ಬೆಂಗಳೂರು : ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಹಳದಿ ಮತ್ತು ಬಿಳಿ ಲೋಹದ ಖರೀದಿದಾರರ ಜೇಬಿಗೆ ಭರ್ಜರಿ ಬಂಪರ್ ಉಳಿತಾಯವಾಗಿದೆ.
ನಿನ್ನೆ (ಮಂಗಳವಾರ) ಇದ್ದಕ್ಕಿದ್ದಂತೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಬುಧವಾರ ದೇಶಾದ್ಯಂತ ಭಾರಿ ಕುಸಿತವನ್ನು ಕಂಡಿದೆ.
ಇನ್ನು ಚಿನ್ನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಳ್ಳಿ ಬೆಲೆಯು ಅಕ್ಷರಶಃ ಪಾತಾಳಕ್ಕೆ ಕುಸಿದಿದ್ದು, ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಬಂಗಾರದಂತಹ ಅವಕಾಶ ಸಿಕ್ಕಂತಾಗಿದೆ.
ಜಾಗತಿಕ ಮಾರುಕಟ್ಟೆಯ ಏರಿಳಿತದ ಬೆನ್ನಲ್ಲೇ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಒಂದು ಗ್ರಾಮ್‌ಗೆ ಬರೋಬ್ಬರಿ 395 ರೂಪಾಯಿಯಿಂದ 450 ರೂಪಾಯಿವರೆಗೆ ಭಾರಿ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಅಸಲಿ ದರ ಎಷ್ಟು?
ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ದೇಶದಲ್ಲಿ ಆಭರಣ ಚಿನ್ನದ ಬೆಲೆ 14,000 ರೂಪಾಯಿ ಗಡಿಯೊಳಗೆ ಬಂದರೆ, ಅಪರಂಜಿ ಚಿನ್ನದ ಬೆಲೆ 15,000 ರೂಪಾಯಿಗಿಂತ ಕೆಳಗೆ ಇಳಿದು ಗ್ರಾಹಕರಿಗೆ ನೆಮ್ಮದಿ ತಂದಿದೆ.
22 ಕ್ಯಾರಟ್ ಆಭರಣ ಚಿನ್ನ (10 ಗ್ರಾಮ್): ₹1,36,450 ರೂಪಾಯಿ
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,48,860 ರೂಪಾಯಿ
ಬಿಳಿ ಲೋಹಕ್ಕೆ ಭಾರಿ ಪೆಟ್ಟು ಕೆಜಿಗೆ ₹10,000 ಅಗ್ಗವಾದ ಬೆಳ್ಳಿ
ಮಂಗಳವಾರ ಮಾರುಕಟ್ಟೆಯಲ್ಲಿ ಸಖತ್ ಸ್ಥಿರವಾಗಿದ್ದ ಬಿಳಿ ಲೋಹ ಬೆಳ್ಳಿ ಬೆಲೆಯು, ಇಂದು ಬುಧವಾರ ಅತಿ ದೊಡ್ಡ ಕುಸಿತವನ್ನು ಎದುರಿಸಿದೆ.
ಒಂದು ಗ್ರಾಮ್‌ಗೆ ಬರೋಬ್ಬರಿ 10 ರೂಪಾಯಿ ತಗ್ಗಿದ್ದು, ಕೆಜಿಗೆ ಒಟ್ಟಾರೆಯಾಗಿ 10,000 ರೂಪಾಯಿ ಇಳಿಕೆಯಾಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,48,860
ನಾಗ್ಪುರ ₹1,48,860
ಮುಂಬೈ ₹1,48,860
ಚೆನ್ನೈ ₹1,50,550
ಕೋಲ್ಕತ್ತಾ ₹1,48,860
ಪಾಟ್ನಾ ₹1,48,910
ಸೂರತ್ ₹1,48,910
ಚಂಡೀಗಢ ₹1,49,010
ಲಕ್ನೋ ₹1,49,010

