LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಾಗರಿಕರಿಗೆ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ

Advertisement


ಬಳ್ಳಾರಿ:  ನಾಗರಿಕ ಹೋರಾಟ ಸಮಿತಿ(BNHS)ಯಿಂದ, ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ, ಇದೇ ತಿಂಗಳು 27 ರಂದು ನಡೆಯುತ್ತಿರುವ ಜನತೆಯ ಸಮಾವೇಶದ ಹಿನ್ನೆಲೆಯಲ್ಲಿ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಇಂದು ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿ, ನಾಗರಿಕರಿಂದ ಸಹಿ ಸಂಗ್ರಹ ಕಾರ್ಯಕ್ರಮ ನಡೆಯಿತು. ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕರಾದ ಸೋಮಶೇಖರ್ ಗೌಡ ಚಾಲನೆ ನೀಡಿದರು.

ನಂತರ ಮಾತನಾಡಿದ ಬಳ್ಳಾರಿ ನಗರದ ಪರಿಸ್ಥಿತಿ ದಿನ ದಿನಕ್ಕೆ ಹದಗಳುತ್ತಿದೆ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗಿ ಸರಬರಾಜಾಗುತ್ತಿದೆ, ಚರಂಡಿ ನೀರು ಬೆರೆಯದಂತೆ ಕ್ರಮ ಕೈಗೊಳ್ಳಿ, ಸುಧಾ ಕ್ರಾಸ್ ರೈಲ್ವೇ ಮೇಲ್ ಸೇತುವೆ ಪೂರ್ಣಗೊಳಿಸಿ.

ಬೆಂಗಳೂರು ರಸ್ತೆ ಬೈಪಾಸ್ ಹತ್ತಿರ ಟ್ರಾಫಿಕ್ ಸಮಸ್ಯೆ ಪರಿಹರಿಸಿ, ನಗರದಲ್ಲಿ ಅನಾವಶ್ಯಕ ಯಾರು ಬೇಡದ ದುಂದು ವೆಚ್ಚ ಮಾಡಿ ಅವೈಜ್ಞಾನಿಕ ಸರ್ಕಲಗಳ ನಿರ್ಮಾಣ ಬೇಡ, ಬದಲಾಗಿ ಆದ್ಯತೆ ಮೇರೆಗೆ ಕೆಟ್ಟು ಹಾಳಾಗಿರುವ ರಸ್ತೆಗಳ ನಿರ್ಮಾಣ ಮಾಡಿ, ಹಾಳಾಗಿರುವ ಒಳ ರಸ್ತೆಗಳ ನಿರ್ಮಾಣ ರಸ್ತೆ ಬದಿಗಳಲ್ಲಿ ಮಳೆ ನೀರು ಸುಗಮವಾಗಿ ಹರಿಯಲು ಹೊರ ಚರಂಡಿ ನಿರ್ಮಾಣ ಸೇರಿದಂತೆ ಜನ ಬಯಸುವ ಕೆಲಸಗಳನ್ನು ಆದ್ಯತೆ ನೀಡಬೇಕಾಗಿದೆ.

ಇದೇ ತಿಂಗಳು 27ರಂದು ಬೃಹತ್ ಜನತೆಯ ಸಮಾವೇಶ ಗಾಂಧಿ ಭವನದಲ್ಲಿ 11:00 ಗಂಟೆಗೆ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಭಾಗವಹಿಸಬೇಕೆಂದು ಕರೆಯಿತ್ತರು.

ಇದೇ ವೇಳೆ ವಿಶ್ರಾಂತ್ ಉಪನ್ಯಾಸಕರಾದ ಶ್ರೀ ನರಸಣ್ಣರವರು, ಶ್ರೀ ಪ್ರಸಾದ್, ಗೋವಿಂದ್, ಶಾಂತ, ರಾಜ,ನಾಗರತ್ನ ಎಸ್ ಜಿ, ಚಂದ್ರಶೇಖರ್, ಅಂತೋನಿ, ಈಶ್ವರಿ ವಿಜಯಲಕ್ಷ್ಮಿ, ವಿದ್ಯಾವತಿ ಇನ್ನು ಹಲವಾರು ಸದಸ್ಯರು ಭಾಗವಹಿಸಿದ್ದರು.

ವರದಿ: ಶ್ರೀನಿವಾಸ ನಾಯ್ಕ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ