Ad imageAd image

400 ವರ್ಷಗಳ ಇತಿಹಾಸದಲ್ಲಿಯೇ ಮೊದಲು : 11 ದಿನ ದಸರಾ ನಡೆಸಲು ತಯಾರಿ

Bharath Vaibhav
400 ವರ್ಷಗಳ ಇತಿಹಾಸದಲ್ಲಿಯೇ ಮೊದಲು : 11 ದಿನ ದಸರಾ ನಡೆಸಲು ತಯಾರಿ
WhatsApp Group Join Now
Telegram Group Join Now

ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರತಿ ವರ್ಷ 10 ದಿನಗಳ ಕಾಲ ನಡೆಯುವುದು ಪದ್ಧತಿ. ಆದರೆ ಈ ವರ್ಷ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 11 ದಿನಗಳ ಕಾಲ ನಡೆಯಲಿದೆ ಎಂಬುದು ವಿಶೇಷ. ಇದು ಮೈಸೂರು ದಸರಾದ 400 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲು.

ಪಂಚಾಂಗದ ತಿಥಿಗಳ ಪ್ರಕಾರ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಅಂದ್ರೆ 11 ದಿನಗಳ ಕಾಲ ದಸರಾ ಉತ್ಸವ ಸೆ. 24ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರೆದಿರುವ ಕಾರಣ ದಸರಾ ಮಹೋತ್ಸವ 11 ದಿನ ನಡೆಯಲಿದೆ.

ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ದಸರಾ ಆಚರಿಸಲಾಗುತ್ತದೆ. ದಸರಾ ಪರಂಪರೆ ಆರಂಭವಾಗಿ 410 ವರ್ಷ ಕಳೆದಿದೆ. 410 ವರ್ಷಗಳಿಂದಲೂ ದಸರಾ 10 ದಿನಗಳ ಕಾಲ ನಡೆದಿದೆ. ಇದೇ ಮೊದಲ ಬಾರಿಗೆ ದಸರಾ 11 ದಿನಗಳ ಕಾಲ ಬಂದಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವ ಸಾಕಷ್ಟು ವಿಶೇಷತೆ ಪಡೆದುಕೊಂಡಿದೆ. ಅಲ್ಲದೇ ಧಾರ್ಮಿಕ ಚರ್ಚೆಗೂ ಕಾರಣವಾಗಿದೆ. 11 ದಿನ ದಸರಾ ನಡೆದ ಉದಾಹರಣೆಗಳಿಲ್ಲ.

ಮಹಾಲಯ ಅಮವಾಸ್ಯೆ ಮರುದಿನದಿಂದ ನವರತರಿ ಶುರುವಾಗಿ 9 ದಿನಗಳ ಮರುದಿನ ವಿಜಯದಶಮಿ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಜಂಬೂಸವಾರು ನಡೆಯಲಿದೆ

ನೂರು ವರ್ಷಗಳ ಹಿಂದೆ 11 ದಿನಗಳ ಕಾಲ ದಸರಾ ನಡೆದಿರಬಹುದು. ಆದರೆ ನನ್ನ ಅನುಭವದಲ್ಲಿ ಇದೇ ಮೊದಲು. ಪಂಚಾಂಗದಲ್ಲಿ ಸೆ.21ರಂದು ಮಹಾಲಯ ಅಮವಾಸ್ಯೆ ಬರುತ್ತದೆ.

ಅದರ ಮಾರನೇ ದಿನ ಅಂದರೆ ಸೆ.22ರಿಂದ ಅ.2ರವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ನಡೆಯಲಿದೆ ಎಂದು ಧಾರ್ಮಿಕ ಚಿಂತಕ ಡಾ.ಶಲ್ವಪಿಳ್ಳೈ ಯ್ಯಂಗಾರ್ ವಿವರಿಸಿದ್ದಾ ರೆ..

WhatsApp Group Join Now
Telegram Group Join Now
Share This Article
error: Content is protected !!