LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶುಗರ್ ಇದ್ಯಾ? ಹಾಗಿದ್ರೆ ಈ ಸೊಪ್ಪನ್ನು ತಪ್ಪದೇ ಸೇವಿಸಿ

Advertisement
ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ಸೊಪ್ಪು, ತರಕಾರಿಗಳ ಸೇವನೆ ಮಾಡುತ್ತಾರೆ. ಈ ರೀತಿಯ ಆಹಾರಕ್ರಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ಸೊಪ್ಪುಗಳಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತದೆ. ಈ ರೀತಿ ಆರೋಗ್ಯಕ್ಕೆ ಪೂರಕವಾಗಿರುವ ಸೊಪ್ಪು, ತರಕಾರಿಗಳಲ್ಲಿ ಕೆಂಪು ಹರಿವೆಯೂ ಒಂದು. ಅನೇಕರಿಗೆ ಈ ಸೊಪ್ಪಿನ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಆದರೆ ಈ ಸ್ಟೋರಿ ಕೆಂಪು ಹರಿವೆಯ ಸೇವನೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.

ಸೊಪ್ಪು, ತರಕಾರಿಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ನಿಮಗೆ ತಿಳಿದಿರುತ್ತೆ. ಆದರೆ ಸೊಪ್ಪು ಅಥವಾ ತರಕಾರಿ (Greens, vegetables) ಯಾವ ರೀತಿಯ ಆರೋಗ್ಯ (Health) ಸಮಸ್ಯೆಗೆ ಒಳ್ಳೆಯದು? ಯಾವ ಸೊಪ್ಪನ್ನು ಯಾರು ತಿಂದರೆ ಒಳ್ಳೆಯದು? ಅದರಿಂದ ನಮ್ಮ ದೇಹಕ್ಕೆ ಸಿಗುವ ಪ್ರಯೋಜನ ಎಂತದ್ದು ಎಂಬುದರ ಬಗ್ಗೆ ತಿಳಿದಿರಬೇಕಾಗುತ್ತದೆ. ಈ ರೀತಿ ಆರೋಗ್ಯಕ್ಕೆ ಪೂರಕವಾಗಿರುವ ಸೊಪ್ಪು, ತರಕಾರಿಗಳಲ್ಲಿ ಕೆಂಪು ಹರಿವೆಯೂ (Red Amaranth) ಒಂದು. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎಂಬುದೇ ಬೇಸರದ ಸಂಗತಿ. ಇನ್ನು ಮುಂದೆ, ನೀವು ಇದನ್ನು ಎಲ್ಲೇ ನೋಡಿದರೂ ಮನೆಗೆ ತರುವುದನ್ನು ಮರೆಯಬೇಡಿ. ಏಕೆಂದರೆ ಇದನ್ನು ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಈ ಸೊಪ್ಪಿನ ಉಪಯೋಗವೇನು? ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ನಾವು ಪ್ರತಿನಿತ್ಯ ಸೇವನೆ ಮಾಡುವ ಸೊಪ್ಪು, ತರಕಾರಿಗಳಲ್ಲಿಯೇ ಹಲವಾರು ವಿವಿಧಗಳಿದ್ದು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ತರಕಾರಿಗಳನ್ನು ಸೇವನೆ ಮಾಡಬೇಕಾಗುತ್ತದೆ. ಈ ಕೆಂಪು ಹರಿವೆ ಸೊಪ್ಪಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವಾದರೂ ಕೂಡ ಇವುಗಳನ್ನು ತಿನ್ನದೆ ಇರಬಾರದು. ಈ ಹರಿವೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳು ಬರುವುದನ್ನು ತಡೆಯಬಹುದು. ಜೊತೆಗೆ ಇದರ ಸೇವನೆಯಿಂದ ಒತ್ತಡ ಕಡಿಮೆಯಾಗಿ ಮನಸ್ಸು ಹಗುರವಾಗುತ್ತದೆ.

ಕೆಂಪು ಹರಿವೆಯಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನ:
ಕೆಂಪು ಹರಿವೆ ಅಥವಾ ಕೆಂಪು ಪಾಲಕ್ ಸೊಪ್ಪಿನಲ್ಲಿ ಪೊಟ್ಯಾಸಿಯಮ್ ಅಂಶ ಹೇರಳವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಹೃದಯದ ಆರೋಗ್ಯವು ಸುಧಾರಿಸುತ್ತದೆ.

ತೂಕ ಇಳಿಸಲು ಪ್ರಯತ್ನಿಸುವವರು ಈ ಕೆಂಪು ಹರಿವೆ ಸೊಪ್ಪನ್ನು ಆಯ್ಕೆ ಮಾಡಬಹುದು. ಇದು ಫೈಬರ್ ನಿಂದ ಸಮೃದ್ಧವಾಗಿದ್ದು, ನಿಮಗೆ ಶಕ್ತಿಯನ್ನು ತುಂಬಲು ಸಹಾಯಕವಾಗಿದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ಪದೇ ಪದೇ ತಿನ್ನುವ ಕೆಟ್ಟ ಅಭ್ಯಾಸದಿಂದ ಮುಕ್ತಿ ಸಿಗುತ್ತದೆ.

ಮಧುಮೇಹ ಇರುವವರು ಈ ಕೆಂಪು ಹರಿವೆಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ಕಣ್ಣಿನ ಸಮಸ್ಯೆಗಳನ್ನು ಕಡಿಮೆ ಮಾಡುವ ಮೂಲಕ ನಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿರುವುದರಿಂದ ಮೂಳೆಗಳ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಅದೇ ರೀತಿ, ಕೆಂಪು ಹರಿವೆಯಲ್ಲಿ ಹೇರಳವಾಗಿ ಕಬ್ಬಿಣಾಂಶ ಕಂಡುಬರುತ್ತದೆ. ಆದ್ದರಿಂದ, ಇದನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಗಳು ಬರುವುದಿಲ್ಲ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತಕ್ಷಣದ ಶಕ್ತಿಯನ್ನು ನೀಡುತ್ತದೆ. ಇದು ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಕೆಂಪು ಹರಿವೆ ಸೊಪ್ಪಿನಲ್ಲಿ ಹೇರಳ ಪೌಷ್ಠಿಕಾಂಶವಿದೆ. ವಿಟಮಿನ್ ಇ, ಸಿ ಮತ್ತು ಕೆ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳಿಂದ ತುಂಬಿದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಸ್ವತಂತ್ರ ರಾಡಿಕಲ್‍ಗಳ ವಿರುದ್ಧ ಹೋರಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ