ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಹಾಗೂ ಮಹಾರಾಷ್ಟç ಮಂಡಳ ಟೆಬಲ್ ಟೆನಿಸ್ ಅಕಾಡೆಮಿ ಸಹಯೋಗದಲ್ಲಿ ಜೂನ್ ೬ ಮತ್ತು ೭ ರಂದು ಆರ್‌ಐಡಿ ೩೧೭೦ ಜಿಲ್ಲಾ ಓಪನ್ ಟೆಬಲ್ ಟೆನ್ನಿಸ್ ಪಂದ್ಯಾವಳಿಗಳನ್ನು ಮಹಾರಾಷ್ಟç ಮಂಡಳ ಟೆಬಲ್ ಟೆನಿಸ್ ಮಂಡಳದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಗುಲ್ಜಾರ್ ಅಹ್ಮದ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಪಂದ್ಯಾವಳಿಗಳು ಅಂಡರ್-೧೩ ಬಾಲಕರ ಮತ್ತು ಬಾಲಕಿಯರ, ಅಂಡರ್-೧೫ ಬಾಲಕರ ಮತ್ತು ಬಾಲಕಿಯರ, ಅಂಡರ್-೧೯ ಬಾಲಕರ ಮತ್ತು ಬಾಲಕಿಯರ, ಓಪನ್ ಪುರುಷ ಮತ್ತು ಮಹಿಳಾ, ವೇಟರನ್ ವಿಭಾಗಗಳಲ್ಲಿ (೪೦ ವರ್ಷ ಮೇಲ್ಪಟ್ಟವರು) ನಡೆಯಲಿವೆ ಎಂದರು.
ಯುವ ಪ್ರತಿಭೆಗಳನ್ನು ಉತ್ತೇಜಿಸುವುದು ಹಾಗೂ ಟೆಬಲ್ ಟೆನಿಸ್ ಆಟಗಾರರಿಗೆ ಉತ್ತಮ ಸ್ಪರ್ಧಾತ್ಮಕ ವೇದಿಕೆ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ಟೆಬಲ್‌ಗಳು ಇರಲಿದ್ದು, ರಾಜ್ಯದ ವಿಒವಿಧ ಭಾಗಗಳಿಂದ ೨೦೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ನಾಲ್ಕು ವಿಭಾಗಗಳಲ್ಲಿ ಪ್ರಥಮ ೧೦೦೦, ದ್ವಿತೀಯ ೮೦೦ ರೂ. ನಗದು ಹಾಗೂ ಪ್ರಶಸ್ತಿಯನ್ನು ಬಹುಮಾನವಾಗಿ ವಿಜೇತರಿಗೆ ನೀಡಲಾಗುವುದು. ವೇಟರನ್ ವಿಭಾಗದಲ್ಲಿ ಪ್ರಥಮ ೧೫೦೦, ದ್ವಿತೀಯ ೧೦೦೦ ನಗದು ಹಾಗೂ ಬಹುಮಾನ ವಿತರಿಸಲಾಗುವುದು ಎಂದರು.ವಿಶ್ವನಾಥ ಅಂಗಡಕಿ, ರಾಜು ದೊಡ್ಡಮನಿ, ಬಿ. ಧನರಾಜ ಪಾಲ್ಗೊಂಡಿದ್ದರು
ವರದಿ:ಸುಧೀರ್ ಕುಲಕರಣಿ

