ಮಾನ್ವಿ : ವಿದ್ಯಾರ್ಥಿಗಳು ಶಿಸ್ತು ನಿಷ್ಠೆಯಿಂದ ಶ್ರದ್ದೆಯಿಂದ ಪ್ರೀತಿಯಿಂದ ಹಿರಿಯರು ಹೇಳಿದ ನುಡಿಗಳನ್ನು ಆಲಿಸಿಕೊಂಡು ಆದರ್ಶ ನಾಯಕರ ನುಡಿಗಳನ್ನು ತಿಳಿದು ಕೊಂಡು ವಿದ್ಯಾರ್ಥಿಗಳು ಕೂಡ ಮುಂದೆ ಆದರ್ಶ ವ್ಯಕಿಗಳಾಗಿ ಎಂದು ಹೇಳಿದರು.ಪಟ್ಟಣದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಓಲೇಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಇಂದು 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಾಡೀನಾದ್ಯಂತ ಆಚರಿಸಲಾಯಿತು.ಅನೇಕ ಮಹನೀಯರ ತ್ಯಾಗ ಬಲಿದಾನದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಆಂಜನೇಯ ನಸಲಾಪುರ ಮಾತನಾಡಿ ದೇಶ ನಮಗೆ ಏನು ಕೊಟ್ಟಿದೆ ಅನ್ನುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎನ್ನುವುದನ್ನು ಪ್ರತಿಯಯೊಬ್ಬ ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಂಡು ಕಲಿಸಿದ ಗುರುಗಳಿಗೆ ಹಾಗೂ ತಂದೆ ತಾಯಿಗಳಿಗೆ ಗೌರವನ್ನು ಕೊಡಬೇಕು ಎಂದುಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಖಾಸಗಿ ಶಾಲೆಗಳ ಧೈಹಿಕ ಶಿಕ್ಷಕರ ಸಂಘದ ತಾಲೂಕಾದ್ಯಾಕ್ಷರಾದ ರಂಗರಾವ್ ಕುಲಕರ್ಣಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರದ್ದೆ ಶಿಸ್ತನ್ನು ಬೆಳಸಿಕೊಂಡು ಉತ್ತಮವಾದ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ ವೆಂಕಟೇಶ್ ಓಲೇಕಾರ್, ಎಸ್ ಎಮ್ ವಿ ಓಲೇಕಾರ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀದೇವಿ ಡಾ. ವೆಂಕಟೇಶ್ ಓಲೇಕಾರ್ ಪ್ರೌಢ ಶಾಲೆಯ ಆಡಳಿತಾಧಿಕಾರಿಗಳು ಶಂಕರಪ್ಪ ನಕ್ಕುಂದಿ, ಪ್ರೌಢ ಶಾಲೆಯ ಮುಖ್ಯಗುರು ಚಂದ್ರಶೇಖರ ಪಾಟೀಲ್ ಉಪನ್ಯಾಸಕರಾದ ಶರಣಬಸವ ಕರಡಿಗುಡ್ಡ ಅಂಬಣ್ಣ ನಾಯಕ ನಾಗರಾಜ ಚಿಮಲಾಪುರ ನೀಲಮ್ಮ ಸ್ವಾತಿ ಅನುಸೂಯ ಸಂತೋಷ ಪದವಿ ಪದವಿ ಪೂರ್ವ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕಿಯಾದ ಸುಮಂಗಳ ನಿರೂಪಿಸಿದರು ಅಮರಮ್ಮ ಸ್ವಾಗತಿಸಿದರು ರೂಬಿಯ ವಂದಿಸಿದರು.
ವರದಿ :ಆಂಜನೇಯ ನಸಲಾಪುರ


