ಬೆಂಗಳೂರು : ಖಾತೆ ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನೂತನ ಸಚಿವರಿಗೆ ಇವತ್ತೇ ಖಾತೆ ಹಂಚಿಕೆ ಮಾಡುತ್ತೇವೆ ಇಂದು ಸಂಜೆ ಒಳಗೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.ಹಾಗಾಗಿ ಇಂದು ನೂತನ ಸಚಿವರಿಗೆ ಯಾವ ಯಾವ ಖಾತೆ ಸಿಗಲಿದೆ ಎನ್ನುವುದು ತಿಳಿದುಬರಲಿದೆ.
ಬಳಿಕ ಕಾವೇರಿ ನೀರು ತಮಿಳುನಾಡಿಗೆ ಬಿಡಬೇಕೆಂಬ CWRC ಸೂಚನೆ ವಿಚಾರವಾಗಿ, 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು CWRC ಆದೇಶ ನೀಡಿದೆ. ಒಳಹರಿವು ಗಮನಿಸುತ್ತೇನೆ.ನಾವು ರೈತರ ಹಿತ ಕಾಪಾಡಬೇಕು.
ಕೋರ್ಟ್ ಆದೇಶ ಪಾಲಿಸಬೇಕು. ನೀರಾವರಿ ಸಚಿವರ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬೆಳೆ ಉಳಿಸಬೇಕಾಗಿದೆ. ನೀರಿನ ಲಭ್ಯತೆ ಗಮನಿಸಿ ತೀರ್ಮಾನ ಮಾಡ್ತೇವೆ.
ನಾನು ನೀರಾವರಿ ವಿಚಾರದಲ್ಲಿ ಬಹಳ ಪಾರದರ್ಶಕವಾಗಿದ್ದೇನೆ. ರಾಜಕಾರಣ ಮಾಡಲು ಆಗಲ್ಲ. ನಾವು ರೈತರನ್ನು ಬದುಕಿಸುತ್ತೇವೆ. ತಾಳ್ಮೆಯಿಂದ ಇರಿ. ಪ್ರಕೃತಿ ನಮ್ಮನ್ನು ಉಳಿಸುತ್ತದೆ ಎಂದರು.


