LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಡೇಟಾ ಆಪರೇಟರುಗಳಿಗೆ ಮೂಲಭೂತ ಸೌಲಭ್ಯ ನೀಡಲು ಸುಧಾಕರ ಒತ್ತಾಯ

Advertisement
ಬಾಗೆಪಲ್ಲಿ:  ಬಾಗೇಪಲ್ಲಿ ತಹಶೀಲ್ದಾರ್ ಕಛೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ
ಬಾಗೇಪಲ್ಲಿ ತಾಲ್ಲೂಕು ತಹಶೀಲ್ದಾ‌ರ್ ರವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಸುಧಾಕರ್
ರಾಜ್ಯಾಧ್ಯಕ್ಷರು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ (ರಿ) ಅವರು ಬಾಗೇಪಲ್ಲಿ ತಾಲೂಕ್ ಕಚೇರಿ ಭೇಟಿ ನೀಡಿ ಡೇಟಾ ಆಪರೇಟರ್ಗಳ ಜೊತೆ ಚರ್ಚೆ ನಡೆಸಿ ಮನವಿ ಪತ್ರವನ್ನು ನೀಡಿ ಮಾತನಾಡಿದರು.

ಬಾಗೇಪಲ್ಲಿ ತಾಲ್ಲೂಕು ಡೇಟಾ ಆಪರೇಟರ್ ಗಳಿಂದ. ದೂರು ಬಂದ ಹಿನ್ನಲೆ ನಾವು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ,ಅದೇ ರೀತಿಯಾಗಿ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ರವರಿಗೆ ಮನವಿಯನ್ನ ನೀಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಗೇಪಲ್ಲಿ ತಾಲೂಕ ಕಚೇರಿಗೆ ಭೇಟಿ ನೀಡಲಾಗಿ ತಾಲೂಕ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡೇಟಾ ಆಪರೇಟರ್ ಗಳ ಜೊತೆ ಚರ್ಚಿಸಿ ಅವರ ಸಮಸ್ಯೆಗಳ ಕೇಳಿ ಇಂದು ನಾವು ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನ ನೀಡಲಾಗಿದೆ.

ತಹಶೀಲ್ದಾರ್ ಕಛೇರಿಗೆ ಪ್ರತಿ ನಿತ್ಯಾ ನೂರಾರು ಸಾರ್ವಜನಿಕರು ಬೇಟಿನೀಡುತ್ತಿದ್ದು ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ,
ಇಂತಹ ಕಛೇರಿಯಲ್ಲಿ ಕೆಲಸ ನಿರ್ವಹಿಸಲು ಒಳ್ಳೆಯ ಆಸನಗಳ ವ್ಯವಸ್ಥೆ ಇರುವುದಿಲ್ಲ,
ಮತ್ತು ನೌಕರರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯವು ಸ್ವಚ್ಚತೆಯಿಂದ ಕೋಡಿರುವುದಿಲ್ಲ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇರುವುದಿಲ್ಲ ಮತ್ತು ನೌಕರರ ಕೆಲಸದ ಸಮಯ ಹೆಚ್ಚುಮಾಡಿದ್ದು ಯಾವುದೇ ಭದ್ರತೆ ಇಲ್ಲದೆ ಸಂಜೆ
6 ಗಂಟೆಯ ಮೇಲೆಯು ಸಹ ಮಹಿಳಾ ನೌಕರರ ಕೈನಲ್ಲಿ ಕೆಲಸವನ್ನು ಮಾಡಿಸುತ್ತಿದ್ದು
ಇದು ಕಾನೂನು ಬಾಹಿರವಾಗಿರುತ್ತದೆ.
ಈ ಎಲ್ಲಾ ಮೇಲ್ಕಂಡ ವಿಷಯಗಳ ಬಗ್ಗೆ ತಾವು ಕೂಡಲೇ ಕ್ರಮ ವಹಿಸಬೇಕೆಂದು ತಮ್ಮಲ್ಲಿ ಮನವಿ
ಮನವಿ ಪತ್ರವನ್ನು ಸಲ್ಲಿಸಿದ್ದೇವೆ.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾಗಿರುವ ಮನಿಷಾ ಪತ್ರೆ ಅವರು ಮಾತನಾಡಿ
ತಕ್ಷಣವೇ ಈ ಬಗ್ಗೆ ಸಮಸ್ಯೆಗಳ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಸ್ಪಂದಿಸುವುದಾಗಿ ತಾಲೂಕು ದಂಡಾಧಿಕಾರಿಗಳು ತಿಳಿಸಿದ್ದಾರೆ.
ಆ ವಿಚಾರವಾಗಿ ಅವರು ಸ್ಪಂದಿಸಿದಿದ್ದಲ್ಲಿ ಸರ್ಕಾರದ ಮಟ್ಟದಲ್ಲಿ ಆ ವಿಚಾರಗಳನ್ನು ಗಮನಕ್ಕೂ ತಂದು ಹೊರಗೆತ್ತಿಗೆ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನ ಬಗೆಹರಿಸುವುದಾಗಿ ರಾಜ್ಯಾಧ್ಯಕ್ಷರಾದ ಸುಧಾಕರ್ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ವಕ್ತಾರಾದ ಸುನೀಲ್ ರಾಜ್ಯ ಉಪಾಧ್ಯಕ್ಷರಾದ ಶ್ರೀ ಗಂಗಾಧರ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಂದಿನಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಶ್ ಜಿಲ್ಲಾ ಸಮಿತಿಯ ಸದ್ಯಸರಾದ ರವಿ, ರಮೇಶ್ ಇತರರು ಹಾಜರಿದ್ದರು.

ವರದಿ :ಯಾರಬ್. ಎಂ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ