ಅರಸೀಕೆರೆ: ದಿ. 23/02/2025 ನೇ ಭಾನುವಾರ ನಡೆಯುವ ದೀ ಅಮಾನತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆಗೆ ಇಂದು ಕರ್ನಾಟಕ ಪ್ರೆಸ್ ಕ್ಲಬ್ ಅರಸೀಕೆರೆ ಘಟಕದ ಜಂಟಿ ಕಾರ್ಯದರ್ಶಿಯಾದ ಮೊಹಮ್ಮದ್ ನಾಸಿರ್ ಮತ್ತು ಅವರ ಸ್ನೇಹಿತರಾದ ಮುನಾಫ್ ಬೇಗ್ ಹಾಗೂ ಮಹಿಳಾ ಅಭ್ಯರ್ಥಿಯಾಗಿ ಸೀಮಾ ಯೂನುಸ್ ರವರು ತಮ್ಮ ನೂರಾರು ಸ್ನೇಹಿತರ ಜೊತೆ ಬಂದಿ ಚುನಾವಣಾ ಸಹಾಯಕ ಅಧಿಕಾರಿಯಾದ ರಕ್ಷಿತ್ ರವರಿಗೆ ನಾಮಪತ್ರವನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಮೊಹಮ್ಮದ್ ನಾಸಿರ ರವರು ಬ್ಯಾಂಕ್ ನ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಸೇರಿ ಶ್ರಮಿಸುತ್ತೇವೆ ಆದರಿಂದ ಸೇವೆ ಮಾಡಲು ನಮಗೂ ಒಂದು ಅವಕಾಶವನ್ನು ಕಲ್ಪಿಸಿ ಕೊಡಿ ಎಂದು ಬ್ಯಾಂಕ್ ನ ಸದಸ್ಯ ಮತದಾರರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ಹಾಗೂ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ರಾಜು ಅರಸೀಕೆರೆ