ಪಾಟ್ನಾ: ಮುಂದಿನ ಬಿಹಾರ ಚುನಾವಣೆಯಲ್ಲಿ ಮಹಿಳಾ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲು ಪ್ರಾರಂಭಿಸಿದೆ.
ಆದರೆ ಈ ಪ್ಯಾಡ್‌ಗಳ ಪೊಟ್ಟಣದ ಮೇಲೆ ರಾಹುಲ್ ಗಾಂಧಿ ಚಿತ್ರವಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಿಯದರ್ಶಿನಿ ಉಡಾನ್ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಪ್ಯಾಡ್‌ಗಳನ್ನು ನೀಡುವುದಲ್ಲದೆ, ಮಾಸಿಕ 2500 ರೂ. ನೀಡುವ ಕಾಂಗ್ರೆಸ್‌ನ ಚುನಾವಣಾ ಪೂರ್ವ ಭರವಸೆಯನ್ನೂ ಛಾಪಿಸಲಾಗಿದೆ.
ರಾಹುಲ್ ಚಿತ್ರವನ್ನು ಪೊಟ್ಟಣಗಳಲ್ಲಿ ಬಳಸುವ ಮೂಲಕ, ಕಾಂಗ್ರೆಸ್ ಪಕ್ಷವು ಬಿಹಾರದ ಮಹಿಳೆಯರಿಗೆ ಅವಮಾನಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.