ಸೇಡಂ: ತಾಲೂಕಿನ ದುಗೂನೂರ ಸರಕಾರಿ ಪ್ರೌಢ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಎಂದು ಊಟಕ್ಕೆ ಬೇಕಾಗುವ (ತಟ್ಟೆ, ಗ್ಲಾಸ್) ಗಳನ್ನು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮೇಲೆ ಕಾಳಜಿವಹಿಸಿ ನೀಡಿದಂತಹ ವಸ್ತುಗಳು ವಿದ್ಯಾರ್ಥಿಗಳಿಗೆ ಸೇರಲೆಂದು ನಮ್ಮ ಶಾಲೆಯ ಬೆಳವಣಿಗೆಯಲ್ಲಿ ನಾವು ನಮ್ಮ ಶಾಲೆಗೆ ನಮ್ಮಿಂದ ಏನಾದರೂ ಸೇವೆ ಮಾಡಬೇಕೆಂದು ಈ ಸಂಧರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರ.ಮುಖ್ಯ ಗುರುಗಳಾದ ಚಂದ್ರಶೇಖರ ಪಸರ್ ಹಾಗೂ ಅತಿಥಿ ಶಿಕ್ಷಕರರಾದ ಶಾಮಪ್ಪ ಟಿ, ಶಿವಕುಮಾರ್, ಮೋಗಲಪ್ಪ ಸಿ, ಶ್ರೀಕಾಂತ ರೆಡ್ಡಿ ಮುನ್ನೂರು, ಮಹಿಪಾಲ್ ರೆಡ್ಡಿ, ಮೊಗಲಪ್ಪ, ಬಾಲಾಪ್ಪ, ಮಲ್ಲು ಕೇರಳ್ಳಿ, ಶರಣ ರೆಡ್ಡಿ, ದೇವಿಂದ್ರಪ್ಪ ರಮೇಶ್, ಸವಿಕುಮಾರ, ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




