LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರತಿ ಚೆಂಡನ್ನು ಚಚ್ಚಿ ಬೀಸಾಡುವ ಈ ಹುಡುಗನಿಗೆ ಬೇಕಿದೆ ಕನಸಿಸ್ಟನ್ಸಿ ಪ್ರದರ್ಶನ

Advertisement


ಕಳೆದ ಬಾರಿಯ ಐಪಿಎಲ್‌ನಲ್ಲೇ ವೇಗದ ಶತಕ ಸಿಡಿಸಿ ಹವಾ ಮಾಡಿದ್ದ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ ಪಂದ್ಯದ ಆರಂಭ ಪಂದ್ಯದಲ್ಲೇ ವೇಗದ ಅರ್ಧ ಶತಕ ಗಳಿಸಿ ಧೂಳೆಬ್ಬಿಸಿದ್ದಾರೆ.
ಕೇವಲ ೧೫ ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಅಪ್ಪಟ ಪ್ರತಿಭಾವಂತ, ಬಿರುಸಿನ ಹೊಡೆತಗಳ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ.
ಇದನ್ನು ಅವರು ವಿವಿಧ ವಯೋಮಿತಿಯ ಅಂತಾರಾಷ್ಟಿçÃಯ ಪಂದ್ಯಗಳಲ್ಲೂ ನಿರೂಪಿಸಿದ್ದಾರೆ. ಕಿರಿಯರ ವಿಶ್ವಕಪ್ ನಲ್ಲಿಯೂ ಸಾಭೀತು ಮಾಡಿದ್ದಾರೆ. ಅಭಿಷೇಕ ಶರ್ಮಾರಂತೆ ಪ್ರತಿ ಚೆಂಡುಗಳನ್ನು ಮುಲಾಜಿಲ್ಲದೇ ಚಚ್ಚಿ ಬೀಸಾಡುವ ಛಾತಿ ಇರುವ ಹುಡುಗ.
ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಅಪ್ಪಟ ಪ್ರತಿಭೆ, ಅತಿವೇಗವಾಗಿ ರನ್‌ಗಳಿಸುವ ಸಾಮರ್ಥ್ಯದ ಜೊತೆಗೆ ನಿರಂತರ ಉತ್ತಮ ಪ್ರದರ್ಶನ ನೀಡುವ (ಕನಸಿಸ್ಟನ್ಸಿ) ಪ್ರದರ್ಶನ ಕೂಡ ಬೇಕಾಗುತ್ತದೆ.
ಚುಟುಕು ಮಾದರಿಯ ಇಂದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ರನ್‌ಗಳಿಸುವುದು, ಪ್ರತಿ ಚೆಂಡುಗಳನ್ನು ದಂಡಿಸುವುದು ಅನಿವರ‍್ಯವಾದರೂ ಕೆಲವೇ ಕೆಲವು ಸಂದರ್ಭಗಳಲ್ಲಿ ಸೆನ್ಸ್ ಕ್ರಿಕೆಟ್ ಕೂಡ ಅಗತ್ಯ.
ಈ ಪ್ರತಿಭಾವಂತ ಕ್ರಿಕೆಟ್ ಪೋರ ಪ್ರತಿಬಾರಿ ರನ್‌ಗಳಿಸಿದಾಗಲೂ ವೇಗವಾಗಿ ರನ್‌ಗಳಿಸಿರುತ್ತಾರೆ. ಅದು ಇಂದಿನ ದಿನಮಾನದಲ್ಲಿ ಅನಿವರ‍್ಯವೂ ಕೂಡ. ಆದರೆ ಬಹುತೇಕ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಆಟಗಾರನ ವರ್ಚಸ್ಸನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ವಿರಾಟ್ ಕೊಹ್ಲಿ, ಶುಭಮಾನ್ ಗಿಲ್ ಮುಂತಾದವರು.
ಹೀಗಾಗಿ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ವೈಭವ್ ಸೂರ್ಯವಂಶಿ ನಿರಂತರ ಪಂದ್ಯಗಳಲ್ಲಿ ಈ ತೆರನಾದ ಉತ್ತಮ ಪ್ರದರ್ಶನ ನೀಡುವುದು ಇಂದಿನ ಅಗತ್ಯ. ಹಾಗೆಂದ ಮಾತ್ರಕ್ಕೆ ಪ್ರತಿ ಪಂದ್ಯದಲ್ಲಿಯೂ ವೇಗವಾಗಿ ಅರ್ಧ ಶತಕ, ಶತಕ ಗಳಿಸಲು ಸಾಧ್ಯವಾಗದು. ಆದರೂ ಹೆಚ್ಚಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರುವುದು ಓರ್ವ ಆಟಗಾರನ ವರ್ಚಸ್ಸನ್ನು ಹೆಚ್ಚಿಸುತ್ತದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ