LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ರೋಗ ರಹಿತ ವ್ಯಕ್ತಿಗಳಾಗಬೇಕು:ಶಾಸಕ ಲಕ್ಷ್ಮಣ ಸವದಿ

Advertisement
ಅಥಣಿ :ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ರೋಗ ರಹಿತ ವ್ಯಕ್ತಿಗಳಾಗಬೇಕು ಪ್ರತಿಯೊಬ್ಬ ವ್ಯಕ್ತಿ ರೋಗದಿಂದ ಗುಣ ಮುಖರಾಗಬೇಕು. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.



ಅವರು ಅಥಣಿ ಸ್ಥಳೀಯ ಎಸ್.ಎಸ್.ಎಮ್.ಎಸ್ ಕಾಲೇಜ ಮೈದಾನದಲ್ಲಿ ತಾಲೂಕಾ ಆಡಳಿತ, ಪತಂಜಲಿ ಯೋಗ ಪೀಠ ಹರಿದ್ವಾರ ಅಥಣಿ ಶಾಖೆ, ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 21 ರಂದು 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಸಿಗೆ ನೀರುಣಿಸುವ ಮೂಲಕ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.



ಇದು ಭಾರತ ದೇಶದಲ್ಲಿ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಪ್ರಾರಂಭವಾಗಿ ಇದು ಬೇರೆ ಬೇರೆ ದೇಶಗಳಲ್ಲಿ ಮಹತ್ವವನ್ನು ಅರ್ಹತೆಸಿಕೊಂಡು ಯೋಗವು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಈ ದಿನಮಾನಗಳಲ್ಲಿ ಯೋಗವು ನಮ್ಮ ಜೀವನಕ್ಕೆ ಅವಶ್ಯಕತೆ ಇದ್ದು ಪ್ರತಿನಿತ್ಯ ತಮ್ಮದೇ ಆದ ಶೈಲಿಯಲ್ಲಿ ಯೋಗ ರೂಡಿಸಿಕೊಂಡು ತಮ್ಮ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ನಾವು ಪ್ರತಿನಿತ್ಯ ಸೇವಿಸುವಂತಹ ಆಹಾರ ಶುದ್ಧ ವಾಗಿರಬೇಕು ಎಂದರು. ಬರುವ ದಿನಮಾನಗಳಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕೆಂದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯೋಗ ಶಿಬಿರದಲ್ಲಿ ಪತಂಜಲಿ ಯೋಗ ಪೀಠದ ಅಂತಾರಾಷ್ಟ್ರೀಯ ಯೋಗ ಗುರು ಮತ್ತು ರಾಜ್ಯ ವರೀಷ್ಠ ಪ್ರಭಾರಿಗಳಾದ ಭವರಲಾಲ ಆರ್ಯ ಅವರು ಮಾರ್ಗದರ್ಶನ ಯೋಗ ನಡೆಸಿಕೊಟ್ಟರು.



ಈ ವೇಳೆ ಪುರಸಭೆ ಅಧ್ಯಕ್ಷೆ ಶ್ರೀಮತಿ ಶಿವಲೀಲಾ ಬುಟಾಳಿ. ಉಪಾಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಯಂಕಂಚಿ. ತಹಶೀಲ್ದಾರರು ಸಿದರಾಯ ಭೋಸಗಿ, ಡಾ.ಮಲ್ಲಿಕಾರ್ಜುನ ಹಂಜಿ.ಕೆ.ಹೊಳೆಪ್ಪನವರ, ಶಿವಾನಂದ ಬುರ್ಲಿ, ಶಿವಾನಂದ ಮಾಲಗಾಂವಿ, ಎ.ಬಿ.ಪಾಟೀಲ, ಬಾಳಕೃಷ್ಣ ಕೊಳೇಕರ, ಅಪ್ಪಾಸಾಹೇಬ ಅಲಿಬಾದಿ, ರಾಮಣ್ಣಾ ಧರಿಗೌಡರ, ಅಪ್ಪಾಸಾಹೇಬ ತಾಂಬಟ, ಡಾ.ವಿನಾಯಕ ಚಿಂಚೋಳಿಮಠ, ಸುರೇಶ ಚಿಕ್ಕಟ್ಟಿ, ಶೇಖರಪ್ಪ ಗೊರಜನಾಳ, ಸದಾಶಿವ ಮುದಗೌಡರ, ಪುರಸಭಾ ಸದಸ್ಯ ರಾಜಶೇಖರ ಗುಡೋಡಗಿ ಅನೇಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಶಿಬಿರದಲ್ಲಿ ಭಾಗವಹಿಸಿದ್ದರು ಉಪಸ್ಥಿತರಿದ್ದರು.

ವರದಿ:ರಾಜು ವಾಘಮಾರೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ