LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಅನೈತಿಕ ಸಂಬಂಧ ಶಂಕೆ : ಪತ್ನಿಯ ಕತ್ತು ಹಿಸುಕಿ ಹತ್ಯೆಗೈದ ಪತಿ

Advertisement

ಕಲಬುರಗಿ: ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿ, ಆಕೆಯನ್ನು ಪತಿಯೇ ಕತ್ತು ಹಿಸುಕಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಶರಣಶಿರಸಗಿ ಬಳಿ ನಡೆದಿದೆ. 

ಕೊಲೆಯಾದ ದುರದೃಷ್ಟಕರ ಮಹಿಳೆಯನ್ನು ರೇಣುಕಾ ಶಿಂಧೆ (38) ಎಂದು ಗುರುತಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಸಂಜಯ್ ಎಂಬಾತನೊಂದಿಗೆ ವಿವಾಹವಾಗಿದ್ದ ರೇಣುಕಾ, ಶರಣಶಿರಸಗಿ ಬಳಿ ಪತಿಯೊಂದಿಗೆ ವಾಸವಾಗಿದ್ದರು.

ಇತ್ತೀಚೆಗೆ ರೇಣುಕಾ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತಿ ಸಂಜಯ್ ತೀವ್ರವಾಗಿ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಪದೇ ಪದೇ ತೀವ್ರ ಜಗಳ ನಡೆಯುತ್ತಿತ್ತು..

ಅದರಂತೆ ನಿನ್ನೆ ರಾತ್ರಿಯೂ ಕೂಡ ಇಬ್ಬರ ನಡುವೆ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕೌಟುಂಬಿಕ ಕಲಹ ತಾರಕಕ್ಕೇರಿದೆ. ಈ ವೇಳೆ ಆಕ್ರೋಶಗೊಂಡ ಸಂಜಯ್, ಪತ್ನಿ ರೇಣುಕಾಳ ಕತ್ತು ಹಿಸುಕಿ ಸ್ಥಳದಲ್ಲೇ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಟ್ಟುಹಬ್ಬದ ಸಂಭ್ರಮದಲ್ಲೂ ಮಾನವೀಯತೆಯ ಸೇವೆಗೆ ಮುನ್ನುಡಿ ಬರೆದ ಜೀನೂರಿನ ಭಾಗ್ಯಶ್ರೀರಷ್ಯಾದಲ್ಲಿ ಯುದ್ಧ ವಿಮಾನ ಪತನ : ಆರು ಮಂದಿ ದಾರುಣ ಸಾವುಶಾಲಾ ವಾಹನ ಹರಿದು ಒಂದೂವರೆ ವರ್ಷದ ಮಗು ದಾರುಣ ಸಾವು ಕೊಕಟನೂರಿನ ಹೆಮ್ಮೆಗೆ ಮತ್ತೊಂದು ಗರಿವಾಲ್ಮೀಕಿ ನಿಗಮ ತಾಲೂಕ ಅಧಿಕಾರಿ ಗಜೇಂದ್ರ ಸಾರ್ವಜನಿಕರ ಜೊತೆ ದುರವರ್ತನೆ             ವಾಲ್ಮೀಕಿ ನಿಗಮ ತಾಲೂಕ ಅಧಿಕಾರಿ ಗಜೇಂದ್ರ ಸಾರ್ವಜನಿಕರ ಜೊತೆ ದುರವರ್ತನೆ             ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತಗೊಳಿಸಿದರೆ ಹುಷಾರ್: ಡಿ.ಕೆ ಶಿವಕುಮಾರ್ ಖಡಕ್ ಆದೇಶ444 ಕೋಟಿ ಟೆಂಡರ್ ಗೋಲ್‌ಮಾಲ್ ಆರೋಪ : ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ, ಅಶೋಕ್ ಖೇಣಿಗೆ ಒದ್ದು ಒಳಗೆ ಹಾಕಿ:ಕುಮಾರಸ್ವಾಮಿ ಬೈಲಹೊಂಗಲ : ವಿಚ್ಛೇದನ ಕೇಳಿದ್ದ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ