LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಸ್ವಂತ ಮೊಮ್ಮಗಳ ಮೇಲೆಯೇ ಅತ್ಯಾ*ಚಾರಕ್ಕೆ ಯತ್ನಿಸಿದ ಅಜ್ಜ! 

Advertisement

ಯಾದಗಿರಿ: ಸಮಾಜ ತಲೆತಗ್ಗಿಸುವ ಹಾಗೂ ರಕ್ತಸಂಬಂಧಗಳ (Crime) ಮೇಲಿನ ನಂಬಿಕೆಯನ್ನೇ ಹುಸಿಗೊಳಿಸುವಂತಹ ಭೀಕರ ಕೃತ್ಯವೊಂದು ಯಾದಗಿರಿ (Yadgiri) ಜಿಲ್ಲೆಯ ಸುರಪುರ ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

 ಆಟವಾಡಿಕೊಂಡು ಇರಬೇಕಾದ ಸ್ವಂತ ಮೊಮ್ಮಗಳ ಮೇಲೆಯೇ 75 ವರ್ಷದ ಅಜ್ಜನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಆರೋಪಿಯ ವಿರುದ್ಧ ಪೋಕ್ಸೋ (POCSO) ಸೇರಿದಂತೆ ವಿವಿಧ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.ಸೆಪ್ಟೆಂಬರ್‌ 23ರಂದು ನಡೆದಿದ್ದ ಈ ನೀಚ ಕೃತ್ಯವು ತಡವಾಗಿ ಬೆಳಕಿಗೆ ಬಂದಿದೆ.

ಚಾಕು ತೋರಿಸಿ ಬೆದರಿಸಿದ್ದ ಆರೋಪಿ

ಶರಣಪ್ಪ ಟಣಕೇದಾರ್ ಎಂಬ ವೃದ್ಧನೇ ಈ ಅಮಾನವೀಯ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಸಂತ್ರಸ್ತ ಬಾಲಕಿಯ ತಾಯಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ವೇಳೆ, ಮಗಳನ್ನು ಸುರಕ್ಷಿತವಾಗಿರಲೆಂದು ಸುರಪುರ ತಾಲೂಕಿನ ಅಜ್ಜ-ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗಿದ್ದರು. ಆದರೆ, ಬಾಲಕಿಗೆ ಆಸರೆಯಾಗಬೇಕಿದ್ದ ಅಜ್ಜನಿಂದಲೇ ಈ ಭೀಕರ ದೌರ್ಜನ್ಯ ಎದುರಾಗಿದೆ.

 ಮನೆಯಲ್ಲಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ಆರೋಪಿ, ಚಾಕು ತೋರಿಸಿ ಜೀವಬೆದರಿಕೆ ಒಡ್ಡಿದ್ದಾನೆ. ಅಷ್ಟೇ ಅಲ್ಲದೆ, ಬಾಲಕಿಯ ಬಟ್ಟೆ ಬಿಚ್ಚಿಸಿ, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ ಕೇಂದ್ರದ ಗಿಫ್ಟ್: 6 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅಸ್ತು ಭಾರತಕ್ಕೆ 406 ರನ್ ಗಳ ದೊಡ್ಡ ಮೊತ್ತದ ಗೆಲುವಿನ ಗುರಿ ಇಡಿ ದುರ್ಬಳಕೆ ಮೂಲಕ ದಲಿತ ನಾಯಕರನ್ನು ಹತ್ತಿಕ್ಕುವ ಸಂಚು : ನಾಯ್ಡು ನಾಯಕಭಾಗ್ಯ ಶ್ರೀ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಮಾಡಿ ಸಮಾಜ ಸೇವೆಗೆ ಯುವಕರ ಬೆಂಬಲಸ್ವಂತ ಮೊಮ್ಮಗಳ ಮೇಲೆಯೇ ಅತ್ಯಾ*ಚಾರಕ್ಕೆ ಯತ್ನಿಸಿದ ಅಜ್ಜ! ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಕಲ್ಪಿಸಲು ಮನವಿಬಿಜೆಪಿ ಅವಧಿಯ ಅನಾಹುತದಿಂದಲೇ ನಮಗೆ ಆರ್ಥಿಕ ಇಲಾಖೆ ಪತ್ರ ಬರೆದಿದೆ : ಡಿ.ಕೆ.ಶಿವಕುಮಾರ್ನೂತನ ಡಿವೈಎಸ್ಪಿ ಅಧಿಕಾರ ಸ್ವೀಕಾರ  ಸನ್ಮಾನಶೀಘ್ರದಲ್ಲೇ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ನಿರ್ಧಾರ: ಬೈರತಿ ಸುರೇಶ್ದ. ಅಪ್ರಿಕಾ- ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆ ಅಡ್ಡಿ