ನವದೆಹಲಿ : ವಿಯೆಟ್ನಾಂನಲ್ಲಿ ಶನಿವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನಡೆದ 73ನೇ ವಿಶ್ವ ಸುಂದರಿ (Miss World 2026) ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಡೊಮಿನಿಕನ್ ರಿಪಬ್ಲಿಕ್‌ನ ಜೊಹೆರಿ ಮೋಲಾ ಡೊಮಿಂಗುಯೆಜ್ (Joheirry Mola Dominguez) ಅವರು 'ಮಿಸ್ ವರ್ಲ್ಡ್ 2026' ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ಪೇನ್‌ನ ಎಲಿಸಬೆತ್ ರೇನೆಸ್ (Elisabeth Reynés) ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದರೆ, ಮಲೇಷ್ಯಾದ ತಾನುಸಿಯಾ ಚೆಟ್ಟಿ (Taanusiya Chetty) ದ್ವಿತೀಯ ರನ್ನರ್-ಅಪ್ ಸ್ಥಾನ ಪಡೆದರು. ಕಳೆದ ಬಾರಿಯ (72ನೇ ಆವೃತ್ತಿ) ವಿಶ್ವ ಸುಂದರಿ, ಥಾಯ್‌ಲ್ಯಾಂಡ್‌ನ ಓಪಲ್ ಸುಚಾತಾ ಚುವಾಂಗ್‌ಶ್ರೀ (Opal Suchata Chuangsri) ಅವರು ನೂತನ ವಿಶ್ವ ಸುಂದರಿ ಜೊಹೆರಿಗೆ ಕಿರೀಟ ತೊಡಿಸಿದರು.


