LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಗೃಹಲಕ್ಷ್ಮಿ ಗ್ಯಾರಂಟಿಯನ್ನ ಒಂದು ವರ್ಷ ನಿಲ್ಲಿಸಿ: ಕಾಂಗ್ರೆಸ್‌ ಎಂಎಲ್‌ಸಿ ಕಮಕನೂರ್ ಆಗ್ರಹ 

Advertisement

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರೇ ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವನ್ನು ಎದುರಿಸಲು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಅತ್ಯಗತ್ಯ.

ಹೀಗಾಗಿ, ಗೃಹಿಣಿಯರಿಗೆ ತಿಂಗಳಿಗೆ 2,000 ರೂ. ನೀಡುವ 'ಗೃಹಲಕ್ಷ್ಮಿ' ಯೋಜನೆಯನ್ನು ಒಂದು ವರ್ಷಗಳ ಕಾಲ ತಡೆಹಿಡಿದು, ಆ ಹಣವನ್ನು ಪ್ರಮುಖ ನೀರಾವರಿ ಯೋಜನೆಗಳಿಗೆ ಬಳಸಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ (MLC) ತಿಪ್ಪಣ್ಣ ಕಮಕನೂರ್ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ತಿನ ಕಲಾಪದಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಮಕನೂರ್, ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಅಗತ್ಯ ಎಂದಿದ್ದಾರೆ.

ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ

ಕಲಾಪದಲ್ಲಿ ಮಾತನಾಡಿದ ಕಮಕನೂರ್, ರಾಜ್ಯದಲ್ಲಿ ಬರಗಾಲವನ್ನು ಸಮರ್ಥವಾಗಿ ಎದುರಿಸಬೇಕಾದರೆ ಮೇಕೆದಾಟು ಸಮತೋಲನ ಜಲಾಶಯ, ಮೇಲ್ದಂಡೆ ಕೃಷ್ಣ ಯೋಜನೆ ಹಂತ-3, ಕಳಸಾ-ಬಂಡೂರಿ ನಾಲಾ ಯೋಜನೆ, ಮೇಲ್ದಂಡೆ ಭದ್ರಾ ಯೋಜನೆ, ನವಲಿ ಸಮತೋಲನ ಜಲಾಶಯ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಇದಕ್ಕಾಗಿ ನೀರಾವರಿ ಕಾಮಗಾರಿಗಳಿಗೆ ಕನಿಷ್ಠ ಒಂದು ವರ್ಷಗಳ ಕಾಲ ಪ್ರಥಮ ಆದ್ಯತೆ ನೀಡಬೇಕಾಗಿದೆ ಎಂದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೊಡ್ಡ ಗುರಿಯೊಂದಿಗೆ ಉತ್ತಮ ಆರಂಭ ಮಾಡಿದ ಇಂಗ್ಲೆಂಡ್ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ  ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ಪರಿಶೀಲನೆಕರ್ತವ್ಯ ಲೋಪ ಹಾಗೂ ಕಿರುಕುಳ ಆರೋಪ : ಎಂ.ಆರ್.ಡಬ್ಲ್ಯು ರಾಘವೇಂದ್ರ ಅಮಾನತಿಗೆ ದಲಿತ ಸಂಘಟನೆಗಳ ಆಗ್ರಹಮತದಾನದ ಹಕ್ಕು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ: ಪ್ರಕಾಶ್ ರೈಎಶಿಯನ್ ಗೇಮ್ಸ್ 5 ನೇ ದಿನ: ಭಾರತಕ್ಕೆ ಮತ್ತೆ 2 ಪದಕ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಊಟ ಖಾಲಿ ಎಂದಿದ್ದಕ್ಕೆ ಡಾಬಾ ಮಾಲೀಕನ ಜೈಲು ವಾರ್ಡರ್ ಹಲ್ಲೆ : ಚಿಕಿತ್ಸೆ ಫಲಿಸದೇ ಸಾವು ಸೆಮಿ ಪೈನಲ್ ತಲುಪಿದ ಭಾರತ ಮಹಿಳಾ ಕಬ್ಬಡ್ಡಿ ತಂಡ KPSC' ಹಗರಣ ಹೊರ ಬಂದ್ರೆ ಹಲವು ಮಂತ್ರಿಗಳು ಜೈಲಿಗೆ : ಛಲವಾದಿ ನಾರಾಯಣಸ್ವಾಮಿ ಗೃಹಲಕ್ಷ್ಮಿ ಗ್ಯಾರಂಟಿಯನ್ನ ಒಂದು ವರ್ಷ ನಿಲ್ಲಿಸಿ: ಕಾಂಗ್ರೆಸ್‌ ಎಂಎಲ್‌ಸಿ ಕಮಕನೂರ್ ಆಗ್ರಹ