LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸತೀಶ್ ಜಾರಕಿಹೊಳಿಗೆ ಹೆಚ್ಚಿದ ಸಂಕಷ್ಟ : ಪ್ರಕರಣ ದಾಖಲಿಸಲು 'ED' ಸಿದ್ಧತೆ 

Advertisement

ಬೆಂಗಳೂರು: ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ಸಂಕಷ್ಟ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ. ಹವಾಲಾ ಮೂಲದ ಅಕ್ರಮ ಹಣ ವಹಿವಾಟು ನಡೆದಿರುವ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಸಚಿವರ ವಿರುದ್ಧ ಅಧಿಕೃತ ಪ್ರಕರಣ ದಾಖಲಿಸಿ, ಎಫ್‌ಐಆರ್ ಸಿದ್ಧಪಡಿಸಲು ಇಡಿ ಅಧಿಕಾರಿಗಳು ತೀವ್ರ ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕ ಮತ್ತು ಗೋವಾ ವಲಯದ ಇಡಿ ಜಂಟಿ ನಿರ್ದೇಶಕ ರಾಹುಲ್ ಜಾರ್ಜ್ ಅವರಿಗೆ ಇಡಿ ಕೇಂದ್ರ ಕಚೇರಿಯಿಂದ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಕಳೆದ ವರ್ಷವೇ ನಿವೃತ್ತಿ ಹೊಂದಬೇಕಿದ್ದ ರಾಹುಲ್ ಜಾರ್ಜ್, ಒಂದು ವರ್ಷದ ಸೇವಾವಿಸ್ತರಣೆ ಪಡೆದುಕೊಂಡಿದ್ದು, ರಾಜ್ಯದ ಪ್ರಮುಖ 13 ಪ್ರಕರಣಗಳನ್ನು ಕೇವಲ ಒಂದು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಅವರಿಗೆ ಇಡಿ ನಿರ್ದೇಶಕರು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಪ್ರಕರಣಗಳ ತನಿಖೆ ಏಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿರುವ ಕೇಂದ್ರ ಇಡಿ ಮುಖ್ಯಸ್ಥರು, ಕೂಡಲೇ ತನಿಖೆಗೆ ವೇಗ ನೀಡುವಂತೆ ಬಿಗ್ ಟಾಸ್ಕ್ ನೀಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಜಾಪ್ರಭುತ್ವದ ಆಡಳಿತ, ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮದ ಮೌಲ್ಯವನ್ನು ನೆನಪಿಸುತ್ತದೆ : ತಹಶೀಲ್ದಾರ್ ಹೊಂಕಣದವರಹಿಟ್ & ರನ್ ಗೆ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಸಾವುಸತೀಶ್ ಜಾರಕಿಹೊಳಿಗೆ ಹೆಚ್ಚಿದ ಸಂಕಷ್ಟ : ಪ್ರಕರಣ ದಾಖಲಿಸಲು 'ED' ಸಿದ್ಧತೆ ಜಿಂಬಾಬೆ ವಿರುದ್ಧ ಕಾಂಗರೂಗಳಿಗೆ 59 ರನ್ ಗಳ ಗೆಲುವು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ 119 ರನ್ ಗಳ ಸುಲಭ ಜಯಇನ್ನೊಂದು ಪಂದ್ಯ ಇರುವಂತೆಯೇ ಸರಣಿ ಗೆದ್ದ ಭಾರತ ದುಬೈನಲ್ಲಿ ಕಾಂತಾರ ಸಿನಿಮಾಗೆ 9 ಪ್ರಶಸ್ತಿ : ದೇವರಿಗೆ ಅರ್ಪಿಸುತ್ತೇನೆ ಎಂದ ರಿಷಬ್ ಶೆಟ್ಟಿ ನಟ ದರ್ಶನ್‌ಗೆ ಬಿಗ್ ಡೇ : ಇಂದು ಎರಡು ಪ್ರಮುಖ ಅರ್ಜಿಗಳ ವಿಚಾರಣೆ, ತೀರ್ಪುಶಿರಡಿಯಲ್ಲಿ ಭಕ್ತರಿಗೆ ಮೋಸದ ಜಾಲ : ಪೂಜಾ ಸಾಮಗ್ರಿ ಕಿಟ್‌ನಲ್ಲಿ ಪ್ಲಾಸ್ಟಿಕ್ ಬಾದಾಮಿ ಪತ್ತೆಹೊಟ್ಟೆನೋವು ತಾಳಲಾರದೆ ಯೋಧ ಆತ್ಮಹತ್ಯೆ