LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೆಕೆಆರ್ ಎಡವುತ್ತಿರುವುದೆಲ್ಲಿ? ಟಿಮ್ ಶಫರ್ಟ್, ನರೇನ್‌ರನ್ನು ಬಳಸಿಕೊಳ್ಳಲು ವಿಫಲ?

Advertisement
ಐಪಿಎಲ್ ೧೯ ನೇ ಏಡಿಷನ್‌ನಲ್ಲಿ ಈ ವರೆಗೆ ಹದಿನೈದು ಪಂದ್ಯಗಳು ಮುಗಿದಿದ್ದು, ಕೆಲವು ತಂಡಗಳು ಮೂರು ಪಂದ್ಯಗಳನ್ನು ಹಾಗೂ ಕೆಲ ತಂಡಗಳು ಎರಡು ಪಂದ್ಯಗಳನ್ನು ಆಡಿವೆ.
ಈ ವರೆಗೆ ಟೀಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೆöÊ ಸೂಪರ್ ಕಿಂಗ್ಸ್ ಹಾಗೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ೯ ಹಾಗೂ ೧೦ ನೇ ಸ್ಥಾನದಲ್ಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೆರಲು ತೀವ್ರ ಯತ್ನ ನಡೆಸಬೇಕಿದೆ.
ಟೀಮ್ ಕಾಂಬಿನೇಷನ್‌ನಲ್ಲಿ ಕೆಕೆಆರ್ ವಿಫಲ?: ಕೆಕೆಆರ್ ತಂಡವು ಈ ಬಾರಿಯ ಟೀಮ್ ಕಾಂಬಿನೇಷನ್‌ನಲ್ಲಿ ವಿಫಲವಾಗಿದೆ ಎಂದು ಟೀಮ್ ವಿಶ್ಲೇಷಣೆ ಮಾಡಿದ ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.
ಕೆಲವರು ಟೀಮ್ ಶಫರ್ಟ್ ಹಾಗೂ ಫಿನ್ ಅಲೆನ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪ್ರಮುಖ ಬೌಲರ್ ಸುನೀಲ್ ನರೇನ್ ಅವರನ್ನು ಆರಂಭಿಕ ಬ್ಯಾಟ್ಸಮನ್ ಆಗಿ ಬಳಸಿಕೊಳ್ಳಬೇಕು. ಇದರಿಂದ ಆರಂಭದಲ್ಲಿ ಬೌಲರ್‌ಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆದರೆ ಈ ವರೆಗೆ ಫಿನ್ ಅಲೆನ್ ಹಾಗೂ ನಾಯಕ ಅಜಿಂಕೆ ರೆಹಾನೆ ಇನ್ನಿಂಗ್ಸ್ ಆರಂಭಿಸಿದ್ದು, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡಲು ಯಶಸ್ವಿಯಾಗಿಲ್ಲ.
ನ್ಯೂಜಿಲೆಂಡ ಪರವಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದ ಪಿನ್ ಅಲೆನ್ ಹಾಗೂ ಟಮ್ ಶಫರ್ಟ್ ಕಿವೀಸ್ ತಂಡಕ್ಕೆ ಬಿರುಸಿನ ಆರಂಭ ಒದಗಿಸುತ್ತಿದ್ದರು. ಕೆಕೆಆರ್ ತಂಡ ಚೆನ್ನಾಗಿದ್ದರೂ ಕಾಂಬಿನೇಷನ್ ಸರಿ ಹೊಂದುತ್ತಿಲ್ಲ. ಪ್ರಮುಖವಾಗಿ ನಾಯಕತ್ವದ ಸಮಸ್ಯೆ ಇದೆ ಎಂತಲೂ ಅಭಿಪ್ರಾಯಗಳು ಬಂದಿವೆ.
ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ತಂಡದಿAದ ಹೊರ ಹೋಗಿದ್ದಾರೆ. ಸುನೀಲ್ ನರೇನ್ ಅವರನ್ನು ಮತ್ತೇ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಕೆಕೆಆರ್ ತಂಡಕ್ಕೆ ಶುಕ್ರದೆಸೆಯಂತೂ ಸದ್ಯಕ್ಕೆ ಇಲ್ಲ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ