Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುದ್ರಣ, ಪೆನ್ನು ಬರೋಬ್ಬರಿ ₹3,870 ಕೋಟಿ ಖರ್ಚು ಮಾಡಿದ ಭಾರತದ ಬ್ಯಾಂಕುಗಳು

Advertisement

ಮುಂಬೈ : ಜಗತ್ತು ಡಿಜಿಟಲೀಕರಣದತ್ತ ಸಾಗುತ್ತಿರುವ ಹೊತ್ತಿಗೆ ಭಾರತದ ಬ್ಯಾಂಕುಗಳು ಮುದ್ರಣ, ಪೆನ್ನು ಮತ್ತು ಕಾಗದಂಥ ಸ್ಟೇಷನರಿ ವಸ್ತುಗಳಿಗೆ ಬರೋಬ್ಬರಿ ₹3,870 ಕೋಟಿ ಖರ್ಚು ಮಾಡಿದೆ ಎಂಬ ವಿಷಯ ಅಚ್ಚರಿ ಮೂಡಿಸಿದೆ.

ಈ ವಿಷಯವನ್ನು ಅಂಕಿ ಅಂಶಗಳ ಸಹಿತ ಆರ್ಥಿಕ ವಿಶ್ಲೇಷಣಾ ಸಂಸ್ಥೆ ಗ್ರೋ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.ಆರ್ಥಿಕ ವರ್ಷ 2025-26ರಲ್ಲಿ ಭಾರತೀಯ ಬ್ಯಾಂಕುಗಳು ಮುದ್ರಣ ಮತ್ತು ಸ್ಟೇಷನರಿ ವಸ್ತುಗಳಿಗಾಗಿ ಸಾಕಷ್ಟು ಖರ್ಚು ಮಾಡಿವೆ.

 ಇದರಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ₹986 ಕೋಟಿ ವೆಚ್ಚ ಮಾಡಿದ್ದರೆ, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ತನ್ನ ಲಾಭದ ಶೇ 8ರಷ್ಟನ್ನು ಪೆನ್ನು, ಪೇಪರ್‌ ಇತ್ಯಾದಿ ಸ್ಟೇಷನರಿ ವಸ್ತುಗಳ ಖರೀದಿಗೆ ಖರ್ಚು ಮಾಡಿದೆ.

ಬ್ಯಾಂಕುಗಳ ಭವಿಷ್ಯ ಡಿಜಿಟಲ್‌ ಆದರೂ, ಶಾಹಿಯ ಮೇಲಿನ ಖರ್ಚು ಹೆಚ್ಚುತ್ತಲೇ ಇದೆ. ಇವುಳಲ್ಲಿ ಚೆಕ್‌ ಪುಸ್ತಕ, ಪಾಸ್ ಪುಸ್ತಕ, ಸ್ಟೇಟ್‌ಮೆಂಟ್ಸ್‌ ಹಾಗು ಪೆನ್ನು ಮತ್ತು ಪೇಪರ್‌ಗಳಾಗಿ ಸಾಕಷ್ಟು ಖರ್ಚು ಮಾಡುತ್ತಿವೆ.

ಇದರಲ್ಲಿ ಎಸ್‌ಬಿಐ ₹986.4 ಕೋಟಿ ಖರ್ಚು ಮಾಡಿ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ₹922.5 ಕೋಟಿ ಖರ್ಚು ಮಾಡಿದೆ. ಆದರೆ ಈ ಖರ್ಚು ದೊಡ್ಡ ಬ್ಯಾಂಕುಗಳ ಒಟ್ಟು ಲಾಭದ ಶೇ 1.3ರಷ್ಟು ಮಾತ್ರ.

ಐಸಿಐಸಿಐ ಬ್ಯಾಂಕ್‌ ಶೇ 0.58ರಷ್ಟು ಅಂದರೆ ₹318.5 ಕೋಟಿ ಖರ್ಚು ಮಾಡಿದೆ. ಆಕ್ಸಿಸ್ ಬ್ಯಾಂಕ್‌ ಶೇ 1.33ರಷ್ಟು ಅಂದರೆ ₹373.8 ಕೋಟಿ ಖರ್ಚುಮಾಡಿದೆ.

ಉಳಿದಿಂತೆ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ ಆಫ್ ಇಂಡಿಯಾ ಕೂಡಾ ಶೇ 1ರ ಆಸುಪಾಸಿನಷ್ಟು ಖರ್ಚು ಮಾಡಿದೆ.

ಸ್ಟೇಷನರಿ ವಸ್ತುಗಳಿಗೆ ಹೆಚ್ಚು ಖರ್ಚು ಮಾಡಿರುವ ಬ್ಯಾಂಕುಗಳಲ್ಲಿ ಐಡಿಎಫ್‌ಸಿ ಬ್ಯಾಂಕ್ ₹122.7 ಕೋಟಿ ಖರ್ಚು ಮಾಡಿದೆ. ಇದು ಆ ಬ್ಯಾಂಕ್‌ನ ಒಟ್ಟು ಲಾಭದ ಶೇ 8.05ರಷ್ಟಾಗಿದೆ.

ಇಂಡಸ್ ಬ್ಯಾಂಕ್‌ ₹114.9 ಕೋಟಿಯಷ್ಟು (ಶೇ 4.46) ಖರ್ಚು ಮಾಡಿದೆ. ಯೆಸ್‌ ಬ್ಯಾಂಕ್‌ ₹70 ಕೋಟಿ (ಶೇ 2.86), ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ₹58.3 ಕೋಟಿ (ಶೇ 2.77) ಖರ್ಚು ಮಾಡಿದೆ ಎಂದು ಗ್ರೋ ಹೇಳಿದೆ.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
3.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೂಡಾ ಸರ್ವೇಯರ್ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ :ಬಿಜೆಪಿ ನಾಯಕರಿಗೆ ಹೈಕಮಾಂಡ್ ಗರಂ ಮುದ್ರಣ, ಪೆನ್ನು ಬರೋಬ್ಬರಿ ₹3,870 ಕೋಟಿ ಖರ್ಚು ಮಾಡಿದ ಭಾರತದ ಬ್ಯಾಂಕುಗಳುಪಕ್ಷಕ್ಕೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ಬಿ. ವೈ ವಿಜಯೇಂದ್ರ ಧಾರವಾಡ, ಕೋಲಾರ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆಸಲಿ ಅಹ್ಮದವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಲೋಕಾಯುಕ್ತ ಬಲೆಗೆ ಬಿದ್ದ ಸಿಎಂ ಪದಕ ವಿಜೇತ ಪಿಎಸ್‌ಐ  ಹುಕ್ಕೇರಿಯ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಕಚೇರಿಯಲ್ಲಿ ದಲಿತ ಮುಖಂಡರ ಪತ್ರಿಕಾ ಗೋಷ್ಠಿ ನಮ್ಮ ಹಕ್ಕು, ನಮ್ಮ ಸೊತ್ತು ಖಾಸಗೀಕರಣಕ್ಕೆ ಇಲ್ಲ ಒಪ್ಪಿಗೆ :ಖಾಸಗೀಕರಣದ ಅರ್ಜಿ ವಾಪಸ್ ಪಡೆಯಲೇಬೇಕುಹಲವು ಬೇಡಿಕೆಗಳು ಈಡೇರಿಕೆಗಾಗಿ ಕೂಲಿ ಕಾರ್ಮಿಕರ ಪ್ರತಿಭಟನೆ!