Ad imageAd image

ಬಿಎಸ್ಐ ಯಿಂದ ಪೂರ್ವಭಾವಿ ಸಭೆ

Bharath Vaibhav
ಬಿಎಸ್ಐ ಯಿಂದ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಚಿಂಚೋಳಿ:- ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಕಲಬುರಗಿ ವಿಭಾಗ ಮಟ್ಟದ 68ನೇ ಧಮ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿ ಧಮ್ಮ ಧೀಕ್ಷಾ ಸಮಾರಂಭಕ್ಕೆ ಕರೆ ನೀಡುವ ಕುರಿತು ಬುಧವಾರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು, ಈ ಸಭೆಯನ್ನು ಉದ್ದೇಶೀಸಿ ಪುರಸಭೆ ಅಧ್ಯಕ್ಷರಾದ ಆನಂದ ಏನ್ ಟೈಗರ್ ಅವರು ಮಾತನಾಡಿದರು,
ಭಾರತರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನ ಬೇರೆ ಧರ್ಮಗಳನ್ನೆಲ್ಲಾ ಬಿಟ್ಟು ಬೌದ್ಧ ಧರ್ಮವನ್ನೇ ಏಕೆ ಸ್ವೀಕರಿಸಿದರು, ಎಂಬ ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಉದಯಿಸಿರುವುದುಂಟು.

ಬಾಬಾ ಸಾಹೇಬರನ್ನು ಮೆಚ್ಚುವವರಲ್ಲಿ ಬಹಳ ಜನ ಅನ್ವಯಿಗಳಲ್ಲಿ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕಂಡುಕೊಂಡಿಲ್ಲ,ಆದರೆ ಕೆಲವು ವಿಚಾರವಂತರು ವಿವೇಕಿಗಳು ಸಹ ಹೃದಯಗಳು ಈಗಾಗಲೇ ಸರಿ ಉತ್ತರವನ್ನು ಕಂಡುಕೊಂಡು ಆ ಶ್ರೇಷ್ಠ ಮಾನವ ಧರ್ಮವನ್ನು ಸ್ವೀಕರಿಸಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ, ಈಗಲಾದರೂ ನಾವು ಪ್ರಸ್ತುತ ದಿನಮಾನಗಳಲ್ಲಿ ಈ ಪ್ರಶ್ನೆಗೆ ಸರಿ ಉತ್ತರ ಕಂಡುಕೊಳ್ಳಲೇಬೇಕಾದ ಅವಶ್ಯಕತೆ ಇದೆ, ಭಾರತದಲ್ಲಿ ದಲಿತರನ್ನು ಮಾತ್ರ ಉದ್ದರಿಸುವುದು ಬಾಬಾ ಸಾಹೇಬರ ಗುರಿಯಾಗಿರಲಿಲ್ಲ, ಸಾಮ್ರಾಟ್ ಅಶೋಕನಂತ ಸಂಪೂರ್ಣ ಭಾರತವನ್ನು ಪ್ರಬುದ್ಧ ಭಾರತವನ್ನಾಗಿ ಪರಿವರ್ತಿಸುವ ಮಹಾನ ಗುರಿ ಅವರದಾಗಿತ್ತು, ತಾನು ಹಿಂದೂ ಧರ್ಮವನ್ನು ತೊರೆಯಲು ತೀರ್ಮಾನ ತೆಗೆದುಕೊಂಡ ಕೂಡಲೇ ಧರ್ಮಾಂತರವಾಗಲಿಲ್ಲ.

ಬದಲಾಗಿ 30 ವರ್ಷಗಳ ಕಾಲ ತಾಳ್ಮೆಯಿಂದ ಸಮಾಜದ ಪ್ರತಿಕ್ರಿಯೆಯನ್ನು ಗಮನಿಸುತ್ತಾ ಜಗತ್ತಿನ ಪ್ರಮುಖ ಧರ್ಮಗಳನ್ನೆಲ್ಲ ಕೂಲಂಕುಶವಾಗಿ ಪರಮಾರ್ಶಿಸುತ್ತಾ ಸೂಕ್ತವಾದ ಸಮಯಕ್ಕಾಗಿ ಕಾಯುತ್ತಿದ್ದರು, ಈ ಮಧ್ಯ ಅವಧಿಯಲ್ಲಿ ಸ್ವತಂತ್ರ ಭಾರತದ ನ್ಯಾಯ ಮಂತ್ರಿಗಳಾಗಿ ಸಂವಿಧಾನವನ್ನು ರಚಿಸಿ ದಲಿತರು ಹಿಂದುಳಿದವರು ಶೋಷಿತರು ಮತ್ತು ಸ್ತ್ರೀಯರ ವಿಮೋಚನಾ ಕಾರ್ಯವನ್ನು ಸಾಧಿಸುವಲ್ಲಿ ತಲ್ಲಿನರಾಗಿದ್ದರು, ಅಮಾನವೀಯ ದಬ್ಬಾಳಿಕೆಗೆ ಸಿಕ್ಕಿ ಜೀವಂತ ಶವಗಳಂತೆ ಬದುಕುತ್ತಿದ್ದ ಅಪಾರ ಜನ ಸಮಾಜದ ಮನದಲ್ಲಿ ನವ ಚೈತನ್ಯವನ್ನು ತುಂಬುವಂತ ಧರ್ಮ ಅವರಿಗೆ ಬೇಕಾಗಿತ್ತು, ಸರ್ವರ ಮನಸ್ಸು ಅಕ್ರಮಿಸಿಕೊಂಡಿರುವ ಅಜ್ಞಾನ ಮತ್ತು ಅಂದ ವಿಶ್ವಾಸವನ್ನು ಸಂಪೂರ್ಣವಾಗಿ ತಿಳಿಸಬಲ್ಲ ಧರ್ಮಬೇಕಾಗಿತ್ತು, ಜನರ ಹೀನಭಾವವನ್ನು ಹೋಗಲಾಡಿಸಿ ಸ್ವಾವಲಂಬನೆಯನ್ನು ಸ್ವಾಭಿಮಾನವನ್ನು ಪ್ರಚೋದಿಸುವ ಧರ್ಮಬೇಕಾಗಿತ್ತು, ವೈಚಾರಿಕ ವೈಜ್ಞಾನಿಕ ತತ್ವ ಸಿದ್ಧಾಂತಗಳನ್ನು ಬೋಧಿಸುವ ಧರ್ಮಬೇಕಾಗಿತ್ತು.

ಅದು ಶುದ್ಧ ಮಾನವೀಯ ಧರ್ಮವಾಗಿರಬೇಕು ಮತ್ತು ಅದು ಭಾರತದಲ್ಲಿ ಹುಟ್ಟಿದ ಧರ್ಮವಾಗಿರಬೇಕು, ಇಂತಹ ಎಲ್ಲಾ ಆದರ್ಶಗಳು ಬಾಬಾ ಸಾಹೇಬರು ಬೌದ್ಧ ಧರ್ಮದಲ್ಲಿ ಮಾತ್ರ ಕಂಡರು, ಜಗತ್ತಿನ ಧರ್ಮಗಳಲ್ಲಿ ವೈಜ್ಞಾನಿಕ ನೈಸರ್ಗಿಕ ತಳಹದಿಯ ಮೇಲೆ ಬೌದ್ಧ ಧರ್ಮವೊಂದೇ ಶ್ರೇಷ್ಠ ಮಾನವ ಧಮ್ಮ ವೆಂದು ಬಾಬಾ ಸಾಹೇಬರು ಅರಿತುಕೊಂಡರು, ಯಾಕೆಂದರೆ ಸಕಲ ಮಾನವರ ಕಲ್ಯಾಣವೇ ಈ ದಮ್ಮದ ಗುರಿಯಾಗಿದೆ, ಪರ್ಯಾಯವಾಗಿ ಸ್ವಾವಲಂಬನೆಯನ್ನು ಬೋಧಿಸುತ್ತದೆ ಅಂಧ ಶ್ರದ್ಧೆ ಕಂದಾಚಾರಗಳಲ್ಲಿ ಸೃಷ್ಟಿಕರ್ತ, ಆತ್ಮವನ್ನು ನಂಬಬೇಕಿಲ್ಲ, ಮಾನವರಲ್ಲಿ ಅವರು ಪವಿತ್ರ ಮಾನವರಾಗುವುದನ್ನು ಕಲಿಸುತ್ತದೆ

ಬೌದ್ಧ ಧರ್ಮವಲಂಬಿಗಳಿಗೆ ಯಾವ ವಿಧವಾದ ಬಾಹ್ಯ ಲಾಂಛನಗಳೂ ಇಲ್ಲ, ಆಂತರಿಕ ಪರಿಶುದ್ಧತೆಯ ಮುಖ್ಯ “ಸಬ್ಬಾ ಪಾಪಸ್ಯ ಅಕ೯ಣಂ ಕುಶಲಸ್ಯ ಸಂಪದಾ ಸಚ್ಚಿತ್ತಾ ಪರಿಯೋದಪನಂ ವತಾಂ ಬುದ್ಧಾನುವಾಸನಂ ” ಎಲ್ಲಾ ರೀತಿಯ ಪಾಪಕರ್ಮಗಳನ್ನು ತೊರೆದು ಬಿಡಿ, ಪುಣ್ಯ ಕರ್ಮಗಳನ್ನು ಮಾತ್ರ ಮಾಡಿ, ಪ್ರತಿಕ್ಷಣ ಪಾಪದ ಕಡೆ ಓಡುವ ನಿಮ್ಮ ಮನಸ್ಸನ್ನು ಪರಿಶುದ್ಧವಾಗಿ ಕಾಪಾಡಿಕೊಳ್ಳಿ ಎಂದು ಬುದ್ಧರು ಬೋಧಿಸಿದ್ದಾರೆ, ನಿಮಗೆ ಬೇರೆಯವರು ಏನನ್ನು ಮಾಡಬಾರದು ಎಂದು ನೀವು ಬಯಸುತ್ತೀರೋ ಅದನ್ನು ನೀವು ಬೇರೆಯವರಿಗೆ ಮಾಡಬೇಡಿ ಎಂದಿದ್ದಾರೆ, ಬುದ್ಧರು ಮೈತ್ರಿ ಕರುಣೆಗೆ ಬಹು ಪ್ರಾಮುಖ್ಯತೆಯನ್ನು ನೀಡಿದ್ದಾರೆ.

ಇಂತಹ ಅಮೋಘ ಅಂಶಗಳನ್ನು ಹೊಂದಿರುವ ಬೌದ್ಧ ಧರ್ಮವನ್ನು ಬಾಬಾ ಸಾಹೇಬರು 1956ನೇ ಅಕ್ಟೋಬರ್ 14 ರಂದು ತಮ್ಮ 5ಲಕ್ಷ ಅನ್ವಯಿಗಳೊಂದಿಗೆ ಬುದ್ಧ ಧಮ್ಮ ವನ್ನು ಸ್ವೀಕರಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ, ಬಾಬಾ ಸಾಹೇಬರು ಮೊದಲೇ ಬೌದ್ಧ ಧಮ್ಮದ ಅನೇಕ ವಿಚಾರಗಳು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದರು, ಮೂಲಭೂತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ತಾವೇ ಸ್ವತಹ ಬುದ್ಧ ಮತ್ತು ಆತನ ಧಮ್ಮ ಎಂಬ ಗ್ರಂಥ ರಚಿಸುವಲ್ಲಿ ಯಶಸ್ವಿಯಾದರು, ಮಹಾಪುರುಷರು ಯಾವಾಗಲೂ ನುಡಿದಂತೆ ನಡೆಯುತ್ತಾರೆ, ನಡೆದಂತೆ ನುಡಿಯುತ್ತಾರೆ.

ನಮ್ಮ ಪ್ರತಿಜ್ಞೆಯನ್ನು ಈಡೇರಿಸಲು ಅನ್ಯರಿಗೆ ಮಾರ್ಗದರ್ಶನ ನೀಡಲು ಅವರು ಐತಿಹಾಸಿಕವಾಗಿ ಬೌದ್ಧ ಧಮ್ಮವನ್ನು ಸ್ವೀಕರಿಸಿ ಅಮರರಾಗಿದ್ದಾರೆ,
ಬುದ್ಧ ಧಮ್ಮ ಜಗತ್ತಿನ ಮಹಾನ ಬೆಳಕು, ಅಜ್ಞಾನದ ಕತ್ತಲೆಯಿಂದ ತುಂಬಿರುವ, ಅದರಿಂದ ಮುಕ್ತರಾಗಲು ಬೌದ್ದ ಧಮ್ಮ ಸ್ವೀಕರಿಸಿ ಬೆಳಕಿನಲ್ಲಿ ಬದುಕುವುದನ್ನು ಸರ್ವರಿಗೂ ಸರಿಸಮಾನವಾಗಿ ಸ್ವಾಭಿಮಾನದಿಂದ ಬದುಕಲು ಬೌದ್ಧರಾಗಿ ಎಂದು ಬಾಬಾ ಸಾಹೇಬರು ನಮಗೆ ಅಮರ ಸಂದೇಶ ನೀಡಿದ್ದಾರೆ.

ನನ್ನ ಜೀವನವೇ ನಿಮಗೆ ನನ್ನ ಸಂದೇಶ ಎಂಬ ಬಾಬಾ ಸಾಹೇಬರ ಆಶಯದಂತೆ, ಅವರನ್ನು ಅನುಸರಿಸುವ ಮೂಲಕ ನಾವೆಲ್ಲರೂ ನಮ್ಮ ಪ್ರಸ್ತುತ ದೈನಂದಿನ ಜೀವನದಲ್ಲಿ ಪ್ರತಿಕ್ಷಣವೂ ಬುದ್ಧರ ಬಾಬಾ ಸಾಹೇಬರ ವಿಚಾರಗಳನ್ನು ಬರಿ ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಅನುಸರಣೆಗೆ ತರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ, ಪರಿವರ್ತನೆ ಎಂಬುದು ಅಷ್ಟು ಸರಳವಾಗಿ ಬರಲು ಸಾಧ್ಯವಿಲ್ಲ, ಪರಿವರ್ತನಯ ಮೊದಲೇ ಹೆಜ್ಜೆ ನಮ್ಮಿಂದಲೇ ನಮ್ಮ ನಮ್ಮ ಮನೆಯಿಂದಲೇ ಪ್ರಾರಂಭಿಸಬೇಕಾಗಿದೆ ಆದ್ದರಿಂದ ಅಕ್ಟೋಬರ್ 14ನೇ ತಾರೀಕು ದಂದು ನಡೆಯುವ ಈ ಸಮಾರಂಭದಲ್ಲಿ.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
Share This Article
error: Content is protected !!