ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಮಟ್ಟ ಸಾಧಾರಣ ಹಂತದಲ್ಲಿದೆ.
ಇತ್ತೀಚಿನ ವರದಿಗಳ ಪ್ರಕಾರ, ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 63 ರಿಂದ 70ರ ನಡುವೆ ದಾಖಲಾಗಿದ್ದು, ‘ಸಾಧಾರಣ’ ವಿಭಾಗಕ್ಕೆ ಸೇರಿದೆ.ನಗರದಲ್ಲಿ ಪ್ರಮುಖವಾಗಿ PM10 ಮತ್ತು PM2.5 ಕಣಗಳ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ.
ಬೆಂಗಳೂರಿನ ವಿವಿಧ ಪ್ರದೇಶಗಳ ಪರಿಸ್ಥಿತಿ
ಬೆಂಗಳೂರಿನ ಪೀಣ್ಯ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಸಾಧಾರಣ ಮಟ್ಟದಲ್ಲಿದ್ದರೆ, ಮೈಸೂರು ರಸ್ತೆ ಹಾಗೂ ಬಿಡದಿ ವ್ಯಾಪ್ತಿಯಲ್ಲಿ ವಾಯು ಗುಣಮಟ್ಟ ತುಸು ಉತ್ತಮವಾಗಿದೆ.
ನಗರದ ಪ್ರಮುಖ ಜಂಕ್ಷನ್‌ಗಳಾದ ಸಿಲ್ಕ್ ಬೋರ್ಡ್, ಕೆ.ಆರ್. ಪುರ ಹಾಗೂ ಮೆಜೆಸ್ಟಿಕ್ ಭಾಗಗಳಲ್ಲಿ ವಾಹನ ದಟ್ಟಣೆಯಿಂದಾಗಿ ಧೂಳಿನ ಕಣಗಳ (PM10) ಮಟ್ಟ ಹೆಚ್ಚಾಗಿ ದಾಖಲಾಗಿದೆ. ಆದಾಗ್ಯೂ, ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ನಗರದ ಗಾಳಿಯ ಸ್ಥಿತಿ ಅಪಾಯಕಾರಿ ಮಟ್ಟಕ್ಕೆ ತಲುಪಿಲ್ಲ.
ಬೆಳಗಾವಿ/ಬಳ್ಳಾರಿ: ಬಳ್ಳಾರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಅತ್ಯುತ್ತಮವಾಗಿದ್ದು, ಉತ್ತಮ ವಿಭಾಗದಲ್ಲಿ 17 – 30 ದಾಖಲಾಗಿದೆ.
ಮೈಸೂರು ಹಾಗೂ ಮಡಿಕೇರಿ: ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಕೊಡಗಿನ ಮಡಿಕೇರಿಯಲ್ಲಿ ವಾಯು ಮಾಲಿನ್ಯ ಅತ್ಯಂತ ಕಡಿಮೆಯಿದ್ದು, AQI 27 ರಷ್ಟಿದೆ.
ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 35 ರಿಂದ 45 ರ ನಡುವೆ ಇದ್ದು, ಶುದ್ಧ ಗಾಳಿ ಲಭ್ಯವಿದೆ.
ಹುಬ್ಬಳ್ಳಿ-ಧಾರವಾಡ: ಉತ್ತರ ಕರ್ನಾಟಕದ ಅವಳಿ ನಗರಗಳಲ್ಲಿ AQI 50 ರ ಆಜುಬಾಜಿನಲ್ಲಿದ್ದು, ಉತ್ತಮ ವಾತಾವರಣವಿದೆ.


