LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇಂದು ರಾಜ್ಯದ ಅತೀ ಉದ್ದದ ಸೇತುವೆ ಲೋಕಾರ್ಪಣೆ

Advertisement

ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆ ಆಗಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಲಿದ್ದಾರೆ.


ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣ ಮಾಡಲಾಗಿರುವ ಸೇತುವೆ ಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.

ಸೇತುವೆಯು 2.44 ಕಿ.ಮೀ. ಉದ್ದವಿದ್ದು, ವಿಜಯಪುರದ ಕೊಲ್ಲಾರ ಬ್ರಿಜ್ (3 ಕಿ.ಮೀ.) ನಂತರ ರಾಜ್ಯದ 2ನೇ ಉದ್ದದ ಸೇತುವೆಯಾಗಿದೆ. ಕೇಬಲ್ ಬ್ರಿಜ್ 740 ಮೀ.ಉದ್ದವಿದ್ದು, ಇದು ರಾಜ್ಯದ ಅತಿ ಉದ್ದದ ಒಳನಾಡ ತೂಗು ಸೇತುವೆ. ದೇಶದಲ್ಲೇ 2ನೆಯದ್ದು ಆಗಿದೆ. ಸೇತುವೆ ನಿರ್ಮಾಣಕ್ಕೆ 473 ಕೋಟಿ ರೂ. ವೆಚ್ಚವಾಗಿದೆ.

ಸಾಗರದಿಂದ ತುಮರಿ ಅಥವಾ ಸಿಗಂದೂರಿಗೆ ತೆರಳಲು ರಸ್ತೆ ಮಾರ್ಗವಾಗಿ 100 ಕಿ.ಮೀ. ಸುತ್ತಿ ಬಳಸಿ ಹೋಗಬೇಕಿತ್ತು. ಇಲ್ಲವೇ ಲಾಂಚ್ನಲ್ಲಿ ತೆರಳಬೇಕಿತ್ತು. ಹೊಸ ಸೇತುವೆಯಿಂದ ಅಂತರ ಅರ್ಧದಷ್ಟು ತಗ್ಗಲಿದೆ. ಶರಾವತಿ ಹಿನ್ನೀರ ಪ್ರದೇಶದ ಜನರ ಬವಣೆ ತಪ್ಪಲಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಸ್ತು ನಿಷ್ಠೆಯಿಂದ ವಿದ್ಯಾರ್ಥಿಗಳು ಆದರ್ಶ ನಾಯಕರಾಗಿ : ಮಹಾಂತೇಶ್ ಓಲೇಕಾರ  ಮುಂದಿನ 6 ತಿಂಗಳಲ್ಲಿ ಖಾಲಿರುವ ಎಲ್ಲಾ ಹುದ್ದೆಗಳ ಭರ್ತಿ : ಡಿ. ಕೆ ಶಿವಕುಮಾರ್ ಘೋಷಣೆ ಅರಣ್ಯ ಇಲಾಖೆ ಗುಂಡೇಟಿಗೆ ಮೂವರು ಕಾಡಿಗಳ್ಳರು ಬಲಿRSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ : ಪ್ರಿಯಾಂಕ್ ಖರ್ಗೆಗೆ ಬಿ. ಎಲ್ ಸಂತೋಷ್ ತಿರುಗೇಟು ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧ ವಾಪಸ್ ಪಡೆಯುವುದಿಲ್ಲ : ಯು.ಟಿ. ಖಾದರ್ ಸ್ಪಷ್ಟನೆಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್ ಬೂಮ್ರಾ- ಸಾಯಿ ಸುದರ್ಶನ ಸಂಪರ್ಕದಲ್ಲಿದ್ದೇವೆ: ಶುಭಮಾನ್ ಗಿಲ್ಯುವ ಸಮುದಾಯದ ದಾರಿ ತಪ್ಪಿಸಲು ನನ್ನ ಪದ ದುರ್ಬಳಕೆ : ಸಿಜೆಐ ಸೂರ್ಯಕಾಂತ್‌ ಕಳವಳ ಸಾರ್ವಜನಿಕ ಸ್ಥಳಗಳ ಬಳಕೆ ನಿಯಮ RSS ವಿರುದ್ಧವಲ್ಲ : ಪ್ರಿಯಾಂಕ್ ಖರ್ಗೆ ತಿರುಗೇಟು ನಿನ್ನ ಏಳ್ಗೆಗೆ ನೀನೆ ಶಿಲ್ಪಿ : ಜಗನ್ನಾಥ