Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ಶಾಲೆಗಳ ಕಣ್ಣೀರು: 30 ವರ್ಷಗಳ ವನವಾಸ ಮುಗಿಯುವುದು ಎಂದು?

Advertisement
ಬೆಳಗಾವಿ : ರಾಜ್ಯದ 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು. ಬೆಳಗಾವಿಯ ಸಾಹಿತ್ಯ ಭವನದಿಂದ ಡಿಸಿ ಆಫೀಸ್ ವರೆಗೆ ಪ್ರತಿಭಟನೆ ಮಾಡಿ.
ಎಸ್. ಎಸ್ ಮಠದ ಅನುದಾನ ರಹಿತ ಗೌರವಾಧ್ಯಕ್ಷರು ಪತ್ರಿಕಾಗೋಷ್ಠಿಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ 1995 ರ ನಂತರದಲ್ಲಿ ಪ್ರಾರಂಭವಾದ ಕನ್ನಡ ಮಾಧ್ಯಮದ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳು ಸರ್ಕಾರ ಅನುದಾನ ನೀಡಿರುವುದಿಲ್ಲ. ಕಳೆದ 30 ವರ್ಷಗಳಿಂದ ಖಾಸಗಿ ಆಡಳಿತ ಮಂಡಳಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕಟ್ಟಡ ಮತ್ತು ಇತರೇ ಸೌಲಭ್ಯಗಳನ್ನು ನಿರ್ಮಾಣ ಮಾಡಿ ಅಲ್ಲಿಯ ಸಿಬ್ಬಂದಿಗೆ ಅಲ್ಪಪ್ರಮಾಣದ ವೇತನ ನೀಡುತ್ತಾ ಬಂದಿರುತ್ತಾರೆ. ಸಧ್ಯ ಈ ಶಾಲೆಗಳ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅಲ್ಲಿಯ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಿಕ್ಷಕರ ಬದುಕು ಕಷ್ಟಕರವಾಗಿದೆ.

ಅನೇಕ ಆಡಳಿತ ಮಂಡಳಿಗಳು ಮುಚ್ಚಿಹೋಗಿವೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಕೂಲಿ ನಾಲಿ ಮಾಡಿ ಜೀವನ ಸಾಗಿಸಿ ಶಿಕ್ಷಣ ನೀಡುತ್ತಿದ್ದಾರೆ. 30 ವರ್ಷದಲ್ಲಿ ನೂರಾರು ಜನರು ನಿವೃತ್ತರಾಗಿದ್ದಾರೆ ಇದೊಂದು ರಾಜ್ಯದ ಗಂಭೀರ ಜ್ವಲಂತ ಸಮಸ್ಯೆಯಾಗಿದೆ. ಸರಕಾರದ ಆಧಿಕಾರಿಗಳು ತಪ್ಪು ಮಾಹಿತಿ ನೀಡಿ ಸರಕಾರಕ್ಕೆ ಹೊರೆಯಾಗುವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯದಲ್ಲಿ 1995 ರಂದು 2001 ರ ವರೆಗೆ (5 ವರ್ಷದಲ್ಲಿ) 133 ಪ್ರಾಥಮಿಕ ಶಾಲೆಗಳು, 383 ಪ್ರೌಢಶಾಲೆಗಳು, 135 ಪದವಿಪೂರ್ವ ಕಾಲೇಜುಗಳು ಇದದ್ದು. ಇದಕ್ಕೆ ವಾರ್ಷಿಕ ಅಂದಾಜು ವೆಚ್ಚ 341 ಕೋಟಿ ರೂ ವೇತನ ಅನುದಾನ ಬೇಕಾಗುರುವುದು.

ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಮಾನವೀಯ ದೃಷ್ಟಿಯಿಂದ ಮತ್ತು ಕನ್ನಡ ಶಾಲೆಗಳ ಉಳುವಿಗಾಗಿ 2026-2027 ನೇ ಆಯವ್ಯಯದಲ್ಲಿ 1995 ರಿಂದ 2001 ರ ವರೆಗೆ ಪ್ರಾರಂಭವಾಗಿರು ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಅನುದಾನವನ್ನು ಕಾಯ್ದಿರಿಸಬೇಕೆಂದು ಮನವಿ ಮಾಡಿದರು.

ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ