LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ರಾಜೀನಾಮೆ ಕೊಡಬೇಡಿ ಎಂದರು,ಮಾತು ಕೊಟ್ಟಿದ್ದೇನೆ ಎಂದು ರಾಜೀನಾಮೆ ಕೊಟ್ಟೆ": ಸಿದ್ದರಾಮಯ್ಯ

Advertisement

ಚಿಕ್ಕಮಗಳೂರು: "ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಎಂದಿದ್ದರು. ಆದರೆ ನಾನು ಮಾತು ಕೊಟ್ಟಿದ್ದೇನೆ, ಅದನ್ನು ಉಳಿಸಿಕೊಳ್ಳಬೇಕು ಎಂದು ರಾಜೀನಾಮೆ ಕೊಟ್ಟೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಡೂರಿನಲ್ಲಿ ಮಾತನಾಡಿದ ಅವರು, ತಮ್ಮ ರಾಜೀನಾಮೆ ವಿಚಾರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಯಾವುದೋ ದೇವಸ್ಥಾನಕ್ಕೆ ಹೋದಾಗ ಕೆಲವರು 'ಮೋದಿ, ಮೋದಿ' ಎಂದು ಘೋಷಣೆ ಕೂಗುತ್ತಾರೆ. ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರಾ? ಸಂಗೊಳ್ಳಿ ರಾಯಣ್ಣನ ರೀತಿಯಲ್ಲಿ ಹೋರಾಡಿದ್ದರಾ? ಜನ ಸುಮ್ಮನೆ 'ಮೋದಿ, ಮೋದಿ' ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳನ್ನು ಪ್ರಶ್ನಿಸಿದ ಅವರು, 2 ಕೋಟಿ ಉದ್ಯೋಗ ಎಲ್ಲಿದೆ, 'ಅಚ್ಛೇ ದಿನ್' ಎಲ್ಲಿದೆ ಎಂದು ಪ್ರಶ್ನಿಸಿದರು.

ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು, ಮಾಡಿದ್ದಾರಾ? ಪ್ರಧಾನಿ ಆಗಿ 12 ವರ್ಷಗಳಾಗಿವೆ. ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು, ಹಾಕಿದ್ದಾರಾ ಎಂದು ಪ್ರಶ್ನಿಸಿದರು.

ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜನರಿಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆಯಲಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ನನ್ನ ಮೇಲೆ ಸೋತದ್ದು ಯಾರು?" ಎಂದು ಪ್ರಶ್ನಿಸಿದರು. ನಮ್ಮ ಕಡೆ ಸಿ.ಟಿ. ರವಿ ಅವರನ್ನು 'ಲೂಟಿ ರವಿ' ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.

ಗೃಹಲಕ್ಷ್ಮಿ ಯೋಜನೆ ನೀಡದ ಕಾರಣಕ್ಕೆ ತಮ್ಮ ಮುಖ್ಯಮಂತ್ರಿ ಸ್ಥಾನ ಹೋಯಿತು ಎಂದು ಸಿ.ಟಿ. ರವಿ ಹೇಳಿದ್ದಾರಂತೆ. ಆದರೆ ತಾವು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದೆ. ಅವರು ರಾಜೀನಾಮೆ ಕೊಡು ಎಂದರು, ಹಾಗಾಗಿ ರಾಜೀನಾಮೆ ನೀಡಿದೆ.

ಹಲವರು ರಾಜೀನಾಮೆ ನೀಡಬೇಡಿ ಎಂದು ಹೇಳಿದರೂ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗದೆ ಹಿಡಿದು ಭೀಮನಾದ ಅಬಕಾರಿ ಸಚಿವ: ಡೈಲಾಗ್​​ ಕೇಳಿ ಪ್ರೇಕ್ಷಕರು ಫಿದಾ ಮಿಸ್ ವರ್ಲ್ಡ್ 2026' ಕಿರೀಟ ಮುಡಿಗೇರಿಸಿಕೊಂಡ ಜೊಹೆರಿ ಮೋಲಾಸಾಂಬಾರ್ ವಿಚಾರಕ್ಕೆ ಅಕ್ಕ-ತಂಗಿ ನಡುವೆ ಜಗಳ : ವಿದ್ಯಾರ್ಥಿನಿ ನೇಣಿಗೆ ಶರಣು!ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ 1700 ಕೋಟಿ ದೇಣಿಗೆ : ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಹಣ ಪಾವತಿ ಯುವತಿ ಹೊಟ್ಟೆಯಲ್ಲಿ 1.16 ಕೆಜಿ ಕೂದಲು : ತನ್ನ ಕೂದಲನ್ನೇ ತಿನ್ನುತ್ತಿದ್ದ ಯುವತಿ ದುಲಿಪ್ ಟ್ರೋಫಿ ಪೈನಲ್: ಸೂರ್ಯವಂಸಿಗೆ ಮತ್ತೊಂದು ಅಗ್ನಿ ಪರೀಕ್ಷೆ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಪೋಕ್ಸೊ ಪ್ರಕರಣ ದಾಖಲುಮುಂಗಾರು ಮಳೆ ಕೈಕೊಡಲಿದ್ದು, ಜನಸಾಮಾನ್ಯರು ಅನ್ನ-ನೀರಿಗೆ ತತ್ವಾರ : ಕೋಡಿ ಶ್ರೀ ಭವಿಷ್ಯ ಮಾಸಾಂತ್ಯಕ್ಕೆ 200 ತಾಲೂಕುಗಳು ಬರಪೀಡಿತ ಘೋಷಣೆ: ಸಚಿವ ಖಂಡ್ರೆ ರಾಜೀನಾಮೆ ಕೊಡಬೇಡಿ ಎಂದರು,ಮಾತು ಕೊಟ್ಟಿದ್ದೇನೆ ಎಂದು ರಾಜೀನಾಮೆ ಕೊಟ್ಟೆ": ಸಿದ್ದರಾಮಯ್ಯ