LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಮೊದಲು SDRF ನಿಧಿ ನೀಡಲಿ: ಪ್ರಲ್ಹಾದ್ ಜೋಶಿ

Advertisement

ಬೆಂಗಳೂರು: ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಗಂಭೀರತೆಯೇ ಇಲ್ಲ. ಹಾಗಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ.

ಮೊದಲು ಎಸ್ ಡಿ ಆರ್ ಎಫ್ ನಿಧಿ ಬಿಡುಗಡೆ ಮಾಡಲಿ ನೋಡೋಣ ಆ ಮೇಲೆ ಕೇಂದ್ರದಿಂದ ಅನುದಾನ ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೊದಲು ಎಸ್ ಡಿ ಆರ್ ಎಫ್ ಫಂಡ್ ಬಿಡುಗಡೆ ಮಾಡಿ ಬಳಿಕೆ ಎನ್ ಡಿ ಆರ್ ಎಫ್ ನಿಧಿಗೆ ಕೇಂದ್ರವನ್ನು ಕೇಳಲಿ ಎಂದರು.

ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರದಲ್ಲಿ ಎಸ್ ಡಿ ಆರ್ ಎಫ್ ಫಂಡ್ ನೀಡಿ ಆಮೇಲೆ ಕೇಂದ್ರವನ್ನು ಕೇಳುತ್ತಿದ್ದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಳೆಯ ದಾಖಲೆಗಳನ್ನೊಮ್ಮೆ ತೆರೆದು ನೋಡಲಿ ಎಂದರು.

ರೈತರಿಗೆ ನೆರವಾಗಲು ಎಸ್ ಡಿ ಆರ್ ಎಫ್ ಫಂಡೇ ಇಲ್ಲ ಇವರಲ್ಲಿ. ಅದನ್ನೂ ತಿಂದು ಖಾಲಿ ಮಾಡಿದ್ದಾರೆ. ತಮ್ಮಲ್ಲಿ ಹಣವಿಲ್ಲ ಎಂಬ ಸತ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ ಎಂದು ಆರೋಪಿಸಿದರು.

ರಾಜೀನಾಮೆಗೆ ಮುಂದಾದ ಶಾಸಕರ ಕ್ಷೇತ್ರ ಮಾತ್ರ ಬರ ಪಟ್ಟಿಗೆ ಸೇರಿಸ್ತಾರೆ. ಈ ಸರ್ಕಾರದಲ್ಲಿ ಶಾಸಕರು ರಾಜೀನಾಮೆಗೆ ಮುಂದಾದರೆ ಆ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತಿದೆ. ಇದು ಸರ್ಕಾರ ನಡೆಸುವ ರೀತಿಯೇ? ಎಂದು ಪ್ರಶ್ನಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KPSC ನೇಮಕಾತಿ ಹಗರಣ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗೆ ಜೈಲೇಗತಿ 5 ದಿನಗಳಲ್ಲೇ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಕೆಇಎ ತಾಲೂಕು ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಶಾರದಾ ವಿದ್ಯಾನಿಕೇತನ ಪಿಯು ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಬರಗಾಲ ಜೋಳದ ಹಣ ಪಾವತಿ ಸೇರಿ ವಿವಿಧ ಬೇಡಿಕೆಗಳಿಗೆ ಜೆಡಿಎಸ್ ಪ್ರತಿಭಟನೆ: ರಾಜಾ ವೆಂಕಟಪ್ಪನಾಯಕ ಆಕ್ರೋಶಬರ ನಿರ್ವಹಣೆಗೆ ರಾಜ್ಯ ಸರ್ಕಾರ ಮೊದಲು SDRF ನಿಧಿ ನೀಡಲಿ: ಪ್ರಲ್ಹಾದ್ ಜೋಶಿಆಸ್ತಿ ಕಲಹದ ಹಿನ್ನೆಲೆ ಕಲ್ಲಿನಿಂದ ಜಜ್ಜಿ ತಾಯಿ - ಮಗನ ಬರ್ಬರ ಹತ್ಯೆಸಾರಿಗೆ ನಿಗಮಗಳು ₹8,000 ಕೋಟಿ ನಷ್ಟದಲ್ಲಿವೆ, ಸಂಬಳ ನೀಡಲು ಹಣವಿಲ್ಲ: ಬೈರತಿ ಸುರೇಶ್ ಹೆಸ್ಕಾಂ ಅಧಿಕಾರಿಗಳ ಮೇಲೆ ಚನ್ನರಾಜ್ ಹಟ್ಟಿಹೊಳಿ ಹಲ್ಲೆ : ಆರೋಪ..?2028ಕ್ಕೂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ : ಸತೀಶ್ ಜಾರಕಿಹೊಳಿಅಬಕಾರಿ, ಶಾಲಾ ಶಿಕ್ಷಣ ಇಲಾಖೆ,ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಗಳ ಪರಿಶೀಲನೆ