಲ್ಲಿದ್ದದ್ದು ಕೇವಲ ಒಂದು ಬ್ಯಾಕ್ ಪ್ಯಾಕ್. ಆದರೆ, ಅವರ ತಲೆಯಲ್ಲಿ ಜಗತ್ತನ್ನೇ ಬದಲಾಯಿಸುವ ಕಲ್ಪನೆಗಳಿದ್ದವು. 

ಅವರು ಆರಂಭದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪ್ರವೇಶ ಪಡೆದರು. ಆದರೆ ಕೇವಲ ಎರಡೇ ದಿನಗಳಲ್ಲಿ ಅಲ್ಲಿಂದ ಹೊರಬಂದರು. 

ಆಗಿನ ಪ್ರಮುಖ ಇಂಟರ್ನೆಟ್ ಕಂಪನಿಯಾದ ನೆಟ್‌ಸ್ಕೇಪ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ, ತಾವೇ ಇಂಟರ್ನೆಟ್ ಜಗತ್ತಿನ ಭಾಗವಾಗಲು ಸಾಫ್ಟ್‌ವೇರ್ ಬರೆಯಲು ನಿರ್ಧರಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅತ್ಯಾಚಾರ ಆರೋಪ: ಐಪಿಎಲ್ ಆಟಗಾರ ಅಭಿಷೇಕ ಪೊರೆಲ್ ಬಂಧನಪತ್ನಿ ಮೇಲಿನ ಅನುಮಾನಕ್ಕೆ ಮನೆಯೊಳಗೆ ಜಿಲೆಟಿನ್ ಕಡ್ಡಿ ಸ್ಫೋಟ : ತಂದೆ-ಮಗಳು ಸಾವು11,000 ಅತಿಥಿ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಇಲಾಖೆ ಆದೇಶ ಅನಿವಾರ್ಯವಾಗಿ ರಾಜೀನಾಮೆ ಪತ್ರಿಕೆ ಸಹಿ ಹಾಕಿದೆ : ಬಸವರಾಜ ಹೊರಟ್ಟಿ ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಭವ್ಯ ತಿರಂಗಾ ಯಾತ್ರೆ:ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜಅಧಿವೇಶನದಲ್ಲಿ ಬಿ. ನಾಗೇಂದ್ರ ಉತ್ತರಗಳನ್ನು ಬಹಿಷ್ಕರಿಸಲು ಬಿಜೆಪಿ ನಿರ್ಧಾರ ಒಂದೇ ದಿನ ಬರೋಬ್ಬರಿ 8,347 ಕೋಟಿ ರು. ಗಳಿಸಿದ ಎಲಾನ್ ಮಸ್ಕ್ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಇಂದ ಬೃಹತ್ ಪ್ರತಿಭಟನೆಸಿಂಧನೂರು  ಬಿಜೆಪಿ ಗ್ರಾಮೀಣ ಮಂಡಲ ಬೃಹತ್ ಪ್ರತಿಭಟನೆ!ಹಾನಗಲ್ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಕಾಲುವೆಯ ತಡೆಗೋಡೆ ಕುಸಿತ.!ಕಳಪೆ ಕಾಮಗಾರಿ ಆರೋಪ