LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸ್ಟಿಂಗ್ ಆಪರೇಷನ್‌ ಕೇಸ್ : CCB ತನಿಖೆಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ 

Advertisement

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್‌ ಕಾರ್ಯಾಚರಣೆಯ ವಿಡಿಯೊದಲ್ಲಿರುವುದು ಕಟ್ಟುಕಥೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಸ್ಟಿಂಗ್‌ ಕಾರ್ಯಾಚರಣೆ ಪ್ರಕರಣದ ತನಿಖೆಯ ಕುರಿತು ಪೊಲೀಸ್‌ ಆಯಕ್ತರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ವಿಡಿಯೊ ಮೂಲಕ ಸಿದ್ದರಾಮಯ್ಯ ವಿರುದ್ಧ ಉದ್ದೇಶಪೂರ್ವಕ ನಿರೂಪಣೆ ಮಾಡಲಾಗಿದೆ.ಈ ವಿಚಾರವಾಗಿ ತನಿಖೆ ಮುಂದುವರಿದಿದೆ ಎಂದು ತಿಳಿಸಲಾಗಿದೆ.

ವಿಡಿಯೊಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳನ್ನು ಸೃಷ್ಟಿಸುತ್ತಿವೆ. ಹೀಗಾಗಿ, ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡುತ್ತಿರುವುದಾಗಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಿಡಿಯೊ ಚಿತ್ರೀಕರಣ, ಅದರಲ್ಲಿ ಭಾಗಿಯಾಗಿರುವವರ ಪಾತ್ರದ ಬಗ್ಗೆ ಸಮಗ್ರವಾಗಿ ತನಿಖೆ ಕೈಗೊಳ್ಳಲಾಗುತ್ತಿದೆ. ಇದುವರೆಗೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ಪ್ರಕಾರ ಇದೊಂದು ಕಟ್ಟುಕಥೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಿಡಿಯೊದಲ್ಲಿ ಚಿತ್ರೀಕರಿಸಿರುವಂತಹ ಘಟನೆ ನಡೆದಿದೆ ಎಂಬುದಕ್ಕೆ ಪೂರಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ವಿವರಿಸಲಾಗಿದೆ.

ಚಿತ್ರೀಕರಣಕ್ಕೆ ಬಳಸಲಾಗಿರುವ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದ್ದು, ತಾಂತ್ರಿಕ ಅಂಶಗಳನ್ನು ದೃಢಪಡಿಸುವ ಸಲುವಾಗಿ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ವರದಿಗಾಗಿ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದೆ.ವಿಡಿಯೊದಲ್ಲಿ ಭಾಗಿಯಾದವರ ಉದ್ದೇಶವೇನು ಎಂಬುದರ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 3 ವರ್ಷ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ ಅನುಮತಿ ಇಲ್ಲ: ರಾಜ್ಯ ಸರ್ಕಾರ ಅಧಿಸೂಚನೆಅಹಿಂದ ನಾಯಕತ್ವದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ : ಸತೀಶ್ ಜಾರಕಿಹೊಳಿದೇಶದಲ್ಲಿ ಬಡತನ ಪ್ರಮಾಣ ಶೇ. 27.1ರಿಂದ 2.6ಕ್ಕೆ ಕುಸಿತ: ವಿಶ್ವಬ್ಯಾಂಕ್ ವರದಿನಮಗೆ ಕುಡಿಯಲು ನೀರಿಲ್ಲ, ದನಕರುಗಳಿಗೂ ನೀರಿಲ್ಲ : ಡಿಸಿ ಎದುರು ಗ್ರಾಮಸ್ಥರ ಅಳಲು.:ತಕ್ಷಣ ಸರಿಪಡಿಸಲು ಆದೇಶ.ವಿದ್ಯುತ್ ಶಾಕ್‌ನಿಂದ ಗಾಯಗೊಂಡ ಕೋತಿಗೆ ಚಿಕಿತ್ಸೆ  ಮಾಡಿ ಮಾನವೀಯತೆ ಮೆರೆದ ಅರಣ್ಯ ಅಧಿಕಾರಿಗಳುನವೆಂಬರ್ 2 ರಿಂದ ಕರ್ನಾಟಕ- ಆಸ್ಸಾಮ್ ರಣಜಿ ಟ್ರೋಫಿ ಪಂದ್ಯ ಎಸ್‌ಐಆರ್‌ ಕುರಿತು ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ : ಶಾಸಕ ಮಹಾಂತೇಶ ಕೌಜಲಗಿ ಭಾವುಕ ಪೋಸ್ಟ್ಕೇಪ್ ಟೌನ್ ಟೆಸ್ಟ್ : ಆಸ್ಟ್ರೇಲಿಯಾ ಉತ್ತಮ ಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆ 55 ರನ್ ಗಳ ಗೆಲುವು