ಹುಬ್ಬಳ್ಳಿ: ನಗರದಲ್ಲಿ (Hubballi) ಸಡಗರದಿಂದ ನಡೆದ 21ನೇ ದಿನದ ಗಣೇಶ ವಿಸರ್ಜನಾ ಮಹೋತ್ಸವವು (Ganesha immersion) ಇದೀಗ ಧಾರ್ಮಿಕ ವಿವಾದದ ಕಿಡಿ ಹೊತ್ತಿಸಿದೆ.
ನವನಗರದಲ್ಲಿ ಭಾನುವಾರ ರಾತ್ರಿ ಅದ್ದೂರಿಯಾಗಿ ಜರುಗಿದ ಮೆರವಣಿಗೆಯ ವೇಳೆ ಮಹಾರಾಷ್ಟ್ರ ಮೂಲದ ಯುವತಿಯಿಂದ ನಡೆಸಲಾದ ನೃತ್ಯ ಪ್ರದರ್ಶನವು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸನಾತನ ಧರ್ಮಕ್ಕೆ ಅಪಮಾನವೆಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಆಕ್ರೋಶ (protest) ವ್ಯಕ್ತಪಡಿಸಿವೆ.
ನವನಗರದ ಸನಾತನ ಗಣೇಶ ಮಹಾಮಂಡಳಿಯ ವತಿಯಿಂದ ಆಯೋಜಿಸಿದ್ದ ವಿಸರ್ಜನಾ ಮೆರವಣಿಗೆಯಲ್ಲಿ ನಿಶಾ ಮುಂಬೈಕರ್ ಎಂಬ ಯುವತಿಯಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಯುವತಿಯ ಆಕರ್ಷಕ ನೃತ್ಯಕ್ಕೆ ಸ್ಥಳದಲ್ಲಿದ್ದ ಯುವಕರು ಹುಚ್ಚೆದ್ದು ಕುಣಿದಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಆದರೆ, ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಿರುವುದಕ್ಕೆ ಸಾರ್ವಜನಿಕ ವಲಯ ಹಾಗೂ ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


