LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸಚಿವ ಲಕ್ಷ್ಮಣ ಸವದಿಗೆ ಸಮನ್ಸ್‌ ಜಾರಿ : ಖುದ್ದು ಹಾಜರಾಗಲು ಕೋರ್ಟ್​​​​​ಗೆ ಆದೇಶ 

Advertisement

ಅಥಣಿ: ಕಳೆದ 2018ರಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಲಕ್ಷ್ಮಣ ಸವದಿ  ಅವರಿಗೆ ಅಥಣಿಯ ನಾಲ್ಕನೇ ಜೆಎಂಎಫ್‌ಸಿ (JMFC) ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಅಕ್ಟೋಬರ್ 9ರಂದು ಖುದ್ದು ಹಾಜರಾಗಿ ವಿಚಾರಣೆ ಎದುರಿಸುವಂತೆ ನಿರ್ದೇಶನ ನೀಡಿದೆ.

ತಳವಾರ ಸಮಾಜಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂದು ಲಕ್ಷ್ಮಣ ಸವದಿ ಅವರನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಸವದಿ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂದು ರಾಜು ಜಮಖಂಡಿಕರ್ ಆರೋಪಿಸಿದ್ದರು.

ಲಕ್ಷ್ಮಣ ಸವದಿ ಅವರ ಸಮ್ಮುಖದಲ್ಲೇ ಘಟನೆ ನಡೆದಿದ್ದು, ಅವರ ಪ್ರಚೋದನೆಯಿಂದಲೇ ಗಲಾಟೆ ನಡೆದಿದೆ ಎಂಬ ಆರೋಪವನ್ನು ದೂರುದಾರರು ಮಾಡಿದ್ದರು. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಜು ಜಮಖಂಡಿಕರ್ ಎಂಬುವವರು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ.

ಪ್ರಕರಣದ ವಿಚಾರಣೆ ಮುಂದುವರಿಸಿರುವ ನ್ಯಾಯಾಲಯ, ಇದೀಗ ಲಕ್ಷ್ಮಣ ಸವದಿ ಅವರು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿದ್ದು, ಅ.9ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.‌

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ ಗೆ 223 ರನ್ ಗಳ ಸುಲಭ ಗೆಲುವು ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ನೀಡಬೇಕು: ರೈತರ ಮನವಿಮಾನ್ವಿಯಲ್ಲಿ ಭವ್ಯ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ ನಿರ್ಮಾಣಕ್ಕೆ ಶೀಘ್ರ ಕ್ರಮ: ಎನ್.ಎಸ್ ಬೋಸರಾಜುಪ್ರದೋಷ್ ಮಾಫಿ ಸಾಕ್ಷಿ ವಿಚಾರಣೆ ವೇಳೆ ತಲೆ ಮೇಲೆ ಕೈ ಇಟ್ಟು ಕುಳಿತ ದರ್ಶನ್ಸಚಿವ ಲಕ್ಷ್ಮಣ ಸವದಿಗೆ ಸಮನ್ಸ್‌ ಜಾರಿ : ಖುದ್ದು ಹಾಜರಾಗಲು ಕೋರ್ಟ್​​​​​ಗೆ ಆದೇಶ ವಿಜಯೇಂದ್ರ ಕ್ಷೇತ್ರದಿಂದಲೇ ಭಾರತ್ ಜೋಡೋ-2 ಪಾದಯಾತ್ರೆ: ಬಿ.ಕೆ.ಹರಿಪ್ರಸಾದ್ ಘೋಷಣೆ ರಾಜನಾಥ್ ಸಿಂಗ್ ಭೇಟಿಯಾದ ಡಿ.ಕೆ ಶಿವಕುಮಾರ್ : ಪ್ರಮುಖ ಬೇಡಿಕೆಗಳ ಕುರಿತು ಮನವಿ ಡಿವೋರ್ಸ್ ಗೆ ವಿರೋಧ : ಪತಿ ಮನೆ ಮುಂದೆ ನಾಲ್ಕು ದಿನಗಳಿಂದ ಧರಣಿ ಕುಳಿತ ಪತ್ನಿರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ನೀಡಬೇಕು:ನೀರಮಾನ್ವಿ ಗ್ರಾಮದ ರೈತರ ಮನವಿಕಿತ್ತೂರ ಉತ್ಸವದ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ : ಸಚಿವ ಸತೀಶ ಜಾರಕಿಹೊಳಿ